ಪ್ರತಿ ವರ್ಷದ ಸಂಕ್ರಾಂತಿ ಹಬ್ಬ ಬಂತೆಂದರೆ ಸಾಕು ತೆಲುಗು ಮತ್ತು ತಮಿಳು ಚಿತ್ರರಂಗದ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುತ್ತವೆ. ಈ ಹಬ್ಬಕ್ಕೆ 2-3 ದಿನಗಳ ರಜೆ ಇರುವ ಕಾರಣ ತೆಲುಗು ಮತ್ತು ತಮಿಳು ಚಿತ್ರಗಳನ್ನು ಸಂಕ್ರಾಂತಿಗೆ ಹೆಚ್ಚಾಗಿ ಬಿಡುಗಡೆ ಮಾಡುತ್ತಾರೆ.
ಇನ್ನೂ ಮುಂಬರಲಿರುವ ಸಂಕ್ರಾಂತಿ ಹಬ್ಬಕ್ಕೂ ತೆಲುಗು ಮತ್ತು ತಮಿಳಿನ ಹಲವಾರು ಚಿತ್ರಗಳು ಬಿಡುಗಡೆಯಾಗಲು ತಯಾರಾಗಿ ನಿಂತಿವೆ. ಇದರಲ್ಲಿ ಪ್ರಮುಖವಾಗಿ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಟ. ಹೌದು ಮಹೇಶ್ ಬಾಬು ಅಭಿನಯದ ಪರುಶುರಾಮ್ ನಿರ್ದೇಶನದ ಈ ಚಿತ್ರದ ಫಸ್ಟ್ ಲುಕ್ ಶನಿವಾರದಂದು ಬಿಡುಗಡೆಯಾಗಿದ್ದು ದೊಡ್ಡ ಮಟ್ಟದ ಸೆನ್ಸೇಷನ್ ಹುಟ್ಟುಹಾಕಿದೆ.
ಮಹೇಶ್ ಬಾಬು ಅಭಿನಯಿಸುತ್ತಿರುವ ಸರ್ಕಾರು ವಾರಿ ಪಾಟ ಸಂಕ್ರಾಂತಿಗೆ ತೆರೆಗೆ ಅಪ್ಪಳಿಸಲು ತಯಾರಾಗುತ್ತಿದ್ದರೆ ಅತ್ತ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ರಾಧೆಶ್ಯಾಮ್ ಕೂಡ ಸಂಕ್ರಾಂತಿಗೆ ಬಿಡುಗಡೆಯಾಗುವುದಾಗಿ ಘೋಷಣೆ ಮಾಡಿಕೊಂಡಿದೆ. ಈ ಎರಡೂ ದೊಡ್ಡ ಚಿತ್ರಗಳ ನಡುವೆ ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ಅಭಿನಯದ ಭೀಮ್ಲಾನಾಯಕ್ ಚಿತ್ರ ಕೂಡ ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾಗುತ್ತಿದೆ. ಒಟ್ಟಿನಲ್ಲಿ ಈ 3ದೊಡ್ಡ ಚಿತ್ರಗಳು ಸಂಕ್ರಾಂತಿಗೆ ಬಿಡುಗಡೆಯಾಗುತ್ತಿದ್ದು ಬಾಕ್ಸಾಫೀಸ್ ಧೂಳ್ ಎಬ್ಬಿಸುವುದು ಪಕ್ಕಾ.