ಪಿರಿಯಡ್ಸ್ ಸಮಯದಲ್ಲಿ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು? ಇಲ್ಲಿದೆ ಉತ್ತರ
ಮಹಿಳೆಯರ ಋತುಚಕ್ರ (Menstrual Cycle) ಸಮಯವು ದೈಹಿಕ ಹಾಗೂ ಮಾನಸಿಕವಾಗಿ ಸವಾಲಿನ ಸಂದರ್ಭ. ಈ ದಿನಗಳಲ್ಲಿ ಆಯಾಸ, ತಲೆತಿರುಗುವಿಕೆ, ದೌರ್ಬಲ್ಯ, ಕಿರಿಕಿರಿ ಮತ್ತು ನೋವಿನ ಅನುಭವ ಸಾಮಾನ್ಯ. ಇಂತಹ ಸಂದರ್ಭದಲ್ಲಿ ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸುವ ಹಾಗೂ ಹಾರ್ಮೋನು ಸಮತೋಲನ ಕಾಪಾಡುವ ಪೌಷ್ಟಿಕ ಆಹಾರಗಳು ಅಗತ್ಯವೆಂದು ತಜ್ಞರು ತಿಳಿಸಿದ್ದಾರೆ.
ಪಿರಿಯಡ್ಸ್ ಸಮಯದಲ್ಲಿ ಸೇವಿಸುವ ಆಹಾರವು ನೋವಿನ ತೀವ್ರತೆ, ಶಕ್ತಿಮಟ್ಟ ಮತ್ತು ಮನೋಭಾವದ ಮೇಲೆ ನೇರ ಪರಿಣಾಮ ಬೀರುತ್ತದೆ. ಮಹಿಳೆಯರು ದಿನನಿತ್ಯದ ಕೆಲಸಗಳ ಜೊತೆಗೆ ದೈಹಿಕ ತೊಂದರೆಗಳನ್ನೂ ನಿರ್ವಹಿಸಬೇಕಾಗಿರುವುದರಿಂದ ಸರಿಯಾದ ಆಹಾರ ಸೇವನೆ ಅತ್ಯಂತ ಮುಖ್ಯವಾಗಿದೆ.
ನೆಲ್ಲಿಕಾಯಿ (Amla)
ವಿಟಮಿನ್ ಸಿ ಸಮೃದ್ಧವಾಗಿರುವ ನೆಲ್ಲಿಕಾಯಿ ದೇಹವನ್ನು ಒಳಗಿನಿಂದ ಬಲಪಡಿಸುತ್ತದೆ.
ಹಾರ್ಮೋನುಗಳ ಸಮತೋಲನಕ್ಕೆ ನೆರವಾಗುತ್ತದೆ
ರಕ್ತಶುದ್ಧೀಕರಣಕ್ಕೆ ಸಹಾಯಕ
ಚರ್ಮ ಮತ್ತು ಕೂದಲು ಆರೋಗ್ಯಕರವಾಗಿರಲು ನೆರವಾಗುತ್ತದೆ
ಇದನ್ನು ಕಚ್ಚಾ, ರಸವಾಗಿ, ಪುಡಿಯಾಗಿ ಅಥವಾ ಸಂರಕ್ಷಿತ ರೂಪದಲ್ಲಿ ಸೇವಿಸಬಹುದು.
ಖರ್ಜೂರ (Dates)
ತ್ವರಿತ ಶಕ್ತಿ ನೀಡುವ ಈ ಆಹಾರ, ಮುಟ್ಟಿನ ಸಮಯದ ದೌರ್ಬಲ್ಯಕ್ಕೆ ಅತ್ಯಂತ ಪರಿಣಾಮಕಾರಿ.
ಬೆಳಿಗ್ಗೆ 2–3 ಖರ್ಜೂರ ಸೇವನೆ ಶಕ್ತಿಯನ್ನು ಹೆಚ್ಚಿಸುತ್ತದೆ
ಕಬ್ಬಿಣದ ಕೊರತೆಯನ್ನು ಕಡಿಮೆ ಮಾಡಲು ಸಹಾಯಕ
ರಕ್ತಹೀನತೆ, ದೌರ್ಬಲ್ಯ ಮತ್ತು ಆಯಾಸದಿಂದ ರಕ್ಷಣೆ
ಎಳ್ಳು (Sesame Seeds)
ಎಳ್ಳಿನಲ್ಲಿ ಇರುವ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ನೋವನ್ನು ಕಡಿಮೆ ಮಾಡಿ ಸ್ನಾಯುಗಳನ್ನು ಬಲಪಡಿಸುತ್ತದೆ.
ಮುಟ್ಟಿನ ಚಕ್ರಕ್ಕೆ 15 ದಿನಗಳ ಮೊದಲು ದಿನಕ್ಕೆ 1 ಟೀ ಚಮಚ ಹುರಿದ ಎಳ್ಳು
ಮುಟ್ಟಿನ ನೋವು, ತಲೆ ತಿರುಗುವಿಕೆ ಕಡಿಮೆ
ಮೂಳೆಗಳಿಗೆ ಬಲ
ತೆಂಗಿನಕಾಯಿ (Coconut)
ದೆಹಕ್ಕೆ ತಂಪು ಮತ್ತು ಪೋಷಣೆಯನ್ನು ನೀಡುವ ಮುಖ್ಯ ಆಹಾರ.
ದೌರ್ಬಲ್ಯ ಕಡಿಮೆ
ತೆಂಗಿನ ನೀರು, ತಾಜಾ ತೆಂಗಿನಕಾಯಿ ಉಪಯುಕ್ತ
ಥೈರಾಯ್ಡ್ ಮತ್ತು ಮೂಳೆಗಳಿಗೆ ಸಹಕಾರಿ
ಕಪ್ಪು ಒಣದ್ರಾಕ್ಷಿ (Black Raisins)
ರಕ್ತದ ಗುಣಮಟ್ಟ ಸುಧಾರಿಸಲು ಉತ್ತಮ.
ಬೆಳಿಗ್ಗೆ 10–12 ನೆನೆಸಿದ ಕಪ್ಪು ಒಣದ್ರಾಕ್ಷಿ ಸೇವನೆ ಪ್ರಯೋಜನಕಾರಿ
ಕಬ್ಬಿಣದ ಮಟ್ಟ ಹೆಚ್ಚಿಸಿ ಶಕ್ತಿ ನೀಡುತ್ತದೆ
ಚರ್ಮಕ್ಕೆ ಕಾಂತಿಯುತ
ಶುಂಠಿ, ಬಾಳೆಹಣ್ಣು, ಹಸಿರು ತರಕಾರಿ, ಮೊಸರು, ಡಾರ್ಕ್ ಚಾಕೊಲೇಟ್ ಮತ್ತು ಸೀಡ್ಸ್ ಗಳ ಸೇವನೆಯೂ ಮುಟ್ಟಿನ ನೋವು ಕಡಿಮೆ ಮಾಡಿ ದೇಹಕ್ಕೆ ಅಗತ್ಯ ಪೋಷಣೆಯನ್ನು ಒದಗಿಸುತ್ತದೆ.






