ಕಳೆದ ಮೂರ್ನಾಲ್ಕು ದಿನಗಳಿಂದ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡಬೇಕು ಇಲ್ಲದಿದ್ದರೆ ಹತ್ತು ಸಾವಿರ ದಂಡ ಹಾಕಲಾಗುತ್ತದೆ ಎಂದು ಸುದ್ದಿ ಹರಿದಾಡುತ್ತಿತ್ತು. ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗಳನ್ನು ಪರಸ್ಪರ ಮಾರ್ಚ್ 31ರೊಳಗೆ ಲಿಂಕ್ ಮಾಡಿಸದೇ ಇದ್ದರೆ ಹತ್ತು ಸಾವಿರ ದಂಡವನ್ನು ತೆರಬೇಕಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿತ್ತು.
ಆದರೆ ಇದೀಗ ಹೊಸದೊಂದು ಅಪ್ಡೇಟ್ ಬಂದಿದ್ದು ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳನ್ನು ಲಿಂಕ್ ಮಾಡುವುದಕ್ಕೆ ಕೊನೆಯ ದಿನಾಂಕವನ್ನು ಮತ್ತಷ್ಟು ದಿನ ಮುಂದೂಡಲಾಗಿದೆ. ಹೌದು ಇದೀಗ ಬಂದಿರುವ ಹೊಸ ನಿಯಮದ ಪ್ರಕಾರ ಜೂನ್ 30 ರವರೆಗೂ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಗಳನ್ನು ಲಿಂಕ್ ಮಾಡಲು ಜನರಿಗೆ ಅವಕಾಶವನ್ನು ನೀಡಲಾಗಿದೆ. ನೀವು ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ಗಳನ್ನು ಲಿಂಕ್ ಮಾಡದೇ ಇದ್ದರೆ ಅಲ್ಲಿಯವರೆಗೆ ಸಮಯವಿದೆ ತಪ್ಪದೆ ಲಿಂಕ್ ಮಾಡಿಕೊಳ್ಳಿ.