ಕೆಜಿಫ್ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಪ್ರಶಾಂತ್ ನೀಡಿ ಎಂಬ ನಿರ್ದೇಶಕ ಇದೀಗ ಕೆಜಿಎಫ್ 2 ಚಿತ್ರದ ಚಿತ್ರೀಕರಣ ಮುಗಿಸಿದ್ದು ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಪ್ರಭಾಸ್ ಅವರಿಗೆ ನಿರ್ದೇಶನ ಮಾಡಲು ಹೊರಟಿರುವ ಪ್ರಶಾಂತ್ ಚಿತ್ರಕ್ಕೆ ಸಲಾರ್ ಎಂಬ ಹೆಸರಿಟ್ಟಿದ್ದಾರೆ ಆದರೆ ಇದೀಗ ಸಲಾರ್ ಎಂಬ ಚಿತ್ರದ ವಿಚಾರವಾಗಿ ಆ ಚಿತ್ರದ ಕಥೆ ಪ್ರಶಾಂತ್ ನೀಲ್ ಅವರೇ ನಿರ್ದೇಶನ ಮಾಡಿದ್ದ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯಿಸಿದ ಉಗ್ರಂ ಚಿತ್ರದ ರಿಮೇಕ್ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು,
ಆದರೆ ಪ್ರಶಾಂತ್ ಇಲ್ಲ ಗುರು ಇದು ಉಗ್ರಂ ಚಿತ್ರದ ರಿಮೇಕ್ ಅಲ್ಲ ಎಂದು ಹೇಳಿದ್ರು ಆದರೆ ಪ್ರಶಾಂತ್ ಅವರ ಮಾತಿಗೆ ತದ್ವಿರುದ್ಧವಾಗಿ ಅದೇ ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಇತ್ತೀಚಿನ ಒಂದು ಮಾಧ್ಯಮ ಸುದ್ದಿಗೋಷ್ಠಿಯಲ್ಲಿ ಸಲಾರ್ ವಿಚಾರವಾಗಿ ಕೇಳಿದಾಗ ಹೌದು ಇದು ಎಲ್ಲರಿಗೂ ಗೊತ್ತಿರುವ ವಿಷಯ ಸಲಾರ್ ಉಗ್ರಂ ರಿಮೇಕ್ ಆದರೆ ಅದನ್ನ ಪ್ರಶಾಂತಿ ಹೇಗೆ ಮಾಡ್ತಾರೆ ಅನ್ನೋದು ನೋಡಬೇಕು ಎಂದು ಹೇಳಿಕೆ ನೀಡಿದ್ದರು ಇದಾದ ನಂತರ ಅಭಿಮಾನಿಗಳಿಗೆ ಇನ್ನೊಂದು ಕಡೆ ಪ್ರಶಾಂತ್ ನೀಲ್ ಸುಳ್ಳು ಹೇಳಿದ್ರ ಎಂಬ ಪ್ರಶ್ನೆ ಮೂಡಿದೆ, ಇನ್ನೂ ಸಲ ಚಿತ್ರ ಹೇಗೆ ಬರುತ್ತೆ ಎಂದು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇದು ರಿಮೇಕ್ ಚಿತ್ರ ಎಂದು ಕೇಳಿದಾಗ ಎಲ್ಲೋ ಒಂದು ಕಡೆ ಬೇಸರ ವ್ಯಕ್ತವಾಗಿದೆ ವಿಚಾರಕ್ಕೆ ಇನ್ನೂ ಪ್ರಶಾಂತ್ ನೀಲ್ ಪ್ರತಿಕ್ರಿಯೆ ನೀಡಿಲ್ಲ.