No menu items!
18.3 C
Munich
Thursday, April 23, 2026

India vs Pakistan T20 matchಗೆ ಕ್ಷಣಗಣನೆ: ಕೊಲಂಬೊದಲ್ಲಿ ಹೈವೋಲ್ಟೇಜ್ ಕಾದಾಟಕ್ಕೆ ವೇದಿಕೆ ಸಿದ್ಧ

Must read

India vs Pakistan T20 matchಗೆ ಕ್ಷಣಗಣನೆ: ಕೊಲಂಬೊದಲ್ಲಿ ಹೈವೋಲ್ಟೇಜ್ ಕಾದಾಟಕ್ಕೆ ವೇದಿಕೆ ಸಿದ್ಧ

ಕೊಲಂಬೊ: ಕ್ರಿಕೆಟ್ ಲೋಕವೇ ತುದಿಗಾಲಲ್ಲಿ ನಿಂತು ಕಾಯುತ್ತಿರುವ ಟಿ20 ವಿಶ್ವಕಪ್‌ನ ರೋಚಕ ಭಾರತ–ಪಾಕಿಸ್ತಾನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಬದ್ಧವೈರಿಗಳ ನಡುವಿನ ಈ ಮಹತ್ವದ ಕಾದಾಟಕ್ಕೆ ಕೊಲಂಬೊದ R. Premadasa Stadium ಆತಿಥ್ಯ ವಹಿಸುತ್ತಿದ್ದು, ಕೋಟ್ಯಂತರ ಕ್ರೀಡಾಭಿಮಾನಿಗಳು ಪಂದ್ಯ ಕಣ್ತುಂಬಿಕೊಳ್ಳಲು ಕಾದಿದ್ದಾರೆ. ಪಂದ್ಯವು ಇಂದು ಸಂಜೆ 7 ಗಂಟೆಗೆ ಆರಂಭವಾಗಲಿದೆ.
ಮುಖಾಮುಖಿ ಇತಿಹಾಸದಲ್ಲಿ ಭಾರತದ ಮೇಲುಗೈ
ಭಾರತ ಮತ್ತು ಪಾಕಿಸ್ತಾನ ಈವರೆಗೆ ಒಟ್ಟು 16 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 13 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಪಾಕಿಸ್ತಾನ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಉಭಯ ತಂಡಗಳು 8 ಬಾರಿ ಎದುರಾಗಿದ್ದು, ಭಾರತ 7 ಬಾರಿ ಜಯಶಾಲಿಯಾಗಿದ್ದರೆ, ಪಾಕಿಸ್ತಾನ ಕೇವಲ ಒಮ್ಮೆ ಗೆದ್ದಿದೆ. 2021ರಲ್ಲಿ ಪಾಕಿಸ್ತಾನ ಕೊನೆಯಾಗಿ 10 ವಿಕೆಟ್ ಅಂತರದಲ್ಲಿ ಭಾರತವನ್ನು ಸೋಲಿಸಿತ್ತು.
ಸೂಪರ್-8ಗೆ ದಾರಿ ತೆರೆಯುವ ಪಂದ್ಯ
ಈ ಬಾರಿ ಎರಡೂ ತಂಡಗಳು ಈಗಾಗಲೇ ತಲಾ 2 ಪಂದ್ಯಗಳಲ್ಲಿ ಜಯ ಸಾಧಿಸಿವೆ. ಹೀಗಾಗಿ ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಸೂಪರ್-8 ಹಂತಕ್ಕೆ ಬಹುತೇಕ ಸ್ಥಾನ ಖಚಿತಪಡಿಸಿಕೊಳ್ಳಲಿದೆ.
ಭಾರತದ ಬ್ಯಾಟಿಂಗ್ ಚಿಂತನೆ
ಭಾರತ ಎರಡು ಪಂದ್ಯಗಳಲ್ಲಿ ಗೆದ್ದಿದ್ದರೂ, ಬ್ಯಾಟಿಂಗ್ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಉತ್ತಮ ಪ್ರದರ್ಶನ ನೀಡಿದರೂ ಇತರ ಬ್ಯಾಟರ್‌ಗಳಿಂದ ಸ್ಥಿರ ಆಟ ಕಾಣಿಸಲಿಲ್ಲ. ವಿಶೇಷವಾಗಿ ಯುಎಸ್‌ಎ ಮತ್ತು ನಮೀಬಿಯಾ ವಿರುದ್ಧ ಸ್ಪಿನ್ ದಾಳಿಗೆ ಭಾರತೀಯ ಬ್ಯಾಟರ್‌ಗಳು ಮುಗ್ಗರಿಸಿದ್ದರು.
ಪಾಕ್ ಸ್ಪಿನ್ ದಾಳಿ ಬಲಿಷ್ಠ
ಪಾಕಿಸ್ತಾನ ತಂಡದಲ್ಲಿ ಐವರು ಪ್ರಮುಖ ಸ್ಪಿನ್ನರ್‌ಗಳಿದ್ದು, ಉಸ್ಮಾನ್ ತಾರಿಖ್, ಸೈಮ್ ಅಯೂಬ್, ಅಬ್ರಾರ್ ಅಹ್ಮದ್, ಶದಾಬ್ ಖಾನ್ ಹಾಗೂ ಮೊಹಮ್ಮದ್ ನವಾಜ್ ಸ್ಪಿನ್ ಅಸ್ತ್ರಗಳಾಗಿದ್ದಾರೆ. ಹೀಗಾಗಿ ಪಾಕ್ ಸ್ಪಿನ್ನರ್‌ಗಳನ್ನು ಎದುರಿಸುವಲ್ಲಿ ಭಾರತೀಯ ಬ್ಯಾಟರ್‌ಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಗದ್ದಲ, ಕುತೂಹಲಕ್ಕೆ ವೇದಿಕೆ
ಭಾರತ–ಪಾಕಿಸ್ತಾನ ನಡುವಿನ ಯಾವ ಪಂದ್ಯವಾಗಿದ್ದರೂ ಉತ್ಸಾಹ, ಗದ್ದಲ ಮತ್ತು ಕುತೂಹಲ ಗರಿಷ್ಠ ಮಟ್ಟದಲ್ಲಿರುತ್ತದೆ. ಈ ಬಾರಿ ಪಾಕ್ ತಂಡದ ಬಹಿಷ್ಕಾರ ಹೈಡ್ರಾಮಾ ಹಿನ್ನೆಲೆ ಪಂದ್ಯಕ್ಕೆ ಮತ್ತಷ್ಟು ರೋಚಕತೆ ಸೇರ್ಪಡೆಯಾಗಿದೆ.
ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಈ ಹೈವೋಲ್ಟೇಜ್ ಕಾದಾಟದಲ್ಲಿ ಯಾವ ತಂಡ ಮೇಲುಗೈ ಸಾಧಿಸುತ್ತದೆ ಎಂಬುದು ಇಂದು ಸಂಜೆ ತಿಳಿಯಲಿದೆ.

- Advertisement -spot_img

More articles

- Advertisement -spot_img

Latest article