ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!

0
791

ರಾಹುಲ್ ದ್ರಾವಿಡ್ .. ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಕ್ರಿಕೆಟಿಗ … ! ಭಾರತ ತಂಡಕ್ಕೆ ಆಧಾರವಾಗಿದ್ದ ಹೆಮ್ಮೆಯ ಕನ್ನಡಿಗ … ದ್ರಾವಿಡ್ ಅಂಥಾ ಮತ್ತೊಬ್ಬ ಕ್ಲಾಸ್ ಪ್ಲೇಯರ್ ಅನ್ನು ವಿಶ್ವ ಕ್ರಿಕೆಟ್ ಕಂಡಿಲ್ಲ .. ಕಾಣುವುದು ಕೂಡ ಸಾಧ್ಯವಿಲ್ಲ . ಎಂಥಾ ಸಂದರ್ಭದಲ್ಲಿಯೂ ತಾಳ್ಮೆ ಕಳೆದುಕೊಳ್ಳದೆ ಗಟ್ಟಿಯಾಗಿ ಕ್ರೀಸ್ ನಲ್ಲಿ ನಿಂತು ಎದುರಾಳಿಗಳನ್ನು ಕಾಡುತ್ತಿದ್ದ ದ್ರಾವಿಡ್ ಗೆ ದ್ರಾವಿಡ್ಡೇ ಸಾಟಿ ..

ಇಂಥಾ ದ್ರಾವಿಡ್ ಯುವ ಕ್ರಿಕಟಿಗರಿಗೆ ಸ್ಫೂರ್ತಿ . ದ್ರಾವಿಡ್ ಗರಡಿಯಲ್ಲಿ ಪಳಗಿರುವ ಅನೇಕ ಯುವ ಆಟಗಾರರು ಇಂದು ಭಾರತ ತಂಡದ ಕದ ತಟ್ಟುತ್ತಿದ್ದಾರೆ . ಕೆಲವರು ಈಗಾಗಲೇ ತಂಡ ಕೂಡಿ ಕೊಂಡಿದ್ದಾರೆ‌ .

ದ್ರಾವಿಡ್ ಶಿಷ್ಯರಲ್ಲೊಬ್ಬರು ಟೀಮ್ ಇಂಡಿಯಾದ ಹೊಸ ಬೆಳಕು ಶ್ರೇಯಸ್ ಅಯ್ಯರ್ ..! ನಾಲ್ಕನೇ ಕ್ರಮಾಂಕಕ್ಕೆ ಆಧಾರವಾಗಿ ಧೀರ್ಘಾವಧಿ ಉಳಿಯ ಬಲ್ಲ ಭರವಸೆ ಮೂಡಿಸಿರುವ ಶ್ರೇಯಸ್ ತಾಳ್ಮೆಯ ರಕ್ಷಣಾತ್ಮಕ ಹಾಗೂ ಸಂದರ್ಭಕ್ಕೆ ತಕ್ಕ ಆಟದ ಹಿಂದಿನ ಶಕ್ತಿ ರಾಹುಲ್ ದ್ರಾವಿಡ್ ..!

ಜೆಂಟಲ್ಮೆನ್ ಆಟ ಕ್ರಿಕೆಟ್ ಲೋಕದ ಜೆಂಟಲ್ ಮನ್ ರಾಹುಲ್ ದ್ರಾವಿಡ್ . ರಾಹುಲ್ ತಾಳ್ಮೆ ಮೆಚ್ಚಲೇ ಬೇಕು . ರೋಷಾವೇಷ ಕಾಣಲು ಸಾಧ್ಯವಿರಲಿಲ್ಲ . ಎಂಥಾ ಪರಿಸ್ಥಿತಿಯನ್ನು ಕೂಲ್ ಆಗಿಯೇ ನಿಭಾಯಿಸುವ ದ್ರಾವಿಡ್ , ಯುವ ಕ್ರಿಕೆಟಿಗರ ಕಿವಿ ಹಿಂಡುವ ಶೈಲಿಯೂ ಹಾಗೇ … ಪ್ರೀತಿಯಿಂದ, ತಾಳ್ಮೆಯಿಂದ ಬುದ್ಧಿ ಮಾತು ಹೇಳುತ್ತಾರೆ . ದ್ರಾವಿಡ್ ಅವರಿಂದ ಇಂಥಾ ಕೂಲ್ ವಾರ್ನಿಂಗ್ ಪಡೆದವರಲ್ಲಿ ಶ್ರೇಯಸ್ ಅಯ್ಯರ್ ಕೂಡ ಒಬ್ಬರು .

ಶ್ರೇಯಸ್ ಅಯ್ಯರ್ ರಾಹುಲ್ ದ್ರಾವಿಡ್ ತನಗೆ ಮಾಡಿದ್ದ ಕೂಲ್ ವಾರ್ನಿಂಗ್ ಬಗ್ಗೆ ಮಾತನಾಡಿದ್ದಾರೆ ‌.

” ಅದು ನಾಲ್ಕು ದಿನಗಳ ಪಂದ್ಯ ಮ ಅದೇ ಮೊದಲ ಬಾರಿಗೆ ರಾಹುಲ್ ದ್ರಾವಿಡ್ ನನ್ನ ಪಂದ್ಯವನ್ನು ವೀಕ್ಷಿಸುತ್ತಿದ್ದರು ‌ . ನಾನು ದಿನದಾಟದ ಅಂತಿಮ ವೇಳೆ 30 ರನ್ ಮಾಡಿ ಬ್ಯಾಟಿಂಗ್ ಮಾಡುತ್ತಿದ್ದೆ . ಪಂದ್ಯ ಇನ್ನೇನು ಮುಗಿಯಲಿದೆ ಎನ್ನುವಾಗಲೇ ಕ್ರಿಸ್ ಬಿಟ್ಟು ಮುಂದಕ್ಕೆ ಹೋಗಿ ಸಿಕ್ಸರ್ ಬಾರಿಸಿದೆ . ಸಾಮಾನ್ಯವಾಗಿ ದಿನದಾಟದ ಅಂತಿಮ ಓವರ್ ನಲ್ಲಿ ಯಾವುದೇ ಕಾರಣಕ್ಕು ವಿಕೆಟ್ ನೀಡಲು ಯಾರೂ ಬಯಸಲ್ಲ . ಎಲ್ಲರೂ ರಕ್ಷಣಾತ್ಮಕವಾಗಿ ಆಡುತ್ತಾರೆ .‌ ಆದರೆ ನಾನು ಬೇರೆಯದೇ ಆಲೋಚನೆಯಿಂದ ಮುನ್ನುಗ್ಗಿ ಸಿಕ್ಸರ್ ಬಾರಿಸಿದ್ದೆ . ದಿನದಾಟದ ಅಂತ್ಯದಲ್ಲಿ ಸಿಕ್ಸರ್ ಕಂಡು ಡ್ರೆಸ್ಸಿಂಗ್ ರೂಮಿಂದ ಎಲ್ಲರೂ ಬಂದು ಆಶ್ಚರ್ಯ ವ್ಯಕ್ತಪಡಿಸಿದ್ದರು . ಆದರೆ ನಾನು ಡ್ರೆಸ್ಸಿಂಗ್ ರೂಮಿನತ್ತ ತೆರಳಿದಾಗ ರಾಹುಲ್ ದ್ರಾವಿಡ್ ಮಾತ್ರ ನನ್ನನ್ನು ‘ ಬಾಸ್ ವಾಟ್ ಈಸ್ ದಿಸ್ ‘? ಎಂದು ಪ್ರಶ್ನಿಸಿದ್ದರು ಎಂದು ಶ್ರೇಯಸ್ ಅಯ್ಯರ್ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ .

ದಿನದ ಅಂತಿಮ ಓವರ್ … ನೀನೇನು ಮಾಡಿದ್ದೀಯಾ ಎಂದು ದ್ರಾವಿಡ್ ಯಾಕೆ ಪ್ರಶ್ನಿಸಿದ್ದರು ಎಂಬುದು ಆ ಬಳಿಕ ನನಗೆ ಅರ್ಥವಾಯಿತು ಎಂದಿದ್ದಾರೆ ಅಯ್ಯರ್ .

ಆರಂಭದಲ್ಲೇ ನಾನು ಮಾಡುತ್ತಿದ್ದ ಕೇರ್ ಲೆಸ್ ನನ್ನ ಕೆರಿಯರ್ ಗೆ ಮುಳುವಾಗಲಿದೆ ಎಂದು ರಾಹುಲ್ ದ್ರಾವಿಡ್ ವಿಮರ್ಶಿಸಿದ್ದರು . ಅದು ಮುಂದೆ ನನ್ನ ಆಟದ ಮೇಲೆ ಪರಿಣಾಮ ಬೀರಿತು ಎಂತಲೂ ಶ್ರೇಯಸ್ ಅಯ್ಯರ್ ಸ್ಮರಿಸಿದ್ದಾರೆ .

ಇಂದು ಅಯ್ಯರ್ ಟೀಮ್ ಇಂಡಿಯಾದ ಉದಯೋನ್ಮುಖ ತಾರೆ . ! ಮಧ್ಯಮ ಕ್ರಮಾಂಕದ ಬಲ

LEAVE A REPLY

Please enter your comment!
Please enter your name here