ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಹಿನ್ನೆಲೆಯಲ್ಲಿ ರಾಜ್ಯದ ಹಲವು ಭಾಗದಲ್ಲಿ 144 ಸೆಕ್ಷನ್ ಜಾರಿಯಾಗಿದೆ. ಈ ಕಾಯ್ದೆ ವಿರೋಧಿಸಿ ಒಂದಿಷ್ಟು ಸಂಘಟನೆಗಳು ಪ್ರತಿಭಟನೆ ನೆಡೆಸಿದ್ದವು ಪೋಲಿಸರು ಹಾಗು ಪ್ರತಿಭಟನಾಕಾರರ ನಡುವೇ ಮಾತಿನ ಚಕಮಕಿ ನೆಡೆದು ನಂತರ ಅವರನ್ನು ಸ್ಥಳದಿಂದ ಕಳುಹಿಸಲಾಯಿತು ಹಾಗೆ ಪ್ರತಿಭಟನೆ ನೆಡೆಯುವ ವೇಳೆ ಕೆಲವು ಪ್ರಮುಕರನ್ನು ಪೋಲಿಸರು ವಶಕ್ಕೆ ಪಡೆದುಕೊಂಡು ನಂತರ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ .
ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಭುಗಿಲೆದ್ದಿರುವ ಪ್ರತಿರೋಧವನ್ನು ದಮನಿಸಲು ನಿಷೇಧಾಜ್ಞೆ ಹೇರಿರುವ ಪುಕ್ಕಲು ರಾಜ್ಯ ಸರ್ಕಾರ ಜನಶಕ್ತಿಗೆ ಹೆದರಿದೆ ಎಂದು ಟ್ವೀಟ್ ಮಾಡಿದ್ದಾರೆ ಎನ್ನಲಾಗುತ್ತಿದೆ .ಈ ಮೂಲಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರಕ್ಕೆ ಟೀಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ .