ಪ್ರತಿದಿನ ಖರ್ಜೂರ ಸೇವನೆಯಿಂದ ಸಿಗುತ್ತೆ ಸಾಕಷ್ಟು ಲಾಭಗಳು..!
ಖರ್ಜೂರವು ರುಚಿಕರವಾದದ್ದು ಮಾತ್ರವಲ್ಲ, ದೇಹದ ಆರೋಗ್ಯಕ್ಕೂ ಬಹುಮುಖ್ಯವಾದ ಪೋಷಕಾಂಶಗಳನ್ನು ಹೊಂದಿದೆ. ದೈನಂದಿನ ಆಹಾರದಲ್ಲಿ ಖರ್ಜೂರವನ್ನು ಸೇರಿಸಿಕೊಳ್ಳುವ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬಹುದು ಎಂದು ತಜ್ಞರು ಹೇಳಿದ್ದಾರೆ.
ಖರ್ಜೂರದಲ್ಲಿ ಪೊಟ್ಯಾಸಿಯಂ, ವಿಟಮಿನ್ಗಳು, ನಾರುಪದಾರ್ಥ, ಉತ್ಕರ್ಷಣ ನಿರೋಧಕಗಳು ಮತ್ತು ಲೋಹಾಂಶಗಳು ಇದ್ದು, ಇವು ದೇಹದ ವಿವಿಧ ಅಂಗಾಂಗಗಳಿಗೆ ಶಕ್ತಿ ನೀಡುತ್ತವೆ. ಅಧ್ಯಯನಗಳ ಪ್ರಕಾರ, ಪ್ರತಿದಿನ ಒಂದೇ ಒಂದು ಖರ್ಜೂರ ಸೇವನೆ ಮಾಡಿದರೂ ಕ್ಯಾನ್ಸರ್ ಸೇರಿದಂತೆ ಹಲವಾರು ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಬಹುದು.
ಪ್ರಯೋಜನಗಳು
• ಖರ್ಜೂರದಲ್ಲಿರುವ ಪೊಟ್ಯಾಸಿಯಂ ಮತ್ತು ನಾರುಪದಾರ್ಥಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತವೆ.
• ಇನ್ಫುಷಿಯನ್ ಆಗಿರುವ ಐರನ್ ದೇಹದಲ್ಲಿ ರಕ್ತ ಹಿನ್ನತೆ (ಅನಿಮಿಯಾ) ನಿವಾರಣೆಗೆ ಸಹಕಾರಿಯಾಗುತ್ತದೆ.
• ಕ್ಯಾಲ್ಸಿಯಂ ಮತ್ತು ವಿಟಮಿನ್ ಸೇರಿದಂತೆ ಹಲವು ಪೋಷಕಾಂಶಗಳು ಮೂಳೆ ಬಲವರ್ಧನೆಗೆ ನೆರವಾಗುತ್ತವೆ.
• ನಾರುಪದಾರ್ಥಗಳ ಅಂಶ ಜೀರ್ಣಕ್ರಿಯೆ ಸುಧಾರಣೆ ಹಾಗೂ ಮಲಬದ್ಧತೆ ನಿವಾರಣೆಗೆ ನೆರವಾಗುತ್ತದೆ.
• ಖರ್ಜೂರದಲ್ಲಿರುವ ಉತ್ಕೃಷಣ ನಿರೋಧಕಗಳು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತವೆ.
• ನಿಯಮಿತ ಸೇವನೆಯಿಂದ ಮೆದುಳಿನ ಕಾರ್ಯಕ್ಷಮತೆ ಹೆಚ್ಚಾಗುತ್ತದೆ ಹಾಗೂ ಒತ್ತಡ ನಿಯಂತ್ರಣವಾಗುತ್ತದೆ.
• ನೈಸರ್ಗಿಕ ಸಕ್ಕರೆ ಇರುವುದರಿಂದ ಶುಗರ್ ಲೆವೆಲ್ ಹಾಗೂ ತೂಕ ನಿಯಂತ್ರಣಕ್ಕೂ ಸಹಾಯಕ.