ದೇಶದೆಲ್ಲೆಡೆ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ನೆಡೆಯುತ್ತಿದ್ದರೆ ಪೌರತ್ವ ಕಾಯ್ದೆ ಸರಿಎಂದು ಬಳ್ಳಾರಿಯಲ್ಲಿ ನಾರಾಯಣ ಪಾರ್ಕ್ ಬಳಿ ಎಬಿವಿಪಿ ನೇತೃತ್ವದಲ್ಲಿ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು, ವೇದಿಕೆಯ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಜಮಾಯಿಸಿದರು. ಬಳಿಕ ಆರಂಭವಾದ ಮೆರವಣಿಗೆಯು ಡಾ. ರಾಜ್ ಕುಮಾರ್ ರಸ್ತೆ ಮೂಲಕ ಗಡಗಿ ಚೆನ್ನಪ್ಪ ವೃತ್ತ ತಲುಪಿ,
ಸಿಎಎ, ಎನ್ ಆರ್ ಸಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಚಾಲನೆ ನೀಡಿದರು. ಎಬಿವಿಪಿ ನೇತೃತ್ವದಲ್ಲಿ ಆಗಮಿಸಿದ ಕಾಲೇಜು ವಿದ್ಯಾರ್ಥಿಗಳು ಬೃಹತ್ ರಾಷ್ಟ್ರಬಾವುಟ ಮೆರವಣಿಗೆ ನಡೆಸಿದರು ಇದರಿಂದ ಜನರಿಗೆ ಆ ಕಾಯ್ದೆ ಬಗ್ಗೆ ತಿಳಿಸಿ ಹೇಳುವ ಪ್ರಯತ್ನ ವನ್ನು ಮಾಡಲಾಯಿತು. ವಿಧ್ಯಾರ್ಥಿಗಳು ಕಾಯ್ದೆ ಬೆಂಬಲಿಸಿ ಬಾವುಟವನ್ನು ಹಿಡಿದು ರ್ಯಾಲಿ ಹೊರಟಿದ್ದು ವಿಶೇಷವಾಗಿತ್ತು.