ಫೇಸ್‌ಬುಕ್‌ ಪ್ರೀತಿಯಿಂದ 1 ಕೋಟಿ ಕಳೆದುಕೊಂಡ ಭೂಪ!

Date:

ಫೇಸ್​ಬುಕ್​ ನಲ್ಲಿ ಪರಿಚಯವಾದ ಯುವತಿ ಜೊತೆ ಪ್ರೀತಿ ಮಾಡಿದ ಹೈದರಾಬಾದ್​ನ ಸಾಫ್ಟವೇರ್​ ಇಂಜಿನಿಯರೊಬ್ಬ 1 ಕೋಟಿ ರೂ. ಕಳೆದುಕೊಂಡಿದ್ದಾನೆ.

ಎಂಎನ್​ಸಿ ಕಂಪನಿಯೊಂದರಲ್ಲಿ ಸಾಫ್ಟವೇರ್​ ಇಂಜಿನಿಯರ್​ ಆಗಿರುವ ಸಿಕಂದರಾಬಾದ್​ ನಿವಾಸಿ ವಿಜಯ್​ (40) ವಂಚನೆಗೊಳಗಾಗಿದ್ದು, ಯಾರ್ಲಗಡ್ಡ ದಾಸು ದಂಪತಿ ಯುವತಿ ಹೆಸರಿನಲ್ಲಿ 1 ಕೋಟಿ ರೂ.ವಂಚಿಸಿದ್ದಾರೆ.

ಅವಿವಾಹಿತ ವಿಜಯ್​ಗೆ 1 ವರ್ಷದ ಹಿಂದೆ ಫೇಸ್​ಬುಕ್​ನಲ್ಲಿ ಕಲ್ಯಾಣಿ ಶ್ರೀ ಎಂಬ ಹೆಸರಲ್ಲಿ ಯಾರ್ಲಗಡ್ಡ ದಾಸು ರಿಕ್ವೆಸ್ಟ್ ಕಳಿಸಿದ್ದಾನೆ. ವಿಜಯ್​ ರಿಕ್ವೆಸ್ಟ್​ ಸಮ್ಮಿತಿಸಿದ ಬಳಿಕ ಇಬ್ಬರ ಮಧ್ಯೆ ಪರಸ್ಪರ ಚಾಟಿಂಗ್​, ಮಾತುಕತೆ ನಡೆದಿದೆ.

ಕಲ್ಯಾಣಿ ಶ್ರೀ ಹೆಸರಿನ ದಾಸು ಫೇಸ್​ಬುಕ್​ನಲ್ಲಿ ವಿಜಯ್​ ಬಳಿ ಪ್ರೀತಿ ನಿವೇದನೆ ಮಾಡಿಕೊಂಡಿದ್ದು, ವಿಜಯ್​ ಒಪ್ಪಿಗೆ ನೀಡಿದ್ದಾನೆ. ಕೆಲ ದಿನಗಳ ಬಳಿಕ ತನ್ನ ಬಳಿ 50 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ. ಅದಕ್ಕೆ ಕೆಲ ಅಡಚಣೆ ಇದೆ. ಇದನ್ನು ನನ್ನ ಹೆಸರಿಗೆ ಮಾಡಿಕೊಳ್ಳಲು ಕೆಲವು ದಾಖಲೆ ಮಾಡಿಸಬೇಕು. ಇದಕ್ಕಾಗಿ 1 ಕೋಟಿ ರೂಪಾಯಿ ಬೇಕು ಎಂದು ಹೇಳಿದ್ದಾನೆ. ವಿಜಯ್ ಹಣ ನೀಡಲು ಸಮ್ಮತಿಸಿದ್ದಾನೆ. ದಾಸು ನೀಡಿದ ಬ್ಯಾಂಕ್​ ಖಾತೆಗೆ ವಿಜಯ್​ ಹಣ ವರ್ಗಾವಣೆ ಮಾಡಿದ್ದಾನೆ.

ಹಣ ಹಾಕಿದ ಕೆಲ ದಿನಗಳ ಬಳಿಕ ಕಲ್ಯಾಣಿ ಶ್ರೀ ನಾಪತ್ತೆಯಾಗಿದ್ದಾಳೆ. ಪರಿಶೀಲನೆ ಬಳಿಕ ತಾನು ಮೋಸ ಹೋಗಿದ್ದು ವಿಜಯ್​ಗೆ ಗೊತ್ತಾಗಿದೆ. ಈ ಬಗ್ಗೆ ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

https://youtu.be/M_U_Ra0i7_E

 

Share post:

Subscribe

spot_imgspot_img

Popular

More like this
Related

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...