ಸ್ಯಾಂಡಲ್ವುಡ್ನ ಟಾಪ್ ನಟರಲ್ಲೊಬ್ಬರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಹೆಬ್ಬುಲಿ ಡೈರೆಕ್ಟರ್ ಕೃಷ್ಣ ಆ್ಯಕ್ಷನ್ ಕಟ್ ಹೇಳಿರುವ ಪೈಲ್ವಾನ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಬಾದ್ ಷಾ ಅನ್ನೋ ಸ್ಟಾರ್ ನೇಮ್ನೊಂದಿಗೆ ಬರ್ತಿದ್ದಾರೆ. ಸುದೀಪ್ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಹಿಂದಿ,ತೆಲುಗು ಚಿತ್ರರಂಗದಲ್ಲೂ ಚಿರಪರಿಚಿತ ಸ್ಟಾರ್. ಅದಲ್ಲದೆ ಹಾಲಿವುಡ್ನಲ್ಲೂ ಸುದೀಪ್ ಖದರ್ ಇದೆ..!
ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಪೈಲ್ವಾನ್. ಈ ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು, ಮಲೆಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಹಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯ ಕುರುಕ್ಷೇತ್ರ ಸಿನಿಮಾ ಮತ್ತು ಸುದೀಪ್ ಅವರ ಪೈಲ್ವಾನ್ ಒಂದೇ ದಿನ ರಿಲೀಸ್ ಆಗಲಿವೆ ಎನ್ನಲಾಗಿತ್ತು. ಆಗಸ್ಟ್ 9ಕ್ಕೆ ಈ ಎರಡು ಸಿನಿಮಾಗಳು ರಿಲೀಸ್ ಆಗುವುದು ಪಕ್ಕಾ ಎಂದೇ ಹೇಳಲಾಗಿತ್ತು.
ಆದರೆ, ಕುರುಕ್ಷೇತ್ರ ಆಗಸ್ಟ್ 2ಕ್ಕೆ ರಿಲೀಸ್ ಆಗುವುದು ಪಕ್ಕಾ ಆಗಿದೆ. ಪೈಲ್ವಾನ್ ಆಗಸ್ಟ್ 29ಕ್ಕೆ ರಿಲೀಸ್ ಆಗಲಿದೆ ಎಂದು ತಿಳಿದುಬಂದಿತ್ತು. ಆದರೆ, ಪೈಲ್ವಾನ್ ಟೀಮ್ನಿಂದ ಈಗ ಶಾಕಿಂಗ್ ನ್ಯೂಸ್ ಬಂದಿದೆ. ಸುದೀಪ್ ಅಭಿಮಾನಿಗಳಿಗಂತೂ ಇದು ತುಂಬಾ ಬೇಸರದ ಸಂಗತಿ.
ಪೈಲ್ವಾನ್ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಡೈರೆಕ್ಟರ್ ಕೃಷ್ಣ ಈ ಬಗ್ಗೆ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ. ಆದರೆ ಇನ್ನೂ ಕೂಡ ರಿಲೀಸ್ ಡೇಟ್ ಅನೌನ್ಸ್ ಮಾಡಿಲ್ಲ. ಶೀಘ್ರದಲ್ಲೇ ಅನೌನ್ಸ್ ಮಾಡ್ತಾರಂತೆ..!
.. Discussions with all concerned from 5 languages are on and Release date as well as audio launch date of #Pailwaan wil be announced in just a bit.?
— krishna (@krisshdop) July 22, 2019
ಪೈಲ್ವಾನ್ ರಿಲೀಸ್ ಡೇಟ್ ಮತ್ತೆ ಮತ್ತೆ ಮುಂದಕ್ಕೆ ಹೋಗುತ್ತಿದ್ದು, ಆಗಸ್ಟ್ 29ಕ್ಕೂ ರಿಲೀಸ್ ಆಗ್ತಿಲ್ಲ ಅನ್ನೋದು ಅಭಿಮಾನಿಗಳಿಗೆ ಬೇಸರ ವಿಷಯವಾಗಿದೆ.
ಪೈಲ್ವಾನ್ ಸಿಕ್ಕಾಪಟ್ಟೆ ನಿರೀಕ್ಷೆಯನ್ನು ಹುಟ್ಟು ಹಾಕಿದ್ದು, ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ, ಸುಶಾಂತ್ ಸಿಂಗ್ ಸೇರಿದಂತೆ ಅನೇಕ ಸ್ಟಾರ್ ಗಳು ನಟಿಸಿದ್ದಾರೆ.