ಬಸ್ ಬಂದ್ ನಡುವೆ ಬ್ಯಾಂಕ್ ಮುಷ್ಕರವು ನಡೆಯಲಿದೆ..!! ಈ ದಿನಗಳಲ್ಲಿ ಬ್ಯಾಂಕ್ ಇರೋದಿಲ್ಲ..!!
ಈಗಾಗ್ಲೇ 8,9 ತಾರೀಖಿನಂದು ರಾಷ್ಟ್ರವ್ಯಾಪಿ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಬಂದ್ ಗೆ ಕರೆ ನೀಡಲಾಗಿದೆ.. ಈ ದಿನಗಳಲ್ಲಿ ಯಾವುದೇ ಸರ್ಕಾರಿ ಬಸ್ ಗಳು ರಸ್ತೆಗೆ ಇಳಿಯೋದು ಡೌಟ್ ಆಗಿದೆ. ಯಾಕಂದ್ರೆ ರಾಷ್ಟ್ರ ವ್ಯಾಪ್ತಿ ಇದಕ್ಕೆ ಬೆಂಬಲ ಸೂಚಿಸಲಾಗುತ್ತಿದ್ದು ಹೀಗಾಗೆ ಬಂದ್ ಗೆ ನಮ್ಮ ಬೆಂಬಲ ಎಂದಿವೆ ಕಾರ್ಮಿಕ ಸಂಘಟನೆಗಳು..
ಬರೀ ಬಸ್ ಗಳು ಮಾತ್ರವಲ್ಲದೆ ಆಟೋ, ಕ್ಯಾಬ್ ಕೂಡಾ ರಸ್ತೆಗೆ ಇಳಿಯುವುದಿಲ್ಲ.. ಆಸ್ಪತ್ರೆ, ಮೆಡಿಕಲ್ ಸ್ಟೋರ್ , ಆಂಬುಲೆನ್ಸ್ ಹೊರತ ಪಡಿಸಿ ಇನ್ಯಾವುದೆ ಸೌಲಭ್ಯ ಸಿಗುವುದು ಅನುಮಾನವಾಗಿದ್ದು, ದೂರ ಪ್ರಯಾಣ ಮಾಡೋರು ಈ ಬಗ್ಗೆ ಈಗಲೇ ಎಚ್ಚೆತ್ತು, ದಿನಚರಿ ಬದಲಿಸಿಕೊಳ್ಳುವುದು ಉತ್ತಮ..
ಈ ನಡುವೆ ಬ್ಯಾಂಕ್ ಗಳು ಇದೇ 8 & 9 ರಂದು ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಆಲ್ ಇಂಡಿಯಾ ಬ್ಯಾಂಕ್ ನೌಕರರ ಸಂಘ ಹಾಗು ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ ಮುಷ್ಕರ ನಡೆಸುವುದಾಗಿ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಗೆ ಮಾಹಿತಿ ನೀಡಿದ್ದು, ಈ ದಿನಗಳಲ್ಲಿ ಬ್ಯಾಂಕ್ ಮುಷ್ಕರ ಇರಲಿದೆ.. ಹೀಗಾಗೆ ಈ ಬಗ್ಗೆ ಬ್ಯಾಂಕ್ ಗ್ರಾಹಕರು ಮುಂಜಾಗ್ರತಾ ಕ್ರಮವನ್ನ ಕೈಗೊಳ್ಳುವುದು ಉತ್ತಮ..