ಪಾದಯಾತ್ರೆಗೆ ನಾವು ಬರಲ್ಲ: ಬಿಜೆಪಿ ವಿರುದ್ಧ ರೊಚ್ಚಿಗೆದ್ದ HD ಕುಮಾರಸ್ವಾಮಿ

Date:

 

ನವದೆಹಲಿ: ಮೂಡಾ ಮತ್ತು ವಾಲ್ಮೀಕಿ ಹಗರಣ ವಿರುದ್ಧವಾಗಿ ಬಿಜೆಪಿ ಹಮ್ಮಿಕೊಂಡಿದ್ದ ಪಾದಯಾತ್ರೆ ಕುರಿತಂತೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ದೆಹಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಪಾದಯಾತ್ರೆ ವಿಚಾರದಲ್ಲಿ ನಮ್ಮನ್ನು (ಜೆಡಿಎಸ್) ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ಅದಕ್ಕೆ ನಮ್ಮ ಬೆಂಬಲವಿಲ್ಲ ಎಂದರು. ಪಾದಯಾತ್ರೆಗೆ ಬೆಂಬಲ ನೀಡದೇ ಇರುವ ಬಗ್ಗೆ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರು ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಕೇರಳದಲ್ಲಿ ಮಳೆಯಿಂದ ನೂರಾರು ಜನರ ಜೀವಕ್ಕೆ ಹಾನಿಯಾಗಿದೆ. ರಾಜ್ಯದಿಂದ ಹೋದವರು ವಾಪಸ್ ಬರಲು ಸಮಸ್ಯೆ ಎದುರಿಸುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಯೆಲ್ಲೋ, ರೆಡ್ ಅಲರ್ಟ್ ಘೋಷಣೆ ಆಗಿದೆ. ಮತ್ತೊಂದೆಡೆ, ಈಗ ಎಲ್ಲರೂ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸುವ ಸಮಯ. ಹೀಗಾಗಿ ಪಾದಯಾತ್ರೆಯಲ್ಲಿ ಜೆಡಿಎಸ್ ಭಾಗವಹಿಸುವುದಿಲ್ಲ ಎಂದು ಅವರು ತಿಳಿಸಿದರು.
ಬಿಜೆಪಿಯ ಪಾದಯಾತ್ರೆ ಬಗ್ಗೆ ಅವರೇ ತೀರ್ಮಾನ ತೆಗೆದುಕೊಂಡು ಮಾಡುತ್ತಿದ್ದಾರೆ. ಈ ಸಮಯದಲ್ಲಿ ಪಾದಯಾತ್ರೆ ಸೂಕ್ತವಲ್ಲ ಎಂಬುದು ನಮ್ಮ ನಿಲುವು. ಹೀಗಾಗಿ ಅದರಿಂದ ಹಿಂದೆ ಸರಿದಿದ್ದೇವೆ. ಆ ಭಾಗದ ಜನರ ಭಾವನೆ ಮುಖ್ಯ. ಹಾಗಾಗಿ ಪಾದಯಾತ್ರೆಯಲ್ಲಿ ಭಾಗಿಯಾಗಲ್ಲ ಎಂದು ಕುಮಾರಸ್ವಾಮಿ ಹೇಳಿದರು.

Share post:

Subscribe

spot_imgspot_img

Popular

More like this
Related

ಟೆಕ್ಸಾಸ್‌ನಲ್ಲಿ 300 ಬಿಲಿಯನ್ ಡಾಲರ್ ತೈಲ ಸಂಸ್ಕರಣಾ ಘಟಕ: ರಿಲಯನ್ಸ್ ಹೂಡಿಕೆ ಘೋಷಿಸಿದ ಟ್ರಂಪ್

ಟೆಕ್ಸಾಸ್‌ನಲ್ಲಿ 300 ಬಿಲಿಯನ್ ಡಾಲರ್ ತೈಲ ಸಂಸ್ಕರಣಾ ಘಟಕ: ರಿಲಯನ್ಸ್ ಹೂಡಿಕೆ...

ಬೇಸಿಗೆಯಲ್ಲಿ ಸೋಂಪು ನೀರು ಕುಡಿಯುವ ಅಭ್ಯಾಸ ಮಾಡಿ: ಸಿಗುವ ಆರೋಗ್ಯ ಲಾಭಗಳು ತಿಳಿದಿರಲಿ

ಬೇಸಿಗೆಯಲ್ಲಿ ಸೋಂಪು ನೀರು ಕುಡಿಯುವ ಅಭ್ಯಾಸ ಮಾಡಿ: ಸಿಗುವ ಆರೋಗ್ಯ ಲಾಭಗಳು...

ದೇಶದಲ್ಲಿ ಪೆಟ್ರೋಲ್-ಡೀಸೆಲ್ ಸಮಸ್ಯೆ ಇಲ್ಲ, ಎಲ್‌ಪಿಜಿ ಪೂರೈಕೆ ಶೀಘ್ರ ಆರಂಭ: ಬಸವರಾಜ ಬೊಮ್ಮಾಯಿ

ದೇಶದಲ್ಲಿ ಪೆಟ್ರೋಲ್-ಡೀಸೆಲ್ ಸಮಸ್ಯೆ ಇಲ್ಲ, ಎಲ್‌ಪಿಜಿ ಪೂರೈಕೆ ಶೀಘ್ರ ಆರಂಭ: ಬಸವರಾಜ...

LPG ಕೊರತೆ ಹೊಡೆತ: ಮುಂಬೈಯಲ್ಲಿ 20% ಹೋಟೆಲ್‌ಗಳು ಬಂದ್, ಇನ್ನೂ 50% ಮುಚ್ಚುವ ಭೀತಿ

LPG ಕೊರತೆ ಹೊಡೆತ: ಮುಂಬೈಯಲ್ಲಿ 20% ಹೋಟೆಲ್‌ಗಳು ಬಂದ್, ಇನ್ನೂ 50%...