ಬಹದ್ದೂರ್ ಗಂಡಿನ ನಿಶ್ಚಿತಾರ್ಥಕ್ಕೆ ಸಿದ್ದವಾಗುತ್ತೆ ಅದ್ದೂರಿ ವೇದಿಕೆ..!!
ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಹಾಗೆ ಪ್ರೇರಣಾರ ಎಗೇಂಜ್ಮೆಂಟ್ ಗೆ ಸಕಲ ಸಿದ್ದತೆಗಳು ನಡೆಯುತ್ತಿದೆ.. ಇದೇ ಭಾನುವಾರ ಬನಶಂಕರಿಯ ಎರಡನೇ ಹಂತದಲ್ಲಿರುವ ಪುಣ್ಯಕ್ಷೇತ್ರ ಶ್ರೀಧರ್ಮಗಿರಿ ದೇವಾಲಯದಲ್ಲಿ ನಿಶ್ಚಿತಾರ್ಥ ನಡೆಯಲ್ಲಿದ್ದು, ಕಲಾನಿರ್ದೇಶಕ ಈ ಶುಭ ಕಾರ್ಯಕ್ರಮಕ್ಕೆ ಸೆಟ್ ಅನ್ನ ಸಿದ್ದ ಮಾಡ್ತಿದ್ದಾರೆ.. ತೆಂಗಿನಗರಿ, ಗರಿಗೆ, ಮಾವಿನ ತೋರಣಗಳಿಂದ ಹಸಿರು ವೇದಿಕೆ ಸಿದ್ದವಾಗುತ್ತಿದೆ..
ನಿಶ್ಚಿತಾರ್ಥ ಸಂದರ್ಭದಲ್ಲಿ 50 ಗೋವುಗಳ ಪೂಜೆ, 25 ಪುರೋಹಿತರಿಂದ ವೇದಘೋಷ ಮೊಳಗಲಿದೆ.. ಇದರ ಪೂರ್ತಿ ಸಾರಥ್ಯವನ್ನ ಮಾವ ಅರ್ಜುನ್ ಸರ್ಜಾ ವಹಿಸಿಕೊಂಡಿದ್ದಾರೆ.