ಪ್ಯಾಡ್ಮನ್, ಪರಿ ಚಿತ್ರಗಳ ನಿರ್ಮಾಪಕ ಅರೆಸ್ಟ್..? ಕಾರಣವೇನು ಗೊತ್ತಾ..?
ಕೋಟಿ ಕೋಟಿ ಪಂಗನಾಮ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಿರ್ಮಾಪಕಿ ಪ್ರೇರಣಾ ಅರೋರ ಅವರನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ.. KriArj ಎಂಬ ನಿರ್ಮಾಣ ಸಂಸ್ಥೆಯ ಮಾಲೀಕರಾಗಿರುವ ಪ್ರೇರಣಾ, ವಾಸು ಭಗ್ನಾನಿ ಅವರಿಗೆ 32 ಕೋಟಿ ರು ನೀಡದೆ ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ..
ರುಸ್ತುಂ, ಪ್ಯಾಡ್ಮ್ಯಾನ್, ಪರಿ, ಟಾಯ್ಲೆಟ್ ಏಕ್ ಪ್ರೇಮ್ ಕಥಾ, ಪರಮಾಣು ಮುಂತಾದ ಹಿಟ್ ಚಿತ್ರಗಳು ಇವರ ನಿರ್ಮಾಣ ಸಂಸ್ಥೆಯಿಂದ ಹೊರಬಂದಿವೆ.. ಶನಿವಾರ ಮುಂಬೈ ಪೊಲೀಸರು ಪ್ರೇರಣಾ ಅರೋರ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪ್ರೇರಣಾ ಅವರಿಗೆ ಡಿಸೆಂಬರ್ 10 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.






