ಹೂಗುಚ್ಚ ನೀಡಲು ಹೋದ ಶಾಸಕ ಎಂ ಪಿ ರೇಣುಕಾಚಾರ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಂದ ಬೈಗುಳ ತಿಂದಿದ್ದಾರೆ. ಬರೀ ಕೋಣ, ಎಮ್ಮೆ ಹತ್ತಿರ ಗುದ್ದಿಸ್ಕೋ ಎಂದು ಯಡಿಯೂರಪ್ಪ ರೇಣುಕಾಚಾರ್ಯ ವಿರುದ್ಧ ಗರಂ ಆದರು.
ಸರಕಾರ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಬಿ ಎಸ್ ಯಡಿಯೂರಪ್ಪ ವಿಧಾನಸೌಧದ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಅದಕ್ಕೂ ಮುನ್ನ ರೇಣುಕಾಚಾರ್ಯ ಹೂಗುಚ್ಚ ನೀಡಲು ಕೊಠಡಿಗೆ ತೆರಳಿದ್ದರು. ಆದರೆ ಅಲ್ಲಿ ಯಡಿಯೂರಪ್ಪನವರಿಗೆ ಹೂಗುಚ್ಚ ನೀಡಲು ಆಗಿರಲಿಲ್ಲ. ಬಳಿಕ ಅವರು ಸುದ್ದಿಗೋಷ್ಠಿ ನಡೆಸಿದಾಗ ರೇಣುಕಾಚಾರ್ಯ ಹೂಗುಚ್ಚ ಕೊಡಲು ಮುಂದಾಗಿದ್ದರು.
ಆಗ ಏನೋ ನೀನು ಮಧ್ಯದಲ್ಲಿ ಬಂದು ಹಿಡ್ಕೊಂಡು ನಿಂತಿದ್ಯಯಲ್ಲೋ, ಕೊಡೋ ಹಾಗಿದ್ದರೆ ಕೊಡೋ. ಅಲ್ಲಿ ಊಟ ಮಾಡ್ತಿದ್ದೆ ತಾನೆ ಮಾಡು ಹೋಗು. ಬರೀ ಕೋಣ, ಎಮ್ಮೆ ಹತ್ರ ಗುದ್ದಿಸ್ಕೋ ಎಂದರು. ಆಗ ಅಲ್ಲಿ ನೆರೆದಿದ್ದವರು ನಕ್ಕಿದ್ದು, ರೇಣುಕಾಚಾರ್ಯ ಮುಜುಗರಕ್ಕೀಡಾದರು.