ನಟ ಪುನೀತ್ ರಾಜ್ ಕುಮಾರ್ ( Puneet Rajkumar ) ಅಭಿಮಾನಿಗಳಾಗಿದ್ದಂತ ಇಬ್ಬರು ಯುವಕ, ಯುವತಿಯರು, ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದರು. ಹೀಗೆ ಪ್ರೀತಿಸುತ್ತಿದ್ದಂತ ಯುವಕ, ಯುವತಿಯರು ಇದೀಗ ನಟ ಪುನೀತ್ ರಾಜ್ ಕುಮಾರ್ ಸಮಾಧಿಯ ಮುಂದೆಯೇ ನೂತನ ದಾಂಪತ್ಯಕ್ಕೆ ಕಾಲಿಡೋದಕ್ಕೆ ತಯಾರಿ ನಡೆಸಿದ್ದಾರೆ.
ಇದಕ್ಕಾಗಿ ದೊಡ್ಮನೆಯವರನ್ನು ಕೋರಿದ್ದು, ಇವರಿಗೆ ಅನುಮತಿ ನೀಡಿದ್ದಾಗಿಯೂ ತಿಳಿದು ಬಂದಿದೆ.
ನಟ ಪುನೀತ್ ರಾಜ್ ಕುಮಾರ್ ನಿಧರಾಗಿ ಇಂದಿಗೆ 9ನೇ ದಿನಕ್ಕೆ ಕಾಲಿಟ್ಟಿದೆ. ಅವರ ಸಮಾಧಿ ಸ್ಥಳಕ್ಕೆ ನೂರಾರು ಅಭಿಮಾನಿಗಳು ದಿನಂಪ್ರತಿ ಹರಿದು ಬರ್ತಾ ಇದ್ದಾರೆ. ಅಪ್ಪುವನ್ನು ನೆನೆದು ಸಮಾಧಿ ಸ್ಥಳ ಕಂಠೀರವ ಸ್ಟುಡಿಯೋದಲ್ಲಿ ಕಣ್ಣೀರಿಡುತ್ತಿರುವವರಿಗೇನು ಕಡಿಮೆಯಿಲ್ಲ. ರಾಜಕುಮಾರನ ಗುಣಗಾನ ಮಾಡುತ್ತಿರುವವರ ಸಂಖ್ಯೆ ಕೂಡ ಹೆಚ್ಚಿದೆ. ಇದರ ನಡುವೆ, ತಮ್ಮ ಇಷ್ಟದ ನಟ ಪುನೀತ್ ರಾಜ್ ಕುಮಾರ್ ಸಮಾಧಿ ಮುಂದೆಯೇ ವಿವಾಹವಾಗೋದಕ್ಕೆ ಪ್ರೇಮಿಗಳಿಬ್ಬರು ಮುಂದಾಗಿದ್ದಾರೆ.
ಬಳ್ಳಾರಿಯ ಗುರುರಾಜ್ ಹಾಗೂ ಗಂಗಾ 2 ವರ್ಷದಿಂದ ಪ್ರೀತಿಸುತ್ತಿದ್ದರು. ಈ ಇಬ್ಬರು ನಟ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ಕೂಡ ಆಗಿದ್ದರು. ಪುನೀತ್ ನಿಧನಾನಂತ್ರ, ಅವರ ಸಮಾಧಿ ಮುಂದೆಯೇ ವಿವಾಹ ಆಗೋದಕ್ಕೆ ನಿರ್ಧರಿಸಿದ್ದಾರೆ. ಇದಕ್ಕಾಗಿ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರಲ್ಲಿ ಅನುಮತಿ ಕೇಳಿದ್ದು, ಶಿವರಾಜ್ ಕುಮಾರ್ ಮದುವೆಯಾಗೋದಕ್ಕೆ ಸಮ್ಮತಿ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಸದ್ಯದಲ್ಲೇ ನಟ ಪುನೀತ್ ರಾಜ್ ಕುಮಾರ್ ಸಮಾಧಿ ಮುಂದೆ ಸದ್ಯದಲ್ಲೇ ನೂತನ ದಾಂಪತ್ಯಕ್ಕೆ ಕಾಲಿಡಲಿದ್ದಾರೆ.