ಪಾಕಿಸ್ತಾನದ ಅಭಿಮಾನಿಗೆ 9 ವರ್ಷಗಳಿಂದ ಟಿಕೆಟ್ ಕೊಡಿಸುತ್ತಿದ್ದಾರೆ ಧೋನಿ..!

Date:

2011ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಕಾದಾಡಿದ್ದವು ಈ ಪಂದ್ಯ ನಡೆದ ನಂತರ ಧೋನಿಗೆ ಕರಾಚಿಯಲ್ಲಿ ಜನಿಸಿ ಚಿಕಾಗೋದಲ್ಲಿ ನಿವಾಸಿಸುತ್ತಿರುವ ಮೊಹಮ್ಮದ್ ಬಶೀರ್ ಅವರ ಪರಿಚಯವಾಗಿತ್ತು.

‘ಚಾಚಾ ಚಿಕಾಗೋ’ ಎಂದು ಕರೆಯಲ್ಪಡುವ ಈ ಅಜ್ಜನಿಗೆ ಧೋನಿ ಪರಿಚಯವಾದಾಗಿನಿಂದಲೂ ಇಬ್ಬರ ನಡುವೆ ಉತ್ತಮ ಬಾಂದವ್ಯ ಇದೆ ಹೀಗಾಗಿ ಅಲ್ಲಿಂದ ಇಲ್ಲಿಯ ವರೆಗೂ ಭಾರತ vs ಪಾಕಿಸ್ತಾನ ಪಂದ್ಯಗಳ ವಿಶ್ವಕಪ್ ಟಿಕೆಟ್ ಅನ್ನು ‘ಚಾಚಾ ಚಿಕಾಗೋ’ಗೆ ಧೋನಿ ಕೊಡಿಸುತ್ತಾ ಬಂದಿದ್ದು ಈಗಲೂ ಸಹ ನಾಳೆ ನಡೆಯುವ ಪಂದ್ಯಕ್ಕೆ ಮೊಹಮ್ಮದ್ ಬಶೀರ್ ಗೆ ಧೋನಿ ಟಿಕೆಟ್ ಕೊಡಿಸಿದ ಸುದ್ದಿ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಪಂದ್ಯ ವೀಕ್ಷಿಸಲು ಚಿಕಾಗೋದಿಂದ ಲಂಡನ್ನಿನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂಗೆ ಬಂದಿದ್ದ ಬಶೀರ್ ಮಾದ್ಯಮಗಳೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ, ನೆನ್ನೆತಾನೆ ನಾನು ಲಂಡನ್ ತಲುಪಿದೆ ಇಲ್ಲಿ ಎಲ್ಲರೂ 70, 80 ಸಾವಿರ ರೂ ಕೊಟ್ಟು ಭಾರತ, ಪಾಕಿಸ್ತಾನ ಪಂದ್ಯದ ಟಿಕೆಟ್ ಪಡೆಯಲು ತಯಾರಿದ್ದಾರೆ ಆದರೆ ನಾನು ಟಿಕೆಟ್ ಗಾಗಿ ಪರದಾಡುವಂತಿಲ್ಲ ಯಾಕಂದ್ರೆ ಧೋನಿ ಇಗಾಗಲೆ ನನಗೆ ಟಿಕೆಟ್ ಕೊಡಿಸಿದ್ದಾರೆ ಇದಕ್ಕಾಗಿ ಧೋನಿಗೆ ನನ್ನ ಧನ್ಯವಾದಗಳು’ ಎಂದು ಬಶೀರ್ ತಿಳಿಸಿದ್ದಾರೆ.

 

ಇನ್ನು ಎರಡೂ ತಂಡಗಳ ನಡುವಿನ ಪಂದ್ಯಗಳ ವೇಳೆ ಭಾರತ-ಪಾಕಿಸ್ತಾನ ರಾಷ್ಟ್ರ ಧ್ವಜಗಳನ್ನು ಒಂದಕ್ಕೊಂದು ಅಂಟಿಸಿ ಎರಡೂ ದೇಶಗಳ ನಡುವೆ ಸಾಮರಸ್ಯದ ಸಂದೇಶ ಸಾರುತ್ತ ಬಶೀರ್ ನಿಂತಿರುತ್ತಾರೆ ಆದ್ದರಿಂದ ಬಶೀರ್ ಕಂಡರೆ ಧೋನಿಗೂ ಪ್ರೀತಿ.

 

Share post:

Subscribe

spot_imgspot_img

Popular

More like this
Related

ಕೋಗಿಲು ಅಕ್ರಮ ಮನೆ ತೆರವು ವಿಚಾರ: ಸಿಎಂ–ಡಿಸಿಎಂ ಯೂಟರ್ನ್ ಹೊಡೆದಿದ್ದಾರೆ – ವಿಜಯೇಂದ್ರ ಟೀಕೆ

ಕೋಗಿಲು ಅಕ್ರಮ ಮನೆ ತೆರವು ವಿಚಾರ: ಸಿಎಂ–ಡಿಸಿಎಂ ಯೂಟರ್ನ್ ಹೊಡೆದಿದ್ದಾರೆ –...

ಒತ್ತುವರಿ ಮಾಡಿದವರಿಗೆ ಗಿಫ್ಟ್ ಕೊಡಲು ನಾವು ತಯಾರಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಒತ್ತುವರಿ ಮಾಡಿದವರಿಗೆ ಗಿಫ್ಟ್ ಕೊಡಲು ನಾವು ತಯಾರಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರು:...

ಹುಬ್ಬಳ್ಳಿಯಲ್ಲಿ ಬಸ್–ಬೈಕ್ ಅಪಘಾತ: ಇಬ್ಬರು ದಾರುಣ ಸಾವು, ಮಗು ಗಂಭೀರ

ಹುಬ್ಬಳ್ಳಿಯಲ್ಲಿ ಬಸ್–ಬೈಕ್ ಅಪಘಾತ: ಇಬ್ಬರು ದಾರುಣ ಸಾವು, ಮಗು ಗಂಭೀರ ಹುಬ್ಬಳ್ಳಿ: ಬಸ್...

ಮುಂಬೈನಲ್ಲಿ ಬಸ್ ಅಪಘಾತ: ನಾಲ್ವರು ಸಾವು, ಒಂಬತ್ತು ಮಂದಿಗೆ ಗಾಯ

ಮುಂಬೈನಲ್ಲಿ ಬಸ್ ಅಪಘಾತ: ನಾಲ್ವರು ಸಾವು, ಒಂಬತ್ತು ಮಂದಿಗೆ ಗಾಯ ಮಹಾರಾಷ್ಟ್ರ: ಮಹಾರಾಷ್ಟ್ರದ...