ಬಿಗ್ ಬಾಸ್ ಈ ಒಂದು ಕಾರ್ಯಕ್ರಮ ಶುರುವಾದಾಗ ಮೊದಲ ಸೀಸನ್ನಲ್ಲಿಯೇ ಒಂದೊಳ್ಳೆ ಎಂಟರ್ಟೈನ್ಮೆಂಟ್ ಕಾರ್ಯಕ್ರಮ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಮೊದಲ ಸೀಸನ್ ಅತಿ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಸಾಧಿಸಿತ್ತು. ಆ ಸೀಸನ್ ನಲ್ಲಿ ಬಂದ ಕಂಟೆಸ್ಟೆಂಟ್ ಗಳು ಸಹ ಅತ್ಯುತ್ತಮರು ಅದಾದ ನಂತರ ಬಂದ ಒಂದೆರಡು ಸೀಸನ್ ಗಳು ಸಹ ಜನರ ಮೆಚ್ಚುಗೆಗೆ ಪಾತ್ರವಾಗಿದ್ದವು. ಆದರೆ ಕಳೆದ ಕೆಲ ಬಿಗ್ ಬಾಸ್ ಸೀಸನ್ ಯಾಕೋ ತನ್ನ ಗತ್ತು ಗಾಂಭೀರ್ಯವನ್ನು ಕಳೆದುಕೊಂಡಂತೆ ಕಾಣುತ್ತಿದೆ.
ಹೌದು ಈ ಕಾರ್ಯಕ್ರಮವನ್ನು ಕುಟುಂಬಸ್ಥರೆಲ್ಲರೂ ಸಹ ಒಟ್ಟಿಗೆ ಕುಳಿತು ನೋಡುವಂತಹ ಕಾರ್ಯಕ್ರಮ ಎಂದೇ ಭಾವಿಸಲಾಗಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ಬರುವ ಕೆಲ ಸನ್ನಿವೇಶಗಳು ಕುಟುಂಬದವರ ಜೊತೆ ಕುಳಿತು ನೋಡಲು ಮುಜುಗರವನ್ನು ಉಂಟು ಮಾಡುವಂತಹ ಪರಿಸ್ಥಿತಿಯನ್ನು ಸೃಷ್ಟಿಸಿವೆ. ಈ ಸೀಸನ್ ನಲ್ಲಿ ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ಇಬ್ಬರು ಸಹ ಪರಸ್ಪರ ಲಿಪ್ ಕಿಸ್ ಮಾಡುವುದರ ಮುಜುಗರ ನೋಡುಗರಲ್ಲಿ ಮುಜುಗರವನ್ನು ಉಂಟು ಮಾಡಿದ್ದಾರೆ. ಹೌದು ಗಾಯಕ ವಾಸುಕಿ ವೈಭವ್ ಅವರು ಹರೀಶ್ರಾಜ್ ಅವರ ಬಳಿ ದೀಪಿಕಾ ಮತ್ತು ಭೂಮಿ ಇಬ್ಬರು ಸಹ ಕಿಸ್ ಮಾಡುತ್ತಿದ್ದರು ಎಂದು ಹೇಳಲು ಮುಂದಾದಾಗ…
ಆ ವೇಳೆಯೇ ದೀಪಿಕಾ ಅವರ ಬಳಿ ಬಂದ ಭೂಮಿ ಶೆಟ್ಟಿ ಸ್ಥಳದಲ್ಲಿಯೇ ದೀಪಿಕಾ ಅವರಿಗೆ ಲಿಪ್ ಕಿಸ್ ಮಾಡಿದ್ದಾರೆ. ಇನ್ನು ಇದನ್ನು ಕಂಡ ಹರೀಶ್ ರಾಜ್ ಮತ್ತು ವಾಸುಕಿ ವೈಭವ ಅವರು ಇಬ್ಬರು ಸಹ ದಂಗಾಗಿ ಹೋದರು. ಇನ್ನು ಇಷ್ಟಕ್ಕೆ ಸುಮ್ಮನಾಗದ ದೀಪಿಕಾ ಮತ್ತು ಭೂಮಿ ಶೆಟ್ಟಿ ಬೇಕಾದರೆ ನೀವು ಮತ್ತು ಹರೀಶ್ ರಾಜ್ ಇಬ್ಬರೂ ಸಹ ಲಿಪ್ ಲಾಕ್ ಮಾಡಿಕೊಳ್ಳಿ ಎಂದು ವಾಸುಕಿ ವೈಭವ್ ಅವರಿಗೆ ಟಾಂಗ್ ನೀಡಿದ್ದಾರೆ. ಇನ್ನು ಈ ದೃಶ್ಯವನ್ನು ಮನೆಯಲ್ಲಿ ಕುಳಿತು ನೋಡುವಂತಹ ಪ್ರೇಕ್ಷಕರು ಇದೆಲ್ಲ ಯಾವ ಸೀಮೆ ಕಾರ್ಯಕ್ರಮ ಥೂ ಚಾನೆಲ್ ಚೇಂಜ್ ಮಾಡು ಅಂತ ಹೇಳಿದ್ದು ನಿಜ..