ಪುನೀತ್ ಗೆ 3 ನೇ ಬಾರಿ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ ಸಂತೋಷ್

Date:

‘ರಾಜಕುಮಾರ’, ‘Mr & Mrs. ರಾಮಾಚಾರಿ’, ‘ಯುವರತ್ನ’ ಸಿನಿಮಾದ ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಕೊನೆಗೂ ತಮ್ಮ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ. ಡಿಸೆಂಬರ್​ನಲ್ಲಿ ನ್ಯೂಸ್​ ಫಸ್ಟ್​​ ನೀಡಿದ್ದ ಎಕ್ಸ್​ಕ್ಲೂಸಿವ್​ ಮಾಹಿತಿ ಪ್ರಕಾರ, ಸಂತೋಷ್​ ಆನಂದ್​ರಾಮ್​ ತಮ್ಮ ನೆಕ್ಸ್ಟ್​ ಸಿನಿಮಾವನ್ನೂ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಜೊತೆ ಮಾಡಲು ಹೊರಟಿದ್ದಾರೆ. ಯೆಸ್​.. ಮತ್ತೊಮ್ಮೆ ಆನಂದ್​ರಾಮ್​-ಪುನೀತ್​ ಜೋಡಿ ಒಂದಾಗಲಿದೆ. ಅಂದ್ಹಾಗೇ, ಇವರಿಗೆ ಮತ್ತೆ ಜೊತೆಯಾಗ್ತಿರೋದು ಹೊಂಬಾಳೆ ಫಿಲ್ಮ್ಸ್​ ವಿಜಯ್​ ಕಿರಗಂದೂರ್​.

ವಿಜಯ್​ ಕಿರಗಂದೂರ್​ ಹೊಂಬಾಳೆ ಫಿಲ್ಮ್ಸ್​ ಸಂಸ್ಥೆ, ಈಗಾಗಲೇ ಸಂತೋಷ್​ ಆನಂದ್​ರಾಮ್​ ‘ರಾಜಕುಮಾರ’ ಹಾಗೂ ‘ಯುವರತ್ನ’ ಸಿನಿಮಾಗಳಿಗೆ ಹೂಡಿಕೆ ಮಾಡಿದ್ದಾರೆ. ಇದೀಗ ಮುಂದಿನ ಸಿನಿಮಾಗೂ ಬಂಡವಾಳ ಹೂಡಲಿದ್ದು, ಮೂರನೇ ಬಾರಿಗೆ ಈ ತ್ರಿವಳಿಗಳ ಸಂಗಮ ಆಗಲಿದೆ.

ಇನ್ನು ಈ ಬಗ್ಗೆ ಸ್ವತಃ ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಟ್ವೀಟ್​ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್​ ನೀಡಿದ್ದಾರೆ. ‘ಯುವರತ್ನ’ ರಿಲೀಸ್​ಗೂ ಮುಂಚೆಯೇ ಈ ನಿರ್ದೇಶಕರು ಈ ಸುದ್ದಿ ನೀಡಿರೋದು ವಿಶೇಷ. ‘ಬಹಳ ಜನ ನನ್ನ ಮುಂದಿನ ಸಿನಿಮಾ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ಜೊತೆನಾ ಅಂತ ಕೇಳ್ತಿದ್ರಿ.. ಹೌದು, ನಾನು ನನ್ನ ಮುಂದಿನ ಸಿನಿಮಾವನ್ನ ಮತ್ತೆ ನನ್ನ ಐಕಾನ್​ ಪುನೀತ್​ ರಾಜ್​ಕುಮಾರ್​ ಜೊತೆ ಮಾಡಲಿದ್ದೇನೆ. ಅವರ ಜೊತೆ ಮೂರನೇ ಬಾರಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಿಮ್ಮೆಲ್ಲರ ಹಾರೈಕೆ, ಆಶೀರ್ವಾದ ನನ್ನ ಮೇಲಿರಲಿ’ ಅಂತ ಬರೆದು ಅಭಿಮಾನಿಗಳಿಗೆ ಸೂಪರ್​ ನ್ಯೂಸ್​ ನೀಡಿದ್ದಾರೆ.

 

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...