ಪ್ರೇಕ್ಷಕರ ಮೇಲೆ ನೆಗೆದ ರಣ್ ವೀರ್..!! ಆಮೇಲೆ ಅಲ್ಲಾಗಿದ್ದೆ ಬೇರೆ..!!
ರಣ್ ವೀರ್ ಸಿಂಗ್ ಯಾವಾಗ್ಲೂ ಜೋಷ್ ನಲ್ಲಿ ಇರ್ತಾರೆ.. ತಮ್ಮ ಕಾಸ್ಟ್ಯೂಮ್ ಸೇರಿದಂತೆ ಮಾತು, ಹಾವಭಾವ ಎಲ್ಲದರಲ್ಲು ರಣ್ ವೀರ್ ಗೆ ರಣ್ ವೀರೆ ಸಾಟಿ.. ಇನ್ನು ಕೆಲವೊಮ್ಮೆ ಈತನ ಅತೀ ಎನ್ನಿಸುವ ವರ್ತನೆ ಅಭಿಮಾನಿಗಳನ್ನ ತೊಂದರೆಗೀಡು ಮಾಡುತ್ತೆ.. ಈ ಬಾರಿಯು ಇಂತಹದ್ದೆ ಘಟನೆ ನಡೆದಿದೆ…
ಫ್ಯಾಷನ್ ವೀಕ್ ನ ಅಂತಿಮ ಪ್ರದರ್ಶನದಲ್ಲಿ ಜೋಷ್ ನಲ್ಲಿ ಹಾಡು ಹಾಡುತ್ತಿದ್ದ ರಣ್ ವೀರ್ ಸಿಂಗ್, ಯಾವುದೇ ಮಾಹಿತಿ ನೀಡಿದೆ, ಹಾಡನ್ನ ಎಂಜಾಯ್ ಮಾಡ್ತಿದ್ದ ಅಭಿಮಾನಿಗಳು ನಿಂತಿದ್ದ ಗ್ಯಾಲರಿಯ ಕಡೆ ನೆಗೆದಿದ್ದಾರೆ.. ಇನ್ನು ರಣ್ ವೀರ್ ಅವರ ಈ ವರ್ತನೆಯನ್ನ ನಿರೀಕ್ಷಿಸದ ಅಲ್ಲಿನ ನೆರೆದಿದ್ದವರು ಒಂದು ಕ್ಷಣ ಶಾಕ್ ಆಗಿದ್ದಾರೆ…
ಏನು ನಡೆಯುತ್ತಿದೆ ಅಂತ ಯೋಚಿಸುವಷ್ಟರಲ್ಲಿ ರಣ್ ವೀರ್ ಬಿದ್ದ ವೇಗಕ್ಕೆ ಕೆಳಗೆ ಸಿಲುಕಿ ಹಲವರು ಗಾಯಗೊಂಡಿರುವ ಫೋಟೊ ವೈರಲ್ ಆಗಿದ್ದು, ರಣ್ ವೀರ್ ಅವರ ಈ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ತೀರ್ವ ಆಕ್ರೋಶ ವ್ಯಕ್ತವಾಗಿದೆ..