ಅಭಿನಯ ಚಕ್ರವರ್ತಿ ಸುದೀಪ್ ಸಿನಿಮಾಗಳು ಅಂದ್ರೆನೇ ಹಾಗೆ.. ಕಿಚ್ಚನ ಸಿನಿಮಾ ಅಂದ್ರೆ ಟೈಟಲ್ ಫಿಕ್ಸ್ ಆಗಿ, ಸಿನಿಮಾ ಸೆಟ್ಟೇರಿದಲ್ಲಿಂದಲೂ ಕುತೂಹಲ ಇರುತ್ತೆ. ಇತ್ತೀಚೆಗಂತೂ ಕನ್ನಡ ಮಾತ್ರವಲ್ಲದೇ ಬಾಲಿವುಡ್, ಟಾಲಿವುಡ್ ನಲ್ಲೂ ಸುದೀಪ್ ಸಿನಿಮಾಗಳ ಬಗ್ಗೆ ನಿರೀಕ್ಷೆ ಇದೆ. ಈಗ ಸುದೀಪ್ ಅವರ ‘ಪೈಲ್ವಾನ್’ ಬಗ್ಗೆಯೇ ಮಾತು. ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಮಲೆಯಾಳಂ ಭಾಷೆಗಳಲ್ಲಿ ಪೈಲ್ವಾನ್ ರಿಲೀಸ್ ಆಗಲಿದೆ.
ವರಮಹಾಲಕ್ಷ್ಮಿ ಹಬ್ಬದ ಟೈಮ್ನಲ್ಲಿ, ಆಗಸ್ಟ್ 9ಕ್ಕೆ ಪೈಲ್ವಾನ್ ತೆರೆಗೆ ಬರುತ್ತದೆ ಎನ್ನಲಾಗಿತ್ತು. ಅದೇ ದಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರವೂ ರಿಲೀಸ್ ಆಗಲಿದೆ ಎಂಬ ಮಾತುಗಳಿತ್ತು. ಆದರೆ, ಕುರುಕ್ಷೇತ್ರ 1 ವಾರ ಮುಂಚಿತವಾಗಿ ಅಂದರೆ ಆಗಸ್ಟ್ 2ಕ್ಕೇ ತೆರೆಗೆ ಬರುತ್ತಿದೆ.
ಪೈಲ್ವಾನ್ ಆಗಸ್ಟ್ 29ಕ್ಕೆ ತೆರೆಗೆ ಬರಲಿದೆ ಎಂದು ಹೇಳಲಾಗಿತ್ತು. ಆದರೆ, ಮೊನ್ನೆ ಮೊನ್ನೆ ಡೈರೆಕ್ಟರ್ ಕೃಷ್ಣ ಸಿನಿಮಾ ಆಗಸ್ಟ್ 29ಕ್ಕೆ ರಿಲೀಸ್ ಆಗಲ್ಲ ಎಂದು ಟ್ವೀಟ್ ಮೂಲಕ ತಿಳಿಸಿದ್ದರು. ಸಿನಿಮಾ ರಿಲೀಸ್ ಡೇಟ್ ಮುಂದೂಡಲ್ಪಡುತ್ತದೆ ಎಂಬುದು ಪಕ್ಕಾ ಆಗಿತ್ತು. ಆದರೆ, ಯಾವಗ ರಿಲೀಸ್ ಆಗುತ್ತದೆ ಎಂದು ಗೊತ್ತಿರಲಿಲ್ಲ.
ಈಗ ಪೈಲ್ವಾನ್ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಸೆಪ್ಟೆಂಬರ್ 12ರಂದು ಸುದೀಪ್ ಪೈಲ್ವಾನ್ ಅಖಾಡಕ್ಕೆ ಇಳಿಯುವುದು ಕನ್ಫರ್ಮ್ ಆಗಿದೆ. ಪೈಲ್ವಾನ್ ಸೆಪ್ಟೆಂಬರ್ 12ರಂದು 5 ಭಾಷೆಗಳಲ್ಲಿ ವಿಶ್ವದಾದ್ಯಂತ ರಿಲೀಸ್ ಆಗಲಿದೆ.
ಹೆಬ್ಬುಲಿ ಸಿನಿಮಾದಲ್ಲಿ ಕಿಚ್ಚ ಸುದೀಪ್ಗೆ ಆ್ಯಕ್ಷನ್ ಕಟ್ ಹೇಳಿದ್ದ ಕೃಷ್ಣ ಪೈಲ್ವಾನಲ್ಲಿ ಸುದೀಪ್ಗೆ ಮತ್ತೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಸುದೀಪ್, ಕೃಷ್ಣ ಕಾಂಬಿನೇಷನ್ನ ಈ ಸಿನಿಮಾದಲ್ಲಿ ಸುದೀಪ್ಗೆ ನಾಯಕಿ ಆಕಾಂಕ್ಷಸಿಂಗ್.
‘ಪೈಲ್ವಾನ್’ ಅಖಾಡಕ್ಕಿಳಿಯಲು ಮುಹೂರ್ತ ಇಟ್ಟಾಯ್ತು..!
Date: