ಫೋಟೋಶೂಟ್ ಟೈಮ್ ಅಲ್ಲಿ ಧ್ಯಾನ ಮಾಡುತ್ತಿರುವ ಕರೀನಾ.

Date:

ಬಾಲಿವುಡ್  ನಟಿ ಕರೀನಾ ಕಪೂರ್ ಖಾನ್ ಕಳೆದ ಎರಡು ದಶಕಗಳಿಂದ ಬಾಲಿವುಡ್ ಜಗತ್ತನ್ನು ಆಳುತ್ತಿದ್ದು, ತಾಯಿಯಾದ ನಂತರವೂ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಪೂಮಾ ಜೊತೆ ಪಾಲುದಾರಿಕೆಯನ್ನೂ ಹೊಂದಿದ್ದರು . ಕರೀನಾ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದು, ಅವರ ಅಭಿಮಾನಿಗಳು ಗುಡ್ ನ್ಯೂಸ್  ಕೇಳಲು ಕುತೂಹಲದಿಂದ ಕಾಯುತ್ತಿದ್ದಾರೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ    ಕರೀನಾ ಮೊದಲ ಮಗು ತೈಮೂರ್ ಪ್ರಸ್ತುತ ಜನಪ್ರಿಯ ಕಿಡ್. ಸದ್ಯದಲ್ಲೇ ಕರೀನಾ  ಮಗಳು ಅಥವಾ ಮಗನಿಗೆ ಜನ್ಮ ನೀಡಲಿದ್ದಾರೆ. ಅಂದಹಾಗೆ ಗರ್ಭಿಣಿಯಾಗಿದ್ದರೂ, ಕರೀನಾ ಯೋಗ ಮಾಡುವುದನ್ನು ಎಂದಿಗೂ ನಿಲ್ಲಿಸಲಿಲ್ಲ. ಇದೀಗ ಕರೀನಾ ಶಾಂತಿಯುತವಾಗಿ ಧ್ಯಾನ ಮಾಡುತ್ತಿರುವ ಯೋಗ ಭಂಗಿಯ ಎರಡು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಅವರು ಗುಲಾಬಿ ಬಣ್ಣದ ಜಿಮ್ ಉಡುಗೆ ಧರಿಸಿ, ತಮ್ಮ ಬೇಬಿ ಬಂಪ್ ತೋರಿಸಿದ್ದಾರೆ. ಅವರ ಈ ಫೋಟೋಗಳು ವೈರಲ್ ಆಗುತ್ತಿದ್ದು,  ಕರೀನಾ ಇದರಲ್ಲಿ ಬಹಳ ಸುಂದರವಾಗಿ ಕಾಣುತ್ತಿರುವುದನ್ನು ನೋಡಬಹುದು.

ಫೋಟೋ ನೋಡಿದರೆ ಗರ್ಭಿಣಿಯ ಹೊಳಪು ಕರೀನಾ ಮುಖದ ಮೇಲೆ ಗೋಚರಿಸುತ್ತದೆ. ಇದಕ್ಕೂ ಮುನ್ನ ಅನುಷ್ಕಾ ಯೋಗ ಮಾಡುತ್ತಿರುವ ಕೆಲವು ಫೋಟೋಗಳು ವೈರಲ್ ಆಗಿದ್ದವು.   ಇತ್ತೀಚಿನ ದಿನಗಳಲ್ಲಿ ಕರೀನಾ ಅವರ ಬೇಬಿ ಬಂಪ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಹೆಚ್ಚು ವೈರಲ್ ಆಗುತ್ತಿವೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...