No menu items!
12.4 C
Munich
Saturday, May 30, 2026

ಪುನೀತ್ ವೈದ್ಯ ರಮಣರಾವ್ ಮನೆಗೆ ಪೊಲೀಸ್ ಕಣ್ಗಾವಲು

Must read

ಪುನೀತ್ ರಾಜ್‍ಕುಮಾರ್ ಅವರ ಸಾವಿಗೆ ವೈದ್ಯರ ಎಡವಟ್ಟೇ ಕಾರಣ ಎಂದು ಕೆಲವರು ಪೊಲೀಸರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಡಾ.ರಾಜ್ ಕುಟುಂಬದ ವೈದ್ಯ ಡಾ.ರಮಣರಾವ್ ಅವರ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

 

ಸದಾಶಿವನಗರದಲ್ಲಿರುವ ಅವರ ನಿವಾಸದ ಬಳಿ ಇರುವ ವೈದ್ಯ ರಮಣರಾವ್ ಅವರ ಮನೆ ಮತ್ತು ಕ್ಲಿನಿಕ್ ಬಳಿ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗಿದೆ.

ಈಗಾಗಲೇ ಕೆಲ ಅಭಿಮಾನಿಗಳು ವೈದ್ಯರನ್ನು ಬಂಧಿಸಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಪ್ರತಿಭಟನೆಗಳು ಕೂಡ ವಿವಿಧೆಡೆ ಆರಂಭಗೊಂಡಿದೆ. ಹಲವು ಸಂಘಟನೆಗಳು ನಿವಾಸದ ಬಳಿ ಪ್ರತಿಭಟನೆ ನಡೆಸುವ ಸಾಧ್ಯತೆ ಇರುವುದರಿಂದ ಪೊಲೀಸರ ಗಸ್ತು ಹಾಗೂ ಕಾವಲನ್ನು ಹೆಚ್ಚಿಸಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article