ಲೋಕಸಭೆ ಚುನಾವಣೆ ಪ್ರಚಾರದ ಬಿಡುವಿನ ವೇಳೆ ಶಿವಮೊಗ್ಗ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ಮಧುಬಂಗಾರಪ್ಪ ಕಬಡ್ಡಿ ಆಟವಾಡಿದ್ದಾರೆ.
ಶಿಕಾರಿಪುರ ತಾಲೂಕಿನ ಮುದ್ದನಹಳ್ಳಿ ಗ್ರಾಮದ ದೇವಸ್ಥಾನದ ಅವರಣದಲ್ಲಿ ಕಬಡ್ಡಿ ಅಂಕಣದಲ್ಲಿ ಅವರು ಆಟವಾಡಿದ್ದು, ಜನರು ಹಾಗೂ ಮಕ್ಕಳೊಂದಿಗೆ ಬೆರೆತಿದ್ದಾರೆ. ಈ ಮೂಲಕ ತಂದೆ ಎಸ್. ಬಂಗಾರಪ್ಪ ಹಾದಿಯಲ್ಲಿ ಮಧುಬಂಗಾರಪ್ಪ ಸಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಕೂಡ ಸದಾ ಜನರೊಂದಿಗೆ ಬೆರೆಯುತ್ತಿದ್ದರು. ಜನನಾಯಕ ಜನರೊಂದಿಗೆ ಸೇರಿಕೊಂಡಿದ್ದಕ್ಕೆ ಗ್ರಾಮಸ್ಥರು ಪುಲ್ ಖುಷ್ ಆಗಿದ್ದಾರೆ. ಸಿಎಂ ಕುಮಾರಸ್ವಾಮಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಮುದ್ದನಹಳ್ಳಿ ಗ್ರಾಮಸ್ಥರು ಜೈಕಾರ ಹಾಕಿದ್ದಾರೆ. ಮಧು ಅವರೊಂದಿಗೆ ಯುವಕರು ಸೆಲ್ಫಿ ತೆಗೆದುಕೊಂಡಿದ್ದಾರೆ.