ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿರುವ ‘ಪೈಲ್ವಾನ್’ ಚಿತ್ರಕ್ಕಾಗಿ ಸುದೀಪ್ ದೇಹವನ್ನು ದಂಡಿಸಿ ಇದೇ ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕುಸ್ತಿಪಟು ಮತ್ತು ಬಾಕ್ಸರ್ ಆಗಿ ಸುದೀಪ್ ಮಿಂಚಿದ್ದು ಸೆಪ್ಟಂಬರ್ 12 ರಂದು ವಿಶ್ವದಾದ್ಯಂತ ಚಿತ್ರ ತೆರೆಕಾಣಲಿದೆ.
‘ಹೆಬ್ಬುಲಿ’ ಭರ್ಜರಿ ಯಶಸ್ಸಿನ ನಂತರ ಕೃಷ್ಣ ಮತ್ತು ಸುದೀಪ್ ಕಾಂಬಿನೇಷನ್ ನಲ್ಲಿ ‘ಪೈಲ್ವಾನ್’ ಮೂಡಿಬರುತ್ತಿದ್ದು ಹೈಬಜೆಟ್ ನಲ್ಲಿ ಬಹುದೊಡ್ಡ ತಾರಾಗಣದಲ್ಲಿ ಚಿತ್ರ ನಿರ್ಮಾಣವಾಗಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ 2000 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು.ದೇಶ, ವಿದೇಶಗಳಲ್ಲಿ ಬಹುಭಾಷೆಗಳಲ್ಲಿ ಬಿಡುಗೆಯಾಗಿದ್ದ ‘ಕೆಜಿಎಫ್’ ಗಳಿಕೆಯಲ್ಲಿಯೂ ದಾಖಲೆ ಬರೆದಿತ್ತು ಅದರೆ ಇದೀಗ ಪೈಲ್ವಾನ್’ 3000 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಮಾತ್ರವಲ್ಲ, ‘ಕೆಜಿಎಫ್’ ಬಳಿಕ ವಿದೇಶಗಳಲ್ಲಿಯೂ ಹೆಚ್ಚಿನ ಸೆಂಟರ್ ಗಳಲ್ಲಿ ‘ಪೈಲ್ವಾನ್’ ತೆರೆ ಕಾಣುತ್ತಿರುವುದು ವಿಶೇಷವಾಗಿದೆ