5 ಸಾವಿರ ಗಡಿದಾಟಿದ ಕೊರೊನಾ

Must read

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸ್ಫೋಟಗೊಂಡಿದ್ದು, ಒಂದೇ ದಿನ 5,278 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ರಾಜಧಾನಿಯಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, 3,728 ಜನಕ್ಕೆ ಸೋಂಕು ದೃಢವಾಗಿದೆ.

ಇಂದು ಕೊರೊನಾಗೆ 32 ಜನರು ಮೃತಪಟ್ಟಿದ್ದು, ಸಾವನ್ನಪ್ಪಿದವರ ಸಂಖ್ಯೆ 12,657ಕ್ಕೆ ಏರಿಕೆಯಾಗಿದೆ. 42,483 ಸಕ್ರಿಯ ಪ್ರಕರಣಗಳ ಪೈಕಿ, 345 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ 10,20,434ಕ್ಕೇರಿಕೆಯಾಗಿದೆ.

ಇಂದು 1,856 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಕೋವಿಡ್-19 ಖಚಿತ ಪ್ರಮಾಣ ಶೇ.5.39ಕ್ಕೆ ಏರಿಕೆಯಾಗಿದ್ದು, ಮರಣ ಪ್ರಮಾಣ ಶೇ.0.60ರಷ್ಟು ವೇಗ ಪಡೆದುಕೊಂಡಿರೋದು ಆತಂಕಕ್ಕೆ ಕಾರಣವಾಗಿದೆ. ಇಂದು 97,829 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 22, ಬಳ್ಳಾರಿ 40, ಬೆಳಗಾವಿ 17, ಬೆಂಗಳೂರು ಗ್ರಾಮಾಂತರ 34, ಬೆಂಗಳೂರು ನಗರ 3,728, ಬೀದರ್ 264, ಚಾಮರಾಜನಗರ 30, ಚಿಕ್ಕಬಳ್ಳಾಪುರ 15, ಚಿಕ್ಕಮಗಳೂರು 32, ಚಿತ್ರದುರ್ಗ 27, ದಕ್ಷಿಣ ಕನ್ನಡ 56, ದಾವಣಗೆರೆ 9, ಧಾರವಾಡ 55, ಗದಗ 13, ಹಾಸನ 72, ಹಾವೇರಿ 4, ಕಲಬುರಗಿ 181, ಕೊಡಗು 15, ಕೋಲಾರ 82, ಕೊಪ್ಪಳ 20, ಮಂಡ್ಯ 48, ಮೈಸೂರು 165, ರಾಯಚೂರು 17, ರಾಮನಗರ 16, ಶಿವಮೊಗ್ಗ 24, ತುಮಕೂರು 139, ಉಡುಪಿ 59, ಉತ್ತರ ಕನ್ನಡ 51, ವಿಜಯಪುರ 27 ಮತ್ತು ಯಾದಗಿರಿಯಲ್ಲಿ 17 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

ದೇಶದ ಕೊರೊನಾ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ರೆ, ಕೇರಳ ಎರಡು ಮತ್ತು ಕರ್ನಾಟಕ ಮೂರನೇ ಸ್ಥಾನದಲ್ಲಿದೆ.

- Advertisement -spot_img

More articles

- Advertisement -spot_img

Latest article