ಭಾರತೀಯ ರಂಗಭೂಮಿ ಕಂಡ ಶ್ರೇಷ್ಠ ಬೆಳಕಿನ ತಜ್ಞ, ಬಹುಮುಖ ಪ್ರತಿಭೆಯ ರಂಗಕರ್ಮಿ, ಶ್ರೀ ವಿ. ರಾಮಮೂರ್ತಿ ಅವರ ನಿಧನಕ್ಕೆ ಅರಣ್ಯ,ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತೀವ್ರ ಶೋಕ ಪಡಿಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ಬಹು ಮುಖ್ಯ ರಂಗಕರ್ಮಿ ಎಂದು ಗುರುತಿಸಿಕೊಂಡಿದ್ದವರು ರಾಮಮೂರ್ತಿ. ಅವರು ರಂಗಭೂಮಿಯ ಬೆಳಕಿನ ಸಂಯೋಜನೆ ಗೆ ಹೊಸ ಆಯಾಮ ಕೊಟ್ಟವರು.
ಜೊತೆಗೆ ಅಸಂಖ್ಯಾತ ರಂಗ ಶಿಬಿರಗಳ ಮೂಲಕ ಕನ್ನಡ ರಂಗಭೂಮಿಗೆ ನೂರಾರು ಪ್ರತಿಭಾನ್ವಿತ ಹೊಸ ಕಲಾವಿದರನ್ನು ಕೊಡುಗೆಯಾಗಿ ನೀಡಿದವರು.
ಭಾರತ ಯಾತ್ರಾ ಕೇಂದ್ರ ಹಾಗೂ ಪ್ರಯೋಗರಂಗ ಗಳ ಜೊತೆ ನಿಕಟ ಒಡನಾಟ ಇಟ್ಟುಕೊಂಡಿದ್ದ ರಾಮಮೂರ್ತಿ, ರಂಗಭೂಮಿಯ ಎಲ್ಲಾ ಪ್ರಕಾರಗಳಲ್ಲಿಯೂ ಹಿಡಿತ ಹೊಂದಿದ್ದರು.
ರಂಗಭೂಮಿಯ ಬೆಳಕಿನ ಕಿರಣ ಎಂದೇ ಹೆಸರಾಗಿದ್ದ ರಾಮಮೂರ್ತಿ ಅವರ ನಿಧನದಿಂದ ಕನ್ನಡ ರಂಗಭೂಮಿ ಬಹುದೊಡ್ಡ ನಷ್ಟ ಅನುಭವಿಸಿದೆ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.