ಕನ್ನಡದ ಸ್ಟಾರ್ ರ್ಯಾಪರ್ ಚಂದನ್ ಶೆಟ್ಟಿ… ಇವ್ರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಬಿಗ್ ಬಾಸ್ ಖ್ಯಾತಿ ಕೂಡ ಇವರ ಬೆನ್ನಿಗಿದೆ. ಈ ಶೆಟ್ರು ಈಗ ಶೋಕಿಲಾಲಾ ಆಗ್ಬುಟ್ಟವ್ರೆ..!
ಚಂದನ್ ಶೆಟ್ಟಿ ಎನ್ನುವ ಹೆಸ್ರು ಕೇಳಿದ್ರೆ ಥಟ್ ಅಂತ ನೆನಪಾಗುವುದು ಮೂರೇ ಮೂರು ಪೆಗ್ಗಿಗೆ ಸಾಂಗ್. ಇದೇ ಹಾಡು ಚಂದನ್ ಶೆಟ್ಟಿ ಅವರಿಗೆ ಸ್ಟಾರ್ ಪಟ್ಟ ತಂದುಕೊಟ್ಟಿದ್ದು. ಡ್ಯಾನ್ಸ್ ಪಬ್ಗಲ್ಲಿ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಇದೇ ಕನ್ನಡದ ಸಾಂಗ್ ಸೌಂಡು ಮಾಡ್ತಿರುವುದು. ಚಂದು ಅವರ ಇದೇ ಹಾಡು ಪಡ್ಡೆ ಹುಡುಗರನ್ನು ಹುಚ್ಚೆದ್ದು ಕುಣಿಸಿದ್ದು. ಕನ್ನಡದಲ್ಲೂ ಇಂಥಾ ರ್ಯಾಪ್ ಮೂಲಕ ಸೌಂಡು ಮಾಡ್ಬಹುದು ಅಂತ ಹೇಳಿಕೊಟ್ಟವರು. ಇದೇ ಚಂದನ್ ಶೆಟ್ಟಿ ಇದೀಗ ಶೋಕಿಲಾಲಾ ಆಗಿದ್ದಾರೆ.
ಹೌದು ಚಂದನ್ ಶೆಟ್ಟಿಯ ಹೊಸ ಹಾಡು ಬರ್ತಿದೆ. ಅದುವೇ ಶೋಕಿಲಾಲಾ. ಬಿಗ್ ಬಾಸ್ ನಿಂದ ಬಂದ ಮೇಲೆ ಫೈರ್ ಮೂಲಕ ಸದ್ದು ಮಾಡಿದ್ದರು. ಈಗ ಶೋಕಿಲಾಲಾ ಮೂಲಕ ಸೌಂಡು ಮಾಡಲಿದ್ದಾರೆ. ಇದೊಂದು ಮ್ಯೂಸಿಕ್ ಆಲ್ಬಂ ನಲ್ಲಿ ಮೆಲೋಡಿ ಇದೆ, ಹಿಪ್ ಹಾಪ್ ಇದೆ. ಬ್ಯೂಟಿಫುಲ್ ಟೋನ್ ಕೂಡ ಇದೆಯಂತೆ.
ಹಾಡಿನ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಶೀಘ್ರದಲ್ಲೇ ರಿಲೀಸ್ ಆಗುತ್ತಿದೆ. ಟಿಪಿಕಲ್ ಮಿಡ್ಲ್ ಕ್ಲಾಸ್ ಹುಡುಗನ ಜೀವನ, ಆ ಜೀವನದಲ್ಲಿ ಶೋಕಿ ಅನ್ನೋದು ಎಷ್ಟು ಮುಖ್ಯ? ಹುಡುಗನೊಬ್ಬ ಬದುಕಿನ ಜಂಜಾಟಕ್ಕೆ ಸಿಲುಕಿ ಪಡುವ ಪಾಡೇ ಈ ಶೋಕಿಲಾಲ ಸಾಂಗ್ ಎಂದು ಹೇಳಲಾಗುತ್ತಿದೆ, ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ.