ಕೊರೋನಾವೈರಸ್ ಕಾರಣದಿಂದಾಗಿ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಅರ್ಧಕ್ಕೆ ನಿಂತುಹೋಗಿದೆ. ಕೊರೋನಾವೈರಸ್ ಪರಿಸ್ಥಿತಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಬಾರದು ಎಂಬ ತೀರ್ಮಾನವನ್ನು ಕೈಗೊಂಡ ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್ ಕಾರ್ಯಕ್ರಮವನ್ನು ಅರ್ಧಕ್ಕೇ ನಿಲ್ಲಿಸಿದೆ.

ಪ್ರಸ್ತುತ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ದಿವ್ಯ ಸುರೇಶ್ ಎಲ್ಲರ ಗಮನವನ್ನು ಸೆಳೆದಿದ್ದರು. ನೋಡೋಕೆ ಸುಂದರವಾಗಿರುವ ದಿವ್ಯ ಸುರೇಶ್ ಪಡ್ಡೆ ಹುಡುಗರ ಮನಸ್ಸನ್ನು ಗೆದ್ದಿದ್ದಂತೂ ನಿಜ. ಅದರಲ್ಲಿಯೂ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ ನಡುವಿನ ಮಾತುಕತೆ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದ ಹೈಲೈಟ್ ಅಂಶಗಳಲ್ಲಿ ಒಂದು.

ಸದ್ಯ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ದಿವ್ಯಾ ಸುರೇಶ್ ಈ ಹಿಂದೆ ರೌಡಿ ಬೇಬಿ ಎನ್ನುವ ಸಿನಿಮಾವೊಂದರಲ್ಲಿ ಅಭಿನಯಿಸಿದರು. ಆ ಸಿನಿಮಾದ ಹಾಡೊಂದು ಇದೀಗ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ದಿವ್ಯ ಸುರೇಶ್ ಹಾಡಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಹೌದು ನಾ ನೀನಾದರೆ ಎಂಬ ಹಾಡಿನಲ್ಲಿ ದಿವ್ಯಾ ಸುರೇಶ್ ಹಾಟ್ ಆಗಿ ಕಾಣಿಸಿಕೊಂಡಿದ್ದು ದೃಶ್ಯವೊಂದರಲ್ಲಿ ಲಿಪ್ ಲಾಕ್ ಕೂಡ ಮಾಡಿರುವ ರೀತಿಯ ಚಿತ್ರವೊಂದು ಹಾಡಿನಲ್ಲಿದೆ. ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು ದಿವ್ಯಾ ಸುರೇಶ್ ಈ ವಿಷಯದಲ್ಲಿಯೂ ಸಹ ಟ್ರೋಲ್ ಗೆ ಒಳಗಾಗಿದ್ದಾರೆ.






