ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ‌ ಟೆಲಿಕಾಂ ಕಂಪನಿಗಳು‌..!

Date:

ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ‌ ಟೆಲಿಕಾಂ ಕಂಪನಿಗಳು‌..!

ಕೊರೋನಾ ಎಂಬ ಹೆಮ್ಮಾರಿ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ದೇಶ ಲಾಕ್ ಡೌನ್ ಮೊರೆ ಹೋಗಿದೆ . ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ . ಜನ ಲಾಕ್ ಡೌನ್ ನಿಂದ ಮನೆಯಿಂದ ಹೊರ ಬರಲಾಗದೆ ಇದ್ದಾರೆ . ಈ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲವಾಗಲೆಂದು ಏರ್ ಟೆಲ್ , ಬಿ ಎಸ್ ಎನ್ ಎಲ್ , ವೊಡಾಫೋನ್ , ಐಡಿಯಾ ಹಾಗೂ ರಿಲಯನ್ಸ್ ಜಿಯೋ ನಾನಾ ರೀತಿಯ ವಿಶೇಷ ಯೋಜನೆಗಳನ್ನು ಪ್ರಕಟಿಸಿವೆ .
ಉಚಿತ ಟಾಕ್ ಟೈಮ್, ವ್ಯಾಲಿಡಿಟಿ ವಿಸ್ತರಣೆ , ಎಸ್ ಎಂ ಎಸ್ , ಡೇಟಾ‌ ಪ್ಯಾಕ್ ಪರಿಷ್ಕರಣೆ , ಹೆಚ್ಚುವರಿ ಕೊಡುಗೆಗಳನ್ನು ನೀಡುವತ್ತಿವೆ . ಆ ಎಲ್ಲದರ ಬಗ್ಗೆ ಇಲ್ಲಿದೆ ಡೀಟೆಲ್ಸ್ .

​10 ರೂಪಾಯಿ ಕ್ರೆಡಿಟ್ :
ದೇಶದ 8 ಕೋಟಿ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಏರ್ ಟೆಲ್ ತಲಾ 10 ರೂಪಾಯಿ ಕ್ರೆಡಿಟ್ ಅನ್ನು ನೀಡಲಿದೆ. ಇದರಿಂದ ಮುಖ್ಯ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೂ, ತುರ್ತು ಸಂದರ್ಭದಲ್ಲಿ ಏರ್‌ಟೆಲ್ ಕೊಡುಗೆ ನೀಡಿರುವ ಹಣವನ್ನು ಬಳಸಿಕೊಂಡು, ಕರೆ ಮಾಡಬಹುದು. ಎಸ್‌ ಎಂ ಎಸ್ ಕಳುಹಿಸಬಹುದು.
ಅಲ್ಲದೆ ಏರ್‌ ಟೆಲ್ ಪ್ರಿಪೇಯ್ಡ್ ಗ್ರಾಹಕರ ವ್ಯಾಲಿಡಿಟಿ ಮುಗಿಯುತ್ತಿದ್ದಲ್ಲಿ , ಯಾವುದೇ ಹೆಚ್ಚುವರಿ ರಿಚಾರ್ಚ್ ಮಾಡದೆಯೇ 2020 ರ ಏಪ್ರಿಲ್ 17 ರವರೆಗೆ ಇನ್‌ ಕಮಿಂಗ್ ವ್ಯಾಲಿಡಿಟಿಯನ್ನು ವಿಸ್ತರಿಸುತ್ತಿದೆ .

ಏರ್‌ಟೆಲ್ ಪೋಸ್ಟ್‌ಪೇಯ್ಡ್ ಗ್ರಾಹಕರು 100 ರೂ. ಹೆಚ್ಚುವರಿ ಆಡ್ ಆನ್ ಪಾವತಿಸಿದರೆ, 15 ಜಿಬಿ ಡೇಟಾ ಸಿಗಲಿದೆ. ಜತೆಗೆ 200 ರೂ. ಪಾವತಿಸಿದರೆ, 35 ಜಿಬಿ ಡೇಟಾ ದೊರೆಯುತ್ತದೆ.

​ವೊಡಾಫೋನ್ : ಇನ್ನು ವೊಡಾಫೋನ್ ಕೂಡ ಕೊಡುಗೆ ನೀಡಿದೆ. ವೊಡಾಫೋನ್ ಕೊಡುಗೆ ಸದ್ಯ ಆಯ್ದ ನಗರಗಳಲ್ಲಿ ಲಭ್ಯವಿದೆ .
95 ರೂಪಾಯಿ ಪ್ರಿಪೇಯ್ಡ್ ಪ್ಲ್ಯಾನ್ ಆಯ್ಕೆ ಮಾಡಿಕೊಂಡರೆ, ಈ ಮೊದಲು 28 ದಿನಗಳ ವ್ಯಾಲಿಡಿಟಿ ಇರುತ್ತಿತ್ತು . ಈಗ ಆ ವ್ಯಾಲಿಡಿಟಿ 56 ದಿನಗಳಿಗೆ ವಿಸ್ತರಣೆಯಾಗಿದೆ.

​ಟಾಟಾ ಸ್ಕೈ : ಟಾಟಾ ಸ್ಕೈ ಸುಮಾರು 10 ವಿವಿಧ ಇಂಟರಾಕ್ಟಿವ್ ಸೇವೆಗಳನ್ನು ಉಚಿತವಾಗಿ ನೀಡಲು ಮುಂದಾಗಿದೆ . ಎಲ್ಲ ಚಂದಾದಾರರಿಗೆ ಈ ಸೇವೆ ಉಚಿತವಾಗಿ ದೊರೆಯಲಿದೆ ‌ . ಯಾವುದೇ ಪ್ಯಾಕ್ ಹಾಕಿಸಿಕೊಂಡಿದ್ದರೂ, ಈ ಆಫರ್ ಕೊಡುಗೆ ಸಿಗುತ್ತದೆ .
ಲಾಕ್‌ ಡೌನ್ ಅವಧಿಯಲ್ಲಿ ನಿಮ್ಮ ಟಾಟಾ ಸ್ಕೈ ವ್ಯಾಲಿಡಿಟಿ ಮುಗಿಯುತ್ತಿದ್ದು, ರಿಚಾರ್ಜ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದಾದರೆ, ಕ್ರೆಡಿಟ್ ಸಹಾಯ ಪಡೆಯಬಹುದು.

​ಜಿಯೋ : ಜಿಯೋ ಫೋನ್ ಎಲ್ಲಾ ಬಳಕೆದಾರರಿಗೆ ಉಚಿತವಾಗಿ 100 ನಿಮಿಷಗಳ ಕರೆ ಕೊಡುಗೆ ನೀಡಿದೆ . 100 ಎಸ್‌ ಎಂ ಎಸ್ ಲಭ್ಯವಿದೆ. ಈ ಉಚಿತ ಕರೆ ಮಾಡುವ ನಿಮಿಷಗಳು ಮತ್ತು ಉಚಿತ SMS ಮಾಡುವ ಅವಕಾಶವನ್ನು ಏಪ್ರಿಲ್ 17ರ ವರೆಗೆ ನೀಡಿದೆ .

ಇದಲ್ಲದೆ ಎಲ್ಲಾ ಜಿಯೋ ಫೋನ್ ಗ್ರಾಹಕರು ಮಾನ್ಯತೆಯ ಅವಧಿ ಮುಗಿದ ಬಳಿಕವೂ ಇನ್ ಕಮಿಂಗ್ ಕರೆಗಳನ್ನು ಸ್ವೀಕರಿಸಬಹುದಾಗಿದೆ .

​ಬಿ ಎಸ್‌ ಎನ್‌ ಎಲ್ ವ್ಯಾಲಿಡಿಟಿ ವಿಸ್ತರಣೆ

ಬಿಎಸ್‌ಎನ್‌ಎಲ್ ಪ್ರಿಪೇಯ್ಡ್ ಗ್ರಾಹಕರು ಪ್ಲ್ಯಾನ್ ಮತ್ತು ಯಾವುದೇ ಪ್ಯಾಕ್ ವ್ಯಾಲಿಡಿಟಿ ಮುಗಿದಿದ್ದರೂ, ಏ 20ರವರೆಗೆ ಹೆಚ್ಚುವರಿ ವ್ಯಾಲಿಡಿಟಿಯನ್ನು ಒದಗಿಸಲಾಗುತ್ತದೆ.

Share post:

Subscribe

spot_imgspot_img

Popular

More like this
Related

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ ಸೋಂಕು

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ...

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ ತಪ್ಪದೇ ಬಿಡಿ!

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ...

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...