50% ರಿಯಾಯಿತಿ ಫಲಿತಾಂಶ: ಒಂದೇ ವಾರದಲ್ಲಿ 5.98 ಕೋಟಿ ರೂ. ದಂಡ ಸಂಗ್ರಹ

0
126

50% ರಿಯಾಯಿತಿ ಫಲಿತಾಂಶ: ಒಂದೇ ವಾರದಲ್ಲಿ 5.98 ಕೋಟಿ ರೂ. ದಂಡ ಸಂಗ್ರಹ

ಬೆಂಗಳೂರು: ಟ್ರಾಫಿಕ್ ದಂಡದ ಮೇಲಿನ ಶೇಕಡಾ 50ರಷ್ಟು ರಿಯಾಯಿತಿ ಘೋಷಣೆಯ ನಂತರ ವಾಹನ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ದಂಡ ಪಾವತಿಸಲಾರಂಭಿಸಿದ್ದಾರೆ. ಯೋಜನೆ ಜಾರಿಯಾದ ಮೊದಲ ವಾರದಲ್ಲೇ ರಾಜ್ಯದಲ್ಲಿ 5.98 ಕೋಟಿ ರೂ. ದಂಡ ಸಂಗ್ರಹವಾಗಿದೆ.

ನವೆಂಬರ್ 21ರಿಂದ 27ರವರೆಗೆ ನಡೆದ ಅವಧಿಯಲ್ಲಿ 2,25,511 ಟ್ರಾಫಿಕ್ ಪ್ರಕರಣಗಳಿಗೆ ಸಂಬಂಧಿಸಿದಂತೆ ದಂಡ ಪಾವತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಿಯಾಯಿತಿಯನ್ನು ಡಿಸೆಂಬರ್ 12ರವರೆಗೆ ಬಳಸಿಕೊಳ್ಳಬಹುದು. ದಂಡವನ್ನು ಕೆಳಗಿನ ಡಿಜಿಟಲ್ ವೇದಿಕೆಗಳ ಮೂಲಕ ಪಾವತಿಸಬಹುದು:

  • ಕೆಎಸ್‌ಪಿ
  • ಬಿಟಿಪಿ
  • ಬೆಂಗಳೂರು ಒನ್
  • ಕರ್ನಾಟಕ ಒನ್
  • ಟ್ರಾಫಿಕ್ ಪೊಲೀಸ್ ಕಚೇರಿ

ಈ ಹಿಂದೆ ಇದೇ ರೀತಿಯ ರಿಯಾಯಿತಿ ಯೋಜನೆ ಆಗಸ್ಟ್ 23ರಿಂದ ಸೆಪ್ಟೆಂಬರ್ 12ರವರೆಗೆ ನಡೆದಿದ್ದು, ಆ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲೇ 55 ಕೋಟಿ ರೂ. ದಂಡ ಸಂಗ್ರಹಗೊಂಡಿತ್ತು.