ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಈಡಿ, ಐಟಿ, ಸಿಬಿಐ ಸೇರಿದಂತೆ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡಿದೆ ಹಾಗಗಿ ಕೇಂದ್ರ ಸರಕಾರ ಏನೇ ಮಾಡಿದರೂ, ನ್ಯಾಯಾಲಯದ ಮೇಲೆ ಮಾತ್ರ ನಮಗೆ ಬಲವಾದ ವಿಶ್ವಾಸವಿದೆ. ಹೀಗಾಗಿ ಶೀಘ್ರವೇ ಅಣ್ಣ ಡಿ.ಕೆ.ಶಿವಕುಮಾರ್ ಅವರಿಗೆ ಜಾಮೀನು ಸಿಗುವ ಸಾಧ್ಯತೆಗಳಿವೆ ಎಂದು ಡಿ.ಕೆ.ಸುರೇಶ್ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.
ಬಿಜೆಪಿಗೆ ಬನ್ನಿ ಎಂಬ ಆಹ್ವಾನ ನಿರಾಕರಿಸಿದ ಪರಿಣಾಮವಾಗಿಯೇ ನನ್ನ ಅಣ್ಣ ತಿಹಾರ್ ಜೈಲಿನಲ್ಲಿರಬೇಕಾಗಿ ಬಂದಿದೆ ಇದು ಬಿಜೆಪಿ ಯ ಕೈವಾಡ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.