ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಪ್ರಕರಣ ದಾಖಲಾಗಿದೆ. ನೀಲಂಜನ್ ರಾಯ್ ವಿರುದ್ಧ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.
17 ವರ್ಷದ ಬಾಲಕಿ ತನ್ನ ತಂದೆಯ ಜೊತೆ ಹೋಗಿ ಫಲ್ತಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಕ್ಕಳ ರಕ್ಷಣಾ ಆಯೋಗ ಹೇಳುವಂತೆ, ಬಾಲಕಿಯ ದೂರು ದಾಖಲಿಸಿಕೊಂಡು ಆಕೆಯ ಹೇಳಿಕೆ ದಾಖಲು ಮಾಡಲಾಗಿದೆ. ಆದ್ರೆ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲ ಎಂದಿದೆ.
ಇತ್ತ ಬಿಜೆಪಿ ರಾಜ್ಯ ಉಪಾಧ್ಯಕ್ಷ ಜಯಪ್ರಕಾಶ್ ಮಜುಮ್ದಾರ್, ಇದೊಂದು ಸುಳ್ಳು ಪ್ರಕರಣ. ಅಲ್ಲದೆ ಇದರ ಹಿಂದೆ ತೃಣಮೂಲ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಿಸಿದ್ದಾರೆ.