ಮಿಸ್ ಕಾಲ್ ಕೊಟ್ಟವ್ಳು, ಆಮೇಲೆ ಏನಂದ್ಲು?

0
300

ಜೀವಕ್ಕೆ ಜ್ವರ ಆಗಾಗ ಬರೊದು ಕಾಮನ್ನು. ಅದರಲ್ಲೂ ಕೂಡ ಎರಡು ದಿನ ಸುಧಾರಿಸಿಕೊಂಡು ಮೂರನೇ ದಿನಕ್ಕೆ ಆರಾಮಾಗಿಬಿಡ್ತೀವಿ. ಯಾಕಂದ್ರೆ ಅದಕ್ಕೆ ಸರಿಯಾದ ಮದ್ದು ಕೊಟ್ಟು ಆರೈಕೆ ಮಾಡೋಕೆ ಅಂತಾನೇ ಡಾಕ್ಟರ್ ಇದ್ದಾರೆ.
ಆದ್ರೆ ಜೀವನಕ್ಕೆ ಜ್ವರ ಬಂದ್ ಬಿಟ್ರೆ? ಜೀವನಕ್ಕೆ ಜ್ವರ ಬರೋದು ಅಂದ್ರೆ ಏನು? ಅದು ಹೇಗೆ? ಅಂತ ಕನ್ಫ್ಯೂಸ್ ಆಯ್ತಾ? ಇದ್ಯಾವ್ದೋ ಫಿಲಾಸಫಿ ಬರಹ ಅನ್ಕೊಂಡ್ರಾ? ಹಂಗೇನಿಲ್ಲ ಸ್ವಾಮಿ.. ಇದು ಒಂಥರಾ ಬೇರೆಯದೇ ಬೇನೆ, ಖಂಡಿತವಾಗಿಯೂ ಕೋರೊನ ಬಗ್ಗೆ ಅಂತೂ ಅಲ್ಲ!

ಒಂದ್ಕಡೆ ಇದ್ಯಾವ್ದೋ ಕಣ್ಣಿಗೆ ಕಾಣಿಸ್ದೆ ಇರೋ ವೈರೆಸ್ಸು ಇಡೀ ಪ್ರಪಂಚವನ್ನೇ ಸ್ತಬ್ಧ ಮಾಡಿದೆ, ಇನ್ನೊಂದ್ ಕಡೆ ಎರಡು ತಿಂಗಳಾದ್ರು ಕಾಲೇಜು ಮುಖ ನೋಡಕ್ಕೆ ಆಗ್ದೆ ಹುಡುಗ್ರು ನೋಡಿದ್ ಇನ್ಸ್ಟಾಗ್ರಾಮ್ ಸ್ಟೋರಿಯನ್ನೇ ಎರಡೆರಡು ಸಲ ನೋಡ್ಕೊಂಡ್ ಕುಂತವ್ರೆ. ಇದೆಲ್ಲಾ ಹಾಳಾಗ್ಲಿ ಅಂತ ಟಿವಿ ಹಾಕಿದ್ರೆ, ಲಾಕ್ ಡೌನ್ ೨.೦, ೩.೦, ಎಣ್ಣೆ ಬಂತು ಅಣ್ಣ ಅಂತ ಸುದ್ದಿ. ಇದುನ್ನೆಲ್ಲಾ ನೋಡಿ, ಕೇಳಿ ನನ್ನ ಜೀವನಕ್ಕೇ ಜ್ವರ ಶುರುವಾಗ್ಬಿಟ್ಟಿದೆ ನೋಡಿ. ಕೊರೊನಾ ಕಾಯಿಲೆ ಥರವೇ ಇದಕ್ಕೇನೂ ಮದ್ದಿಲ್ಲ ಬಿಡೂ ಗುರೂ ಅಂತ ಅಂದುಕೊಳ್ತಾ ಇರ್ಬೇಕಾದ್ರೇನೇ ಇದಕ್ಕೊಂದು ಭರ್ಜರಿ ಟ್ವಿಸ್ಟ್ ಸಿಕ್ತು. ಅದು ಮದ್ಯಕ್ಕಿಂತ ಹೆಚ್ಚು ಕಿಕ್ ಕೊಡೊ ಮದಾನಾರಿ ವಾಯ್ಸು!

ಅವತ್ತು ಎಂದಿನಂತೆ ಬೆಳ್ಳಂಬೆಳಿಗ್ಗೆ ೧೦ ಗಂಟೆಗೆಲ್ಲಾ ಎಚ್ಚರ ಆಗೋಯ್ತು. ವಾಲ್ ಪೇಪರ್ ಅಲ್ಲಿರೋ ದೇವ್ರ್ ಫೋಟೋ ನೋಡಣ ಅಂತ ಮೊಬೈಲ್ ಕೈಗೆ ಎತ್ಕೊಂಡೆ. ಬಟ್ ಅಲ್ಲಿ ಮಿಸ್ ಕಾಲ್ ನೋಟಿಫಿಕೇಶನ್ ಇತ್ತು. ಅದೂ ಒಂದ್ ಹುಡ್ಗಿ‌ ನಂಬರ್ರಿಂದ! ಯಾಕ್ ಕೇಳ್ತೀರ ಆವಾಗ್ ಈ ಜೀವಕ್ಕಾದ ಖುಷಿ. ನನ್ ಮಂಗದ್ ಈ ಮನಸ್ಸಿನ ಒಳಗೆ ಆಗೋ ಖುಷಿನೆಲ್ಲಾ ರೆಕಾರ್ಡ್ ಮಾಡ್ಕೊಂಡು ಮತ್ತೆ ಅನುಭವಿಸೋ ಟೆಕ್ನಾಲಜಿ ಏನಾದ್ರು ಇದ್ದಿದ್ರೆ ಎಷ್ಟು ಚೆನ್ನಾಗಿರೋದು ಅನ್ಸಿಸ್ಬಿಟ್ಟಿತು. ಆ ಖುಷಿನ ಸ್ವಲ್ಪ ಹೊತ್ತು ಎಂಜಾಯ್ ಮಾಡ್ತಾ ಹಂಗೇ ಕಣ್ಮುಚ್ಚಿ ಕೂತಿರ್ಬೇಕಾದ್ರೆ ತಲೆಯಲ್ಲಿ ಏನೇನೋ ಪ್ರಶ್ನೆಗಳು ಶುರುವಾದ್ವು. ಒಂದಕ್ಕಿಂತ ಒಂದು ಖುಷಿ ಕೊಡ್ತಿದ್ವು. ನಂಗೆ ಅಗ್ಲೆ ಗೊತ್ತಾಗಿದ್ದು ಅದೇನೊ ಹೇಳ್ತಾರಲ್ಲಾ ಲವ್ ಅನ್ನೊದು ಒಂತರಾ ಸೆಳೆತ ಅಂತ, ಅದು ಪಕ್ಕಾ ನಿಜ ಅಂತ. ನಾವು ನಮ್ಗೆ ಇಷ್ಟ ಆದವರ ಬಗ್ಗೆ ಎಷ್ಟು ಯೋಚಿಸ್ತೀವೋ ಅವರು ಕೂಡ ನಮ್ಮ ಬಗ್ಗೆ ಅಷ್ಟೇ ಯೋಚನೆ ಮಾಡಿದ್ರೆ ಎಷ್ಟು ಮಜಾ ಅಲ್ವಾ?

ನನ್ನ ವಿಷಯದಲ್ಲೂ ಅದು ವರ್ಕೌಟ್ ಆಗ್ತಿದೆ ಅಂತ‌ ಗೊತ್ತಾಗಿದ್ದೇ ಅವತ್ತು. ನಮ್ ಹುಡ್ಗಿ ನಂಬರ್ರಿಂದ ಬಂದಿರೋ ಮಿಸ್ಡ್ ಕಾಲ್ ನೋಟಿಫಿಕೇಶನ್ ನೋಡಿ! ಅಂತೂ‌ ಇಂತೂ ಹುಡುಗಿ ಈ ಲಾಕ್‌ಡೌನ್ ಟೈಮಲ್ಲಾದ್ರೂ ನನ್ನ ನೆನಪಿಸ್ಕೊಂಡು ಬೆಳ್‌ಬೆಳ್ಗೆ ಕಾಲ್ ಮಾಡೋ ಹಾಗಾಯ್ತಲಾ ಅಂತ ದೇವ್ರಿಗೆ ಎರ್ಡ್ ಎರ್ಡ್ ಸಲ ಕೈ ಮುಗಿದುಬಿಟ್ಟೆ.

ಜಾಸ್ತಿ ತಡ ಮಾಡದೆ ಅದೇ ನಂಬರ್‌ಗೆ ಕಾಲ್ ಬ್ಯಾಕ್ ಮಾಡಿ ಏನೇನ್ ಮಾತಾಡ್ಬೇಕು ಅಂತ ರೆಡಿ ಆಗ್ಬಿಟ್ಟಿದ್ದೆ. ಆ ಕಡೆ ಇಂದ ಅವ್ಳು ತನ್ನ ಸ್ವೀಟ್ ವಾಯ್ಸ್ ಅಲ್ಲಿ ಮೆಲ್ಲಗೆ ಹಲೋ ಅಂದ್ಲು! ನನ್ನ ಈ ಜೀವನಕ್ಕೆ ಹಿಡಿದಿದ್ದ ಜ್ವರಕ್ಕೆ ಆ ಹಲೋ ಅನ್ನೋ ಧ್ವನಿ ಟಾನಿಕ್ ಕೊಟ್ಟಂಗ್ ಆಗಿತ್ತು. ಹೀಗೆ ಮಾತು ಮುಂದುವರಿಸಿ ಅದೂ ಇದೂ ಮಾತಾಡಿ ಏನ್ ಸಮಾಚಾರ, ನಿನ್ ನಂಬರ್ರಿಂದ ಮಿಸ್ಕಾಲ್ ಇತ್ತು ಅಂದೆ. “ಹೌದಾ” ಅಂದ್ಲು. ಪಟಾಯ್ಸಿಕೊಳ್ಳೋಕೆ ಏನಾದ್ರೂ ಲೈನ್ ಬಿಡೋಣ ಅಂದ್ಕೊಂಡೆ. ಅಷ್ಟ್ರಲ್ಲಿ “ಏನಿಲ್ಲ, ಮಿಸ್ ಕಾಲ್, ಮಿಸ್ ಆಗಿ ಬಂತು ಅಷ್ಟೇ. ಮೆಸೇಜ್ ಮಾಡಿದ್ದು ನೋಡ್ಲಿಲ್ವ ಅಂದ್ಬಿಟ್ಳು!”
ಶುರುವಿನಲ್ಲಿ ಟಾನಿಕ್ ಥರ ಅನ್ನಿಸಿದ ಅವಳ ಅದೇ ವಾಯ್ಸು ಈ ಮಾತು ಕೇಳಿದ ಮೇಲೆ ಬಿಸಿನೀರು ಕಿವಿಗ್ ಹಾಕ್ದಂಗ್ ಆಯ್ತು.

ಪ್ರಜ್ವಲ್. ಎನ್.ಆರ್. ಮಂಡ್ಯ

LEAVE A REPLY

Please enter your comment!
Please enter your name here