ಬಿಗ್ ಬಾಸ್ ಗೆಲ್ಲದಿದ್ದರೂ ನವೀನ್ ಕನಸು ನನಸು ಮಾಡಿದ ಕಿಚ್ಚ ಸುದೀಪ್
ನಿನ್ನೆ ನಡೆದ ಬಿಗ್ ಬಾಸ್ ಸೀಸನ್ 6ರ ಫಿನಾಲೆಯಲ್ಲಿ ಗೆದ್ದವರು ಮಾಡ್ರನ್ ರೈತ ಶಶಿಕುಮಾರ್. ಕೊನೆಯ ಕ್ಷಣದಲ್ಲಿ ಬಿಗ್ ಬಾಸ್ ಟ್ರೋಫಿ ಮಿಸ್ ಮಾಡಿಕೊಂಡ ನವೀನ್ ಸಜ್ಜು ರನ್ನರ್ ಅಪ್ ಅದರು. ಬಿಗ್ ಬಾಸ್ ನಿಮಯದಂತೆ ವಿನ್ನರ್ ಗೆ 50 ಲಕ್ಷ ಹಾಗೂ ಬಿಗ್ ಬಾಸ್ ಟ್ರೋಫಿ ನೀಡಲಾಯಿತು.
ಇನ್ನು ಟ್ರೋಫಿ ಮಿಸ್ ಮಾಡಿಕೊಂಡರು ಜನರ ಮನಗೆದ್ದ ನವೀನ್, ಬಿಗ್ ಬಾಸ್ ಗೆದ್ದಿದ್ರೆ ತಮ್ಮದೆ ಸ್ಟುಡಿಯೋ ಮಾಡಬೇಕೆಂಬ ಆಸೆ ಇತ್ತು. ಆದರೆ ಬಿಗ್ ಬಾಸ್ ವಿನ್ ಆಗಲಿಲ್ಲ, ಅಂದ್ರೂ ನವೀನ್ ಅವರ ಕನಸು ಈಡೇರುತ್ತಿದೆ. ಹೌದು, ನವೀನ್ ಕನಸಿಗೆ ನೆರವಾದವರು ಕಿಚ್ಚ ಸುದೀಪ್.
ಕಿಚ್ಚ ಸುದೀಪ್ ವೇದಿಕೆಯಲ್ಲಿಯೇ ನನ್ನ ಕಡೆಯಿಂದ ನಿನಗೆ ಗಿಫ್ಟ್ ಇದೆ ಎಂದವರು ನಂತರ ಸ್ಟುಡಿಯೋ ನಿರ್ಮಾಣಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ, ಇದಕ್ಕೆ ಹಣ ಸಹಾಯ ಮಾಡುವುದಾಗಿ ಹೇಳಿದರು. ಇನ್ನು ಕಳೆದ ಸೀಸನ್ನ ರನ್ನರ್ ಅಪ್ ದಿವಾಕರ್ ಅವರಿಗೂ ಸುದೀಪ್ ಸಹಾಯ ಮಾಡಿದ್ದರು ಹಾಗೆ ಕಾರ್ ಕೂಡ ಗಿಫ್ಟ್ ಮಾಡಿದರು ಕಿಚ್ಚ ಸುದೀಪ್.