ಬಿಗ್ ಬಾಸ್ ಮನೆಯಲ್ಲಿದ್ದೇ ರಾಜೀವ್ ಅದೆಂಥಾ ಕೆಲಸ ಮಾಡಿದ್ರು!

Date:

‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದಲ್ಲಿ ಪ್ರಬಲ ಸ್ಪರ್ಧಿಗಳ ಪೈಕಿ ರಾಜೀವ್ ಕೂಡ ಒಬ್ಬರು. ಎಲ್ಲರೂ ಗಮನಿಸಿರುವ ಹಾಗೆ ರಾಜೀವ್ ಕೊಂಚ ಉದ್ದ ತಲೆಗೂದಲನ್ನು ಬಿಟ್ಟಿದ್ದರು. ರಾಜೀವ್ ತಲೆಗೂದಲ ಮೇಲೆ ಎಲ್ಲರ ಕಣ್ಣಿತ್ತು. ಇದೀಗ ಏಕಾಏಕಿ ತಮ್ಮ ತಲೆಗೂದಲಿಗೆ ರಾಜೀವ್ ಕತ್ತರಿ ಹಾಕಿದ್ದಾರೆ.

ಅರವಿಂದ್ ಹಾಗೂ ಮಂಜು ಪಾವಗಡ ಸೇರಿ ರಾಜೀವ್‌ಗೆ ಹೇರ್‌ಕಟ್ ಮಾಡಿದ್ದಾರೆ. ರಾಜೀವ್‌ಗೆ ಹೊಸ ಹೇರ್‌ಸ್ಟೈಲ್ ನೀಡಿದ್ದಾರೆ. ಅಷ್ಟಕ್ಕೂ, ರಾಜೀವ್ ದಿಢೀರ್ ಅಂತ ಹೇರ್‌ಕಟ್ ಮಾಡಿಸಿಕೊಂಡಿದ್ದು ಯಾಕೆ.? ಈ ಪ್ರಶ್ನೆಗೆ ಕಿಚ್ಚ ಸುದೀಪ್ ಮುಂದೆ ರಾಜೀವ್ ಉತ್ತರ ಕೊಟ್ಟಿದ್ದಾರೆ.

”ಒಬ್ಬ ಕ್ಯಾನ್ಸರ್ ಪೇಷೆಂಟ್‌ಗೆ ಕೂದಲು ಕೊಡಬೇಕು ಅಂತ ಅಂದುಕೊಂಡಿದ್ದೆ. ಅದು ನಿಮ್ಮ ಮುಖಾಂತರ ಅವರಿಗೆ ತಲುಪಲಿ. ಎರಡುವರೆ ವರ್ಷದಿಂದ ಕೂದಲು ಬೆಳೆಸಿದ್ದೆ. ಅದು ಅವರಿಗೆ ತಲುಪಿದರೆ ಖುಷಿ ಇರುತ್ತದೆ” ಎಂದು ಸುದೀಪ್‌ಗೆ ರಾಜೀವ್ ಹೇಳಿದರು.

ಕ್ಯಾನ್ಸರ್ ಪೇಷೆಂಟ್‌ಗೆ ತಲೆಗೂದಲು ತಲುಪಿಸುವುದಾಗಿ ಕಿಚ್ಚ ಸುದೀಪ್ ಒಪ್ಪಿಕೊಂಡರು. ರಾಜೀವ್ ಕೈಗೊಂಡ ಈ ಒಳ್ಳೆಯ ನಡೆ ಕಿಚ್ಚ ಸುದೀಪ್‌ಗೆ ಇಷ್ಟವಾಯಿತು. ಇತರೆ ಸ್ಪರ್ಧಿಗಳೂ ರಾಜೀವ್‌ಗೆ ಭೇಷ್ ಎಂದರು.

 

Share post:

Subscribe

spot_imgspot_img

Popular

More like this
Related

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದಲ್ಲಿ...

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಷ್ಟು ತಿಳಿಯಿರಿ

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ...

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ ಸಿನಿಮಾ ಮಾಡುವುದಾಗಿ...

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...