ಪಾಕ್ ಕ್ರಿಕೆಟಿಗನಿಗೆ ಗಿಫ್ಟ್ ಕೊಟ್ಟ ಧೋನಿ

Date:

ಭಾರತ ಕ್ರಿಕೆಟ್ ತಂಡ (Indian Cricket Team) ಕಂಡಂತಹ ಅತ್ಯಂತ ಯಶಸ್ವಿ ನಾಯಕ, ಕ್ಯಾಪ್ಟನ್‌ ಕೂಲ್‌ ಎಂ.ಎಸ್‌. ಧೋನಿ(MS Dhoni) ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳು ಇದ್ದಾರೆ. ಇನ್ನು ನೆರೆಯ ಪಾಕಿಸ್ತಾನದಲ್ಲೂ ಧೋನಿಗೆ ಸಾಕಷ್ಟು ಫ್ಯಾನ್ಸ್‌ ಇದ್ದಾರೆ.

ಕಲೆ, ಕ್ರೀಡೆಗೆ ಜಾತಿ-ಧರ್ಮ ಹಾಗೂ ಗಡಿಯ ಹಂಗಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಇದೀಗ ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾರಕ ವೇಗಿ ಹ್ಯಾರಿಸ್ ರೌಫ್‌ ಅವರ ಬಹುದಿನದ ಕನಸೊಂದು ನನಸಾಗಿದೆ. ತಮ್ಮ ಹಸ್ತಾಕ್ಷರವುಳ್ಳ ಜೆರ್ಸಿ ನೀಡಿದ್ದಕ್ಕೆ ಭಾರತದ ಮಾಜಿ ಹಾಗೂ ಐಪಿಎಲ್‌ನ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ನಾಯಕ ಎಂ.ಎಸ್‌.ಧೋನಿಗೆ ಪಾಕಿಸ್ತಾನದ ವೇಗದ ಬೌಲರ್‌ ಹ್ಯಾರಿಸ್‌ ರೌಫ್‌(Haris Rauf) ಧನ್ಯವಾದ ತಿಳಿಸಿದ್ದಾರೆ.

ಶುಕ್ರವಾರ ಧೋನಿಯ ಚೆನ್ನೈ ತಂಡದ ಜೆರ್ಸಿಯ ಫೋಟೋ ಟ್ವೀಟ್‌ ಮಾಡಿದ ಹ್ಯಾರಿಸ್ ರೌಫ್‌, ‘ದಿಗ್ಗಜ ನಾಯಕ ಧೋನಿ ತಮ್ಮ ಹಸ್ತಾಕ್ಷರವಿರುವ ಜೆರ್ಸಿಯನ್ನು ನನಗೆ ಉಡುಗೊರೆ ನೀಡಿದ್ದಾರೆ. ‘ನಂ.7′ ಈಗಲೂ ವಿಶೇಷ ಕಾರ‍್ಯಗಳ ಮೂಲಕ ಜನರ ಹೃದಯ ಗೆಲ್ಲುತ್ತಿದೆ’ ಎಂದು ಬರೆದಿದ್ದಾರೆ.

ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್‌ಗೆ ಧೋನಿ ಎದುರು ಆಡುವ ಅವಕಾಶ ಸಿಕ್ಕಿರಲಿಲ್ಲ. ಕಳೆದ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್(ICC T20 World Cup) ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ರೌಫ್‌ ಮಾರಕ ದಾಳಿ ನಡೆಸೆ ಗಮನ ಸೆಳೆದಿದ್ದರು. ಆ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಟೀಂ ಇಂಡಿಯಾ(Team India) 10 ವಿಕೆಟ್‌ಗಳ ಸೋಲು ಕಂಡು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ವಿಶ್ವಕಪ್ ಇತಿಹಾಸದಲ್ಲಿ ಮೊದಲ ಭಾರಿಗೆ ಟೀಂ ಇಂಡಿಯಾ ನೆರೆಯ ಪಾಕಿಸ್ತಾನ ಎದುರು ಮುಗ್ಗರಿಸಿತ್ತು.

 

 

ಮಹೇಂದ್ರ ಸಿಂಗ್ ಧೋನಿ 2020ರ ಆಗಸ್ಟ್ 15ರಂದು ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರೂ ಸಹಾ, ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಮುಂಬರುವ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿಯು ತಮ್ಮ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು 12 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿದೆ.

ಇನ್ನೊಂದೆಡೆ ಹ್ಯಾರಿಸ್ ರೌಫ್ ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್‌ಬ್ಯಾಶ್ ಲೀಗ್ (Big Bash League) ಟೂರ್ನಿಯಲ್ಲಿ ಮೆಲ್ಬೊರ್ನ್ ಸ್ಟಾರ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಮೆಲ್ಬೊರ್ನ್‌ ಸ್ಟಾರ್ಸ್‌ ತಂಡದ ಪರ 2 ಪಂದ್ಯಗಳನ್ನಾಡಿ ಮೂರು ವಿಕೆಟ್ ಪಡೆದಿದ್ದಾರೆ. ಸದ್ಯ ಮೆಲ್ಬೊರ್ನ್ ಸ್ಟಾರ್ಸ್‌ ತಂಡವು 8 ಪಂದ್ಯಗಳನ್ನಾಡಿ ಕೇವಲ 3 ಗೆಲುವಿನೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಕಡೆಯ ಸ್ಥಾನದಲ್ಲಿದೆ.

 

 

Share post:

Subscribe

spot_imgspot_img

Popular

More like this
Related

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು!

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು! ಬೆಂಗಳೂರು: ಬಾಲಿವುಡ್...

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಬೆಂಗಳೂರು:...

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ ಹೈದರಾಬಾದ್:...

ಮಹಿಳೆಯರಿಗೆ ಉಪಕಾರ ಸ್ಮರಣೆ ಇದೆ ಎಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ: ಡಿ.ಕೆ.ಶಿವಕುಮಾರ್

ಮಹಿಳೆಯರಿಗೆ ಉಪಕಾರ ಸ್ಮರಣೆ ಇದೆ ಎಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ:...