ಬಾಯಿಗೆ ಕಹಿ, ಆರೋಗ್ಯಕ್ಕೆ ಸಿಹಿ – ಇದು ಕಹಿಬೇವಿನ ಮಹಿಮೆ.

Date:

ಕಹಿಬೇವು ಎಂದ ತಕ್ಷಣ ಯುಗಾದಿಯ ದಿನ ಬೆಲ್ಲದೊಟ್ಟಿಗೆ ಸಿಗುವ ಕಹಿ ಎಸಳು ನೆನಪಾಗಬಹುದು. ಬಾಯಿಗಿಟ್ಟ ತಕ್ಷಣ ನಾಲಗೆಗೆ ಕಹಿ ತಾಗಿ ಮುಖ ಮುರಿಯುವವರೇ ಹೆಚ್ಚು. ಕಹಿ ಹೆಚ್ಚಿನವರಿಗೆ ಬೇಡದ ರುಚಿ. ಆದರೆ ಕಹಿಬೇವನ್ನು ಸುಮಾರುರು ಕಾಯಿಲೆಗಳಿಗೆ ಮದ್ದಾಗಿ ಬಳಸಬಹುದು ಎಂದು ನಿಮಗೆ ತಿಳಿದಿದೆಯೇ?

1) ಅಸ್ತಮ ಸಮಸ್ಯೆ ಉಳ್ಳವರು ಎರಡು ಹನಿ ಬೇವಿನ ಎಣ್ಣೆಯನ್ನು ಒಂದು ಲೋಟ ನೀರಿಗೆ ಹಾಕಿ ಕುಡಿದರೆ ಅನುಕೂಲಕರವಾಗುತ್ತದೆ.

2) ಮಧುಮೇಹ ಮತ್ತು ಕೊಬ್ಬಿನ ಅಂಶದ ನಿಯಂತ್ರಣಕ್ಕೆ ಕಹಿಬೇವು ಸೊಪ್ಪು ಸಿದ್ಧೌಷಧಿ.

3) ಪ್ರತಿನಿತ್ಯ ಎರಡು, ಮೂರು ಕಹಿಬೇವಿನ ಎಲೆಯನ್ನು ತಿಂದರೆ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ.

ಇಷ್ಟೇ ಅಲ್ಲ, ಕಹಿಬೇವು ಅತ್ಯುತ್ತಮವಾದ ಸೌಂದರ್ಯ ವರ್ಧಕವಾಗಿಯೂ ಕಾರ್ಯ ನಿರ್ವಹಿಸುತ್ತದೆ!

1) ಮುಖದಲ್ಲಾಗುವ ಮೊಡವೆ ನಿವಾರಣೆಗೆ ಹೇಳಿ ಮಾಡಿಸಿದ ಔಷಧಿ :

ಕಹಿಬೇವಿನ ಸೊಪ್ಪು ಮೊಡವೆ ಸಮಸ್ಯೆ ನಿವಾರಿಸುತ್ತದೆ. ಮೊಡವೆ ಇರುವವರು ಕಹಿಬೇವಿನ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಬೇಕು. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡುತ್ತಾ ಬಂದರೆ ಮೊಡವೆ ಮಾಯವಾಗುತ್ತದೆ.

2) ಮುಖದ ಕಾಂತಿ ಹೆಚ್ಚಿಸಲು ಸುಲಭ ಮಾರ್ಗ :

ಕಹಿಬೇವಿನ ಎಲೆಗಳನ್ನು ಸಣ್ಣಗೆ ಅರೆದು ಚಂದನ ಮತ್ತು ಅರಿಶಿನದೊಂದಿಗೆ ಕಲಸಿ ಕುಟ್ಟಿ ಪೇಸ್ಟ್ ತಯಾರಿಸಬೇಕು. ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದರೆ ಮುಖದ ಕಾಂತಿ ದ್ವಿಗುಣಗೊಳ್ಳುವುದು. ಇದರೊಂದಿಗೆ ಕಹಿಬೇವಿನ ಫೇಶಿಯಲ್ ಅಕಾಲಿಕ ಮುಪ್ಪನ್ನು, ಮುಖದ ಮೇಲಿನ ನೆರಿಗೆಗಳನ್ನು ನಿವಾರಿಸುವಲ್ಲಿಯೂ ಸಹಾಯಕ.

3) ತಲೆಹೊಟ್ಟನ್ನು ಹೊಡೆದೋಡಿಸುವ ಕಹಿಬೇವು :

ತಲೆಹೊಟ್ಟಿನ ಸಮಸ್ಯೆಗೆ ಕಹಿಬೇವು ರಾಮಬಾಣ. ತಲೆಹೊಟ್ಟಿನ ಸಮಸ್ಯೆ ಇದ್ದವರು ಕಹಿಬೇವನ್ನು ಪೇಸ್ಟ್ ಮಾಡಿ ತಲೆಗೆ ಹಚ್ಚಿ, ನಂತರ ತಣ್ಣೀರಿನಿಂದ ತಲೆ ಸ್ನಾನ ಮಾಡಬೇಕು. ಹೀಗೆ ಮಾಡುತ್ತಿದ್ದರೆ ಕೂದಲಿನ ಆರೋಗ್ಯಕ್ಕೂ ಒಳ್ಳೆಯದು ಜೊತೆಗೆ ತಲೆಹೊಟ್ಟಿನ ಸಮಸ್ಯೆ ಕೂಡ ದೂರಾಗುತ್ತದೆ.

ಇಷ್ಟು ದಿನ ನೀವು ಕಹಿ ಎಂಬ ಒಂದೇ ಕಾರಣಕ್ಕೆ ಕಹಿಬೇವನ್ನು ದೂರ ಇಟ್ಟಿದ್ದರೆ ಇನ್ನುಮುಂದಾದರೂ ಅದರ ಪ್ರಯೋಜನ ಪಡೆದುಕೊಳ್ಳಲು ಮರೆಯದಿರಿ. ರುಚಿಯಲ್ಲಿ ಕಹಿಯಾದರೇನು, ಆರೋಗ್ಯಕ್ಕೆ ಸಿಹಿ ಎಂಬುದನ್ನು ನೆನಪಿನಲ್ಲಿಡಿ.

ಕಾಳುಮೆಣಸಿನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.?

ಅತಿಯಾದ ಜಂಕ್ ಫುಡ್ ಸೇವನೆಯಿಂದ‌ ಗರ್ಭಧಾರಣೆಗೆ ಡೇಂಜರ್.!

ಇಲ್ಲಿವೆ ನೋಡಿ ಕೋಟಿ ಕೋಟಿ ಬೆಲೆಯ ವಿಶ್ವದ ದುಬಾರಿ ತಿನಿಸುಗಳು..!

‘ವೆಜ್ ಚಿಕನ್’ …ಇದು ನಾನ್ ವೆಜಿಟೇರಿಯನ್ ಗಳಿಗಂತೆ..!

ಟೆನ್ಷನ್, ತಲೆನೋವು, ಒತ್ತಡವನ್ನು ಕಡಿಮೆ ಮಾಡಲು ಈ ಟಿಪ್ಸ್ ಅನುಸರಿಸಿ

ಬಾಯಿ ದುರ್ವಾಸನೆಗೆ ಮನೆ ಮದ್ದು

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...