ವೆಂಗ್ ಸರ್ಕಾರ್ ಮಾಡಿರೋ ಆ ರೆಕಾರ್ಡ್ ಸಚಿನ್ ಮುರಿದಿಲ್ಲ ; ಕೊಹ್ಲಿಯಿಂದಲೂ ಇದುವರೆಗೆ ಸಾಧ್ಯವಾಗಿಲ್ಲ …!

0
642

ವಿಶ್ವ ಕ್ರಿಕೆಟನ್ನು ಆಳಿದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ …. ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದಿದ್ದಾರೆ . ಕ್ರಿಕೆಟ್ ದಾಖಲೆ ಪುಸ್ತಕದ ಪ್ರತಿ ಪುಟದಲ್ಲೂ ಒಂದಲ್ಲ ಒಂದು ಸಾಲಲ್ಲಿ ಬಹುಶಃ ಸಚಿನ್ ಹೆಸರು ಕಾಣಬಹುದು . 

ಶತಕಗಳ ಶತಕ ಸಿಡಿಸಿರುವ ಸಚಿನ್ ಅನೇಕ ದಾಖಲೆಗಳನ್ನು ಬರೆದಿದ್ದಾರೆ . ಅಂತರಾಷ್ಟ್ರೀಯ ಕ್ರಿಕೆಟಲ್ಲಿ ಸಚಿನ್ ತೆಂಡೂಲ್ಕರ್ ಕೂಡಿಟ್ಟಿರುವ ರನ್ ಗಳಷ್ಟು ಯಾರೂ ಕೂಡ ಕಲೆಹಾಕಿಲ್ಲ .

ಇನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದ್ದಾರೆ . ಸಚಿನ್ ತೆಂಡೂಲ್ಕರ್ ಸೇರಿದಂತೆ ವಿಶ್ವಕ್ರಿಕೆಟ್ ದಿಗ್ಗಜರ ದಾಖಲೆಗಳನ್ನು ಒಂದೊಂದಾಗಿ ಬ್ರೇಕ್ ಮಾಡುತ್ತಿದ್ದಾರೆ . ಸಚಿನ್ ಸಿಡಿಸಿರುದ ಶತಕಗಳ ಶತಕ, ಕಲೆಹಾಕಿರುವ ದಾಖಲೆ ರನ್ ಗಳು ಸೇರಿದಂತೆ ಇನ್ನೂ ದೊಡ್ಡ ದೊಡ್ಡ ದಾಖಲೆಗಳನ್ನು ವಿರಾಟ್ ಪುಡಿಗಟ್ಟುತ್ತಾರೆ ಎಂಬ ನಿರೀಕ್ಷೆ ಇದೆ . ಈ ಬಗ್ಗೆ ಕ್ರಿಕೆಟ್ ಪಂಡಿತರೂ ಭವಿಷ್ಯ ನುಡಿದಿದ್ದಾರೆ . ಆ ನಿಟ್ಟಿನಲ್ಲಿ ವಿರಾಟ್ ಕೊಹ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ .

ಇಂಥಾ ಸಚಿನ್ ಮತ್ತು ವಿರಾಟ್ ಕೊಹ್ಲಿಯೂ ಮಾಡದ ದಾಖಲೆ ಇದೆ .. ! ಆ ದಾಖಲೆ ಬರೆದವರು ದಿಲೀಪ್ ವೆಂಗ್ ಸರ್ಕಾರ್ ..!

ಹೌದು, ಸಚಿನ್ ಮಾಡದ , ವಿರಾಟ್ ಕೊಹ್ಲಿಯಿಂದ ಇದುವರೆಗೆ ಸಾಧ್ಯವಾಗದ ದಾಖಲೆಯೊಂದು ದಿಲೀಪ್ ವೆಂಗ್ ಸರ್ಕಾರ್ ಹೆಸರಲ್ಲಿದೆ .

ಸಚಿನ್ ಮತ್ತು ಕೊಹ್ಲಿಗಿಂತಲೂ ಮೊದಲೇ ರನ್ ಮಷಿನ್ ಎಂದು ಕರೆಸಿಕೊಂಡಿದ್ದ ದಿಲೀಪ್ ವೆಂಗ್ ಸರ್ಕಾರ್ ಟೀಮ್ ಇಂಡಿಯಾದ ಭರವಸೆ, ನಂಬಿಕಸ್ಥ ಬ್ಯಾಟ್ಸ್ ಮನ್ ಆಗಿದ್ದರು . ಟೀಮ್ ಇಂಡಿಯಾ ಪರವಾಗಿ 116 ಟೆಸ್ಟ್ ಪಂದ್ಯಗಳಲ್ಲಿ 17 ಶತಕ ಸಹಿತ 6868 ರನ್ , 129 ಏಕದಿನ ಪಂದ್ಯಗಳಿಂದ 3508 ರನ್ ಹಾಗೂ ಪ್ರಥಮದರ್ಜೆ ಕ್ರಿಕೆಟಲ್ಲಿ 260 ಪಂದ್ಯಗಳಿಂದ 55 ಶತಕಗಳ ಸಹಿತ 17, 868 ರನ್ ಮಾಡಿರುವ ದಿಲೀಪ್ ವೆಂಗ್ ಸರ್ಕಾರ್ ಸಚಿನ್ ಕೂಡ ಬ್ರೇಕ್ ಮಾಡಲಾಗದ ಒಂದು ದಾಖಲೆ ಬರೆದಿದ್ದಾರೆ . ಸಚಿನ್ ಆ ದಾಖಲೆ ಮುರಿಯದೆ ನಿವೃತ್ತಿ ಕೂಡ ಆಗಿದ್ದಾರೆ . ಸದ್ಯ ರನ್ ಮಷಿನ್ ಎನಿಸಿರುವ ವಿರಾಟ್ ಕೊಹ್ಲಿ ಕೂಡ ಆ ದಾಖಲೆ ಬ್ರೇಕ್ ಮಾಡಿಲ್ಲ .

 

ಹೌದು ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ಶತಕ ಬಾರಿಸುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು . ಆ ಕನಸು ಬಹುತೇಕರಿಗೆ ನನಸಾಗಿಲ್ಲ . ಶತಕಗಳ ಶತಕದ ಸರದಾರ ಸಚಿನ್ ತೆಂಡೂಲ್ಕರ್ ಕೂಡ ಲಾರ್ಡ್ಸ್ ನಲ್ಲಿ ಶತಕ ಸಿಡಿಸಿಲ್ಲ ..! ಆ ಸಾಧನೆಯನ್ನು ದಿಲೀಪ್ ವೆಂಗ್ ಸರ್ಕಾರ್ ಮಾಡಿದ್ದರು .

ಲಾರ್ಡ್ಸ್ ನಲ್ಲಿ ಆಡಿದ ಮೊದನ ಇನ್ನಿಂಗ್ಸ್ ನಲ್ಲಿ ಖಾತೆ ತೆರೆಯದೆ ಪೆವಿಲಿಯನ್ ಸೇರಿದ್ದ ದಿಲೀಪ್ ವೆಂಗ್ ಸರ್ಕಾರ್ , ನಂತರ 1979, 1982 ಮತ್ತು 1986 ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಲಾರ್ಡ್ಸ್ ಅಂಗಳದಲ್ಲಿ ಸೆಂಚುರಿ ಬಾರಿಸಿದ್ದರು . ಕ್ರಿಕೆಟ್ ಕಾಶಿ ಲಾರ್ಡ್ಸ್‌ ನಲ್ಲಿ 3 ಶತಕ ಬಾರಿಸಿದ ಮೊದಲ ವಿದೇಶಿ ಆಟಗಾರ ಎಂಬ ಹೆಗ್ಗಳಿಯೂ ದಿಲೀಪ್ ವೆಂಗ್ ಸರ್ಕಾರ್ ಅವರದ್ದೇ …!

ಮೊದಲೇ ಹೇಳಿದಂತೆ ನೂರು ಶತಕ ಸಿಡಿಸಿರುವ ಸಚಿನ್ ತೆಂಡೂಲ್ಕರ್ ಒಂದೇ ಒಂದು ಶತಕ ಬಾರಿಸಿಲ್ಲ . ಕೊಹ್ಲಿಯಿಂದ ಕೂಡ ಆಗಿಲ್ಲ . ಡಾನ್ ಬ್ರಾಡ್ಮನ್, ಸುನೀಲ್ ಗವಾಸ್ಕರ್ ಕೂಡ ಲಾರ್ಡ್ಸ್ ನಲ್ಲಿ 3 ಸೆಂಚುರಿ ಬಾರಿಸಿಲ್ಲ .

LEAVE A REPLY

Please enter your comment!
Please enter your name here