ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ
‘ಪಿಆರ್‌ಕೆ’ ನಿರ್ಮಾಣ ಸಂಸ್ಥೆ’
ಇತ್ತೀಚಿನ ಎಲ್ಲಾ ಹೊಸಬರ ಸಿನಿಮಾ ಪಿ ಆರ್ ಕೆ ಸಂಸ್ಥೆಯದ್ದಾಗಿದೆ,
ಪುನೀತ್ ರಾಜ್ ಕುಮಾರ್ ಅವರು ಮೀಡಿಯಾದ ಮುಂದೆ ಹೀಗೆಂದು ಹೇಳಿದ್ದಾರೆ .
ನಿಜ ಹೇಳಬೇಕು ಅಂದರೆ ನಾನು ಇಲ್ಲಿ ಹಾಜರಿ ಅಷ್ಟೆ. ಎಲ್ಲವನ್ನೂ ನೋಡಿಕೊಳ್ಳುವುದು ನನ್ನ ಪತ್ನಿ ಅಶ್ವಿನಿ ಅವರು. ಅವರ ಕನಸು ಇದು. ಹೊಸಬರಿಗೆ ಅವಕಾಶ ಸಿಗಬೇಕು, ಅವರ ಚಿತ್ರಗಳು ಪ್ರೇಕ್ಷಕರ ಮುಂದೆ ಬರಬೇಕು ಎಂದು ನಿರ್ಮಾಣ ಸಂಸ್ಥೆ ಶುರು ಮಾಡಿದ್ದು ಎಂದು ಹೇಳಿದ್ದಾರೆ .
ನಮ್ಮ ಸಂಸ್ಥೆಯಲ್ಲಿ ನೂರು ಸಿನಿಮಾ ನಿರ್ಮಾಣ ಮಾಡಬೇಕೆಂಬ ಆಸೆ ಇದೆ.ಎಂದು ಹೇಳಿದ್ದಾರೆ ಸಿನಿಮಾ ಬಿಡುಗಡೆ ಮಾಡಲು ಸ್ವಲ್ಪ ಸಮಯವಾಗುತ್ತದೆ ಆದರೂ ತಡವಾಗಿ ಬಂದರೂ ಒಳ್ಳೆಯ ಪ್ರಯತ್ನದಿಂದ ಬರುತ್ತೇವೆ ಎಂದು ಹೇಳಿದರು,ನಿಜ ಹೇಳಬೇಕು ಅಂದರೆ ಅದಕ್ಕೆ ಕಾರಣ ಏನೂ ಅಂತ ನನಗೂ ಗೊತ್ತಾಗುತ್ತಿಲ್ಲ. ಆದರೆ, ಸುಖಾಸುಮ್ಮನೆ ಅಂತ ನಾವು ತಡ ಮಾಡುತ್ತಿಲ್ಲ. ಒಂದಿಷ್ಟು ತಾಂತ್ರಿಕ ಕೆಲಸಗಳು ಬೇರೆ ಬೇರೆ ದೇಶಗಳಲ್ಲಿ ಮಾಡಿಸಲಾಯಿತು. ಮೇಕಿಂಗ್‌ಗೆ ಹೆಚ್ಚು ಸಮಯ ಬೇಕಿತ್ತು.
ಎಲ್ಲಾ ಕಡೆ ಈಗ ಡಿಜಿಟಲ್ ಮಾರುಕಟ್ಟೆಯ ಪ್ರಭಾವ ಹೆಚ್ಚಾಗಿದೆ ಮಲ್ಟಿಫ್ಲೆಕ್ಸ್ ಸಂಸ್ಕೃತಿ. ಮನೆಯಲ್ಲೇ ಕೂತು ನೆಟ್‌ಪ್ಲಿಕ್ಸ್, ಅಮೆಜಾನ್ ಪ್ರೈಮ್‌ನಲ್ಲಿ ಸಿನಿಮಾ ನೋಡುತ್ತಿರುವ ಕಾಲ ಇದು ನಾವು ಥಿಯೇಟರ್‌ಗಳ ಮುಂದೆ ನಿಂತಿದ್ದೇವೆ.
ನನ್ನ ಪ್ರಕಾರ ಡಿಜಿಟಲ್ ಮಾರುಕಟ್ಟೆಯನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಒಂದಿಷ್ಟು ಯೋಚನೆಗಳಿವೆ.
ನಿಮ್ಮ ನಿರ್ಮಾಣದ ಕವಲುದಾರಿ ಸಿನಿಮಾವನ್ನು ಅಮೆಜಾನ್ ಗೆ ಮಾರಾಟ ಮಾಡಿದ್ದೇವೆ .
ನನ್ನ ಅಭಿಮಾನಿಗಳ ನಿರೀಕ್ಷೆಯನ್ನು ಮುಟ್ಟಲು ನನ್ನು ಒಳ್ಳೊಳ್ಳೆ ಸಿನಿಮಾಗಳನ್ನು ನನ್ನ ನಿರ್ಮಾಣದಲ್ಲಿ ಮಾಡುತ್ತೇನೆ .
ಹೊಸಬರಿಗೆ ಅವಕಾಶ ಕೊಡಬೇಕೆಂದು ತಮ್ಮ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣ ಮಾಡುತ್ತಿದ್ದೆವೆ.