ಇತ್ತೀಚೆಗಷ್ಟೇ ಪ್ರಧಾನ ಮಂತ್ರಿ ಮೋದಿ ಅವರು ಮತ್ತು ಬಾಲಿವುಡ್ ಸ್ಟಾರ್ ನಟ ಮತ್ತು ನಟಿಯರು ಒಂದೇ ಕಾರ್ಯಕ್ರಮದಲ್ಲಿ ಸೇರಿದ್ದರು. ಹೌದು ಚೇಂಜ್ ವಿತಿನ್ ಎಂಬ ಕಾರ್ಯಕ್ರಮದಲ್ಲಿ ಮೋದಿ ಮತ್ತು ಬಾಲಿವುಡ್ ಸ್ಟಾರ್ಗಳ ಸಂಗಮ ಆಗಿತ್ತು ಹೀಗಾಗಿ ಬಾಲಿವುಡ್ ಸ್ಟಾರ್ ನಟ ಮತ್ತು ನಟಿಯರ ಜೊತೆ ಮೋದಿ ಅವರು ಸೆಲ್ಫಿಗೆ ಪೋಸ್ ನೀಡಿದ್ದರು.
ಇನ್ನು ಇದಾದ ಕೆಲವೇ ದಿನಗಳ ನಂತರ ದಕ್ಷಿಣ ಭಾರತದ ಮಿಕಾ ಸಿಂಗ್ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರೂ ಸಹ ಪ್ರಧಾನಮಂತ್ರಿ ಅವರ ಮನೆಗೆ ಹೋಗಿದ್ದರು. ಹೀಗೆ ಎಸ್ಪಿಬಿ ಅವರು ಮೋದಿ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೆಕ್ಯುರಿಟಿ ಬಳಿಯೇ ಫೋನ್ ಗಳನ್ನು ಕೊಟ್ಟು ಬರುವಂತೆ ಸೂಚಿಸಲಾಯಿತು. ಹೌದು ಈ ವಿಷಯವನ್ನು ಸ್ವತಃ ಎಸ್ಪಿ ಬಾಲಸುಬ್ರಮಣ್ಯಂ ಅವರೇ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸ್ಟಾರ್ಗಳಿಗೆ ಮಾತ್ರ ಸೆಲ್ಫಿ, ನಮ್ಮ ಫೋನ್ಗಳನ್ನು ಸೆಕ್ಯುರಿಟಿ ಬಳಿ ಇಟ್ಟು ಮನೆಯೊಳಗೆ ಕರೆಸಿಕೊಳ್ಳುತ್ತಾರೆ ಎಂದು ಮೋದಿ ಅವರ ವಿರುದ್ಧ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ಗರಂ ಆಗಿದ್ದಾರೆ.