No menu items!
18.3 C
Munich
Thursday, April 23, 2026

ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ AQI ಏರಿಕೆ: ಮಂಗಳೂರು ‘ಅನಾರೋಗ್ಯಕರ’ ಮಟ್ಟಕ್ಕೆ

Must read

ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ AQI ಏರಿಕೆ: ಮಂಗಳೂರು ‘ಅನಾರೋಗ್ಯಕರ’ ಮಟ್ಟಕ್ಕೆ

ಬೆಂಗಳೂರು: ಕೆಲ ದಿನಗಳಿಂದ ಏರಿಕೆಯಾಗುತ್ತಿದ್ದ ಗಾಳಿಯ ಗುಣಮಟ್ಟ ಸೂಚ್ಯಂಕ (AQI) ಇಂದು ಮತ್ತಷ್ಟು ಕಳಪೆ ಮಟ್ಟ ತಲುಪಿದೆ. ಬೆಂಗಳೂರಿನಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡಿದ್ದರೂ, ಮಂಗಳೂರಿನಲ್ಲಿ ವಾಯು ಗುಣಮಟ್ಟ ಮತ್ತೆ ಕುಸಿತ ಕಂಡಿದೆ. ಮೈಸೂರು ಮತ್ತು ಬೆಳಗಾವಿಯಲ್ಲೂ ಗಾಳಿಯ ಗುಣಮಟ್ಟ 150ರ ಸುತ್ತಮುತ್ತ ದಾಖಲಾಗಿದ್ದು, ತಜ್ಞರು ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.

ಇಂದು ಬೆಂಗಳೂರಿನ AQI 140ಕ್ಕೆ ತಲುಪಿದ್ದು ‘ಕಳಪೆ’ ಮಟ್ಟದಲ್ಲಿದೆ. ಮಂಗಳೂರಿನಲ್ಲಿ AQI 185 ದಾಖಲಾಗಿದ್ದು ‘ಅನಾರೋಗ್ಯಕರ’ ಮಟ್ಟ ತಲುಪಿದೆ. ಜೊತೆಗೆ ಕಲಬುರ್ಗಿ (149), ಹುಬ್ಬಳ್ಳಿ (154), ವಿಜಯಪುರ (160), ಉಡುಪಿ (170) ನಗರಗಳಲ್ಲಿಯೂ ಗಾಳಿಯ ಗುಣಮಟ್ಟ ಆತಂಕಕಾರಿ ಮಟ್ಟದಲ್ಲಿದೆ.

WHO ಮಾನದಂಡಗಳ ಪ್ರಕಾರ 100 ಕ್ಕಿಂತ ಹೆಚ್ಚಿನ AQI ಆರೋಗ್ಯಕ್ಕೆ ಹಾನಿಕರವಾಗಿದ್ದು, ವಿಶೇಷವಾಗಿ ಮಕ್ಕಳಿಗೆ, ವೃದ್ಧರಿಗೆ ಮತ್ತು ಉಸಿರಾಟ ಸಮಸ್ಯೆಯುಳ್ಳವರಿಗೆ ಹೆಚ್ಚು ಅಪಾಯಕಾರಿಯಾಗಿದೆ.

ಇಂದಿನ ಪ್ರಮುಖ ನಗರಗಳ AQI:

ಬೆಂಗಳೂರು – 140

ಮಂಗಳೂರು – 185

ಮೈಸೂರು – 126

ಬೆಳಗಾವಿ – 165

ಕಲಬುರ್ಗಿ – 149

ಶಿವಮೊಗ್ಗ – 135

ಬಳ್ಳಾರಿ – 132

ಹುಬ್ಬಳ್ಳಿ – 154

ಉಡುಪಿ – 170

ವಿಜಯಪುರ – 160

AQI ಮಟ್ಟಗಳ ವಿವರಣೆ:

ಉತ್ತಮ – 0 ರಿಂದ 50

ಮಧ್ಯಮ – 51 ರಿಂದ 100

ಕಳಪೆ – 101 ರಿಂದ 150

ಅನಾರೋಗ್ಯಕರ – 151 ರಿಂದ 200

ಗಂಭೀರ – 201 ರಿಂದ 300

ಅಪಾಯಕಾರಿ – 301 ರಿಂದ 500+

ನಗರಗಳಲ್ಲಿ ದಿನದಿಂದ ದಿನಕ್ಕೆ AQI ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಅನಾವಶ್ಯಕ ಹೊರಾಂಗಣ ಚಟುವಟಿಕೆಗಳನ್ನು ತಪ್ಪಿಸಲು ಹಾಗೂ ಮಾಸ್ಕ್ ಬಳಸಲು ತಜ್ಞರು ಸೂಚಿಸಿದ್ದಾರೆ.

- Advertisement -spot_img

More articles

- Advertisement -spot_img

Latest article