ಪಿಜಿಯಲ್ಲಿ ಯುವತಿ ಕೊಲೆ: ಬೆಂಗಳೂರಿನಲ್ಲಿ ಖಾಕಿ ಫುಲ್ ಅಲರ್ಟ್, ಕಠಿಣ ನಿಯಮ ಜಾರಿ!

Date:

 

ಬೆಂಗಳೂರು:- ಇತ್ತೀಚೆಗೆ ಪಿಜಿಯಲ್ಲಿ ನಡೆದ ಯುವತಿ ಕೊಲೆ ಪ್ರಕರಣದ ಬೆನ್ನಲ್ಲೇ ಖಾಕಿ ಫುಲ್ ಅಲರ್ಟ್ ಆಗಿದೆ. ನಗರದ ಎಲ್ಲಾ ಪಿಜಿಗಳ ಡೇಟಾ ಸಂಗ್ರಹಿಸುವಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಸೂಚನೆ ನೀಡಿದ್ದಾರೆ.

ನಗರದ ಎಲ್ಲಾ ಠಾಣೆಯ ಪೊಲೀಸ್ ಇನ್ಸ್​​​ಪೆಕ್ಟರ್​​ಗಳಿಗೆ ನಗರ ಪೊಲೀಸ್ ಆಯುಕ್ತ ದಯಾನಂದ್ ಸೂಚನೆ‌ ನೀಡಿದ್ದು, ಪ್ರತಿಯೊಂದು ಪಿಜಿಯ ಮಾಹಿತಿ ಪಡೆಯಲು ಮುಂದಾಗಿದ್ದಾರೆ. ಎಲ್ಲಾ ಪಿಜಿಗಳ ಗುರುತಿಸುವುದರ ಜೊತೆಗೆ ಪಿಜಿಯವರು ಪಾಲಿಸಬೇಕಾದ ಹಾಗೂ ಪೊಲೀಸರು ಕ್ರಮಕೈಗೊಳ್ಳಬೇಕಾದ ಒಟ್ಟು 13 ಅಂಶಗಳ ಮಾರ್ಗಸೂಚಿ ನೀಡಿದ್ದಾರೆ.

ಪಿಜಿಗಳಿಗೆ ಮಾರ್ಗಸೂಚಿ:-

ಪಿಜಿಗಳಲ್ಲಿ ಮುಖ್ಯವಾಗಿ ಸಿಸಿಟಿವಿ ಅಳವಡಿಸಬೇಕು.
ಪಿಜಿಗಳಲ್ಲಿ ಸೆಕ್ಯೂರಿಟಿ ಗಾರ್ಡ್ ನಿಯೋಜನೆ ಮಾಡಬೇಕು.
ಪಿಜಿಯಲ್ಲಿ ವಾಸ ಮಾಡುವ ಪ್ರತಿಯೊಬ್ಬರ ಡೇಟಾ ಕಲೆಕ್ಟ್ ಮಾಡಬೇಕು.
ಪಿಜಿಯಲ್ಲಿ ವಾಸಿಸುವವರ ಕೆವೈಸಿ ಮಾಡಿಸಬೇಕು.
ಹೊಸದಾಗಿ ಜಾರಿಗೆ ತಂದಿರೋ ಸಾಫ್ಟ್​​ವೇರ್​​ನಲ್ಲಿ ಎಲ್ಲಾ ಮಾಹಿತಿ ಅಪ್ಲೋಡ್ ಮಾಡಬೇಕು.
ಮಾಲೀಕರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು.
ಆಹಾರದ ಗುಣಮಟ್ಟದ ಬಗ್ಗೆ ಮಾಲೀಕರು ಗಮನಹರಿಸಬೇಕು.
ಪಿಜಿಗಳ ಟ್ರೇಡ್ ಲೆಸೆನ್ಸ್​​ಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಬೇಕು.
ಅನಧಿಕೃತ ಎಂದು ಕಂಡು ಬಂದ್ರೆ ಬಿಬಿಎಂಪಿಗೆ ಮಾಹಿತಿ ನೀಡಬೇಕು.
ಅಕ್ರಮ ,ಅನೈತಿಕ ಚಟುವಟಿಕೆ ನಡೆಯುತ್ತಿದ್ರೆ, ಮಾಹಿತಿ ಕಲೆ ಹಾಕಬೇಕು.
ಬಿಬಿಎಂಪಿ ಅಧಿಕಾರಿಗಳ ಜೊತೆ ಸೇರಿ ಕೇಸ್ ದಾಖಲಿಸುವುದು.
ತಿಂಗಳಿಗೊಮ್ಮೆ ಆಯಾ ಠಾಣಾ ವ್ಯಾಪ್ತಿಯಲ್ಲಿ ಪಿಜಿಗಳ ಪರಿಶೀಲನೆ ಮಾಡಬೇಕು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು.

ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಪರಿಶೀಲನೆಗೆ ಮುಂದಾದ ಪೊಲೀಸರಿಗೆ ನಗರದಲ್ಲಿ ಅನಧಿಕೃತ ಪಿಜಿಗಳು ಹೆಚ್ಚಾಗಿರುವುದು ಗೊತ್ತಾಗಿದೆ. ಇದು ಬಿಬಿಎಂಪಿಯ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹುಟ್ಟಿಕೊಂಡಿರುವ ಪಿಜಿಗಳಾಗಿದ್ದು, ಇದರ ಸಂಬಂಧ ಬಿಬಿಎಂಪಿಗೆ ಮಾಹಿತಿ ನೀಡಲು ಪೊಲೀಸರು ಮುಂದಾಗಿದ್ದಾರೆ.

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ ಬೆಂಗಳೂರು:...

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ ಬಳಕೆ – ರಾಹುಲ್ ಆರೋಪ

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ...