ಪೃಥ್ವಿರಾಜ್ ವೃತ್ತಿಗೆ ಕುತಂತ್ರ? ಸೈಬರ್ ದಾಳಿಗೆ ಪ್ರತಿಕ್ರಿಯಿಸಿದ ತಾಯಿ ಮಲ್ಲಿಕಾ ಸುಕುಮಾರನ್

Date:

ಪೃಥ್ವಿರಾಜ್ ವೃತ್ತಿಗೆ ಕುತಂತ್ರ? ಸೈಬರ್ ದಾಳಿಗೆ ಪ್ರತಿಕ್ರಿಯಿಸಿದ ತಾಯಿ ಮಲ್ಲಿಕಾ ಸುಕುಮಾರನ್

ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಮತ್ತು ಪ್ಯಾನ್ ಇಂಡಿಯಾ ನಟ ಪೃಥ್ವಿರಾಜ್ ಸುಕುಮಾರನ್ ಇತ್ತೀಚೆಗೆ ಹಲವು ಭಾಷೆಗಳ ಸಿನಿಮಾಗಳಲ್ಲಿ ತಮ್ಮ ಅಭಿನಯದ ಮೂಲಕ ದೇಶದ ಎಲ್ಲೆಡೆ ಗುರುತಿಸಿಕೊಂಡಿದ್ದಾರೆ. ಮಲಯಾಳಂನಷ್ಟೇ ಅಲ್ಲದೆ ಹಿಂದಿ, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ ಅವರು, ರಾಜಮೌಳಿ ಸೇರಿದಂತೆ ಅನೇಕ ನಿರ್ದೇಶಕರಿಂದ ಪ್ರಶಂಸೆಯನ್ನು ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ವಿಶ್ವ ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿರುವ ‘ವಾರಣಾಸಿ’ ಸಿನಿಮಾದಲ್ಲಿ ಪೃಥ್ವಿರಾಜ್ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಆದರೆ ಇದನ್ನೆಲ್ಲ ಮೀರಿಸಿ, ಮಲಯಾಳಂ ಚಿತ್ರರಂಗದಲ್ಲೇ ಪೃಥ್ವಿರಾಜ್ ವಿರುದ್ಧ ಕುತಂತ್ರ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಪೃಥ್ವಿರಾಜ್ ಅವರ ವೃತ್ತಿಯನ್ನು ಅಂತ್ಯಗಾಣಿಸಲು ಕೆಲವು ವಲಯಗಳು ಸಂಚು ನಡೆಸುತ್ತಿರುವುದಾಗಿ ಅವರ ತಾಯಿ ಮತ್ತು ಮಲಯಾಳಂ ಚಿತ್ರರಂಗದ ಹಿರಿಯ ನಟಿ ಮಲ್ಲಿಕಾ ಸುಕುಮಾರನ್ ಆರೋಪಿಸಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆಯಾದ ಪೃಥ್ವಿರಾಜ್ ಅಭಿನಯದ ‘ವಿಲಾಯತ್ ಬುದ್ಧ’ ಚಿತ್ರವು ಬಿಡುಗಡೆಯಾಗುವ ಮುನ್ನಲೇ ಸೈಬರ್ ದಾಳಿಗೆ ಒಳಪಟ್ಟಿತ್ತು. ಪೈರಸಿ ರೂಪದಲ್ಲಿ ಚಿತ್ರ ಹೊರಬೀಳುವುದರಿಂದ ಸಿನಿಮಾ ದೊಡ್ಡ ನಷ್ಟವನ್ನು ಎದುರಿಸಿತು. ಈ ಬಗ್ಗೆ ಮಾತನಾಡಿದ ಮಲ್ಲಿಕಾ ಸುಕುಮಾರನ್, ಇದು ನನ್ನ ಮಗನ ವೃತ್ತಿ ಅಂತ್ಯಗೊಳಿಸಲು ರೂಪಿಸಲಾದ ವ್ಯವಸ್ಥಿತ ಕುತಂತ್ರ. ಪೃಥ್ವಿರಾಜ್‌ನ್ನು ತುಳಿಯುವ ಪ್ರಯತ್ನ ಕೆಲವು ವರ್ಷಗಳಿಂದ ನಡೆಯುತ್ತಿದೆ. ಈ ಸೈಬರ್ ದಾಳಿಯೂ ಅದೇ ಸಂಚುವಿನ ಭಾಗ,” ಎಂದು ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...

ವಾಲ್ಮೀಕಿ ಹಗರಣದಲ್ಲಿ ಬಿ. ನಾಗೇಂದ್ರಗೆ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು

ವಾಲ್ಮೀಕಿ ಹಗರಣದಲ್ಲಿ ಬಿ. ನಾಗೇಂದ್ರಗೆ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು ಬೆಂಗಳೂರು: ವಾಲ್ಮೀಕಿ...

ರಾಹುಲ್ ಗಾಂಧಿ ಭೇಟಿ ಶಿಷ್ಟಾಚಾರದ ಭಾಗ ಮಾತ್ರ – ಗೊಂದಲ ಸೃಷ್ಟಿಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್

ರಾಹುಲ್ ಗಾಂಧಿ ಭೇಟಿ ಶಿಷ್ಟಾಚಾರದ ಭಾಗ ಮಾತ್ರ – ಗೊಂದಲ ಸೃಷ್ಟಿಸಬೇಡಿ:...

ಕಾಂಗ್ರೆಸ್ ನ ಕುರ್ಚಿ ಕಾದಾಟದಿಂದ ರಾಜ್ಯಕ್ಕೆ ಅಭಿವೃದ್ಧಿ ಇಲ್ಲ: ಬಿ.ವೈ. ವಿಜಯೇಂದ್ರ

ಕಾಂಗ್ರೆಸ್ ನ ಕುರ್ಚಿ ಕಾದಾಟದಿಂದ ರಾಜ್ಯಕ್ಕೆ ಅಭಿವೃದ್ಧಿ ಇಲ್ಲ: ಬಿ.ವೈ. ವಿಜಯೇಂದ್ರ ಚಿತ್ರದುರ್ಗ:...