ಹೋರಾಟ ನಮ್ಮ ಉಸಿರು. ಪ್ರತಿಭಟನೆ ಹಕ್ಕು ಕಸಿಯುವ ಅಧಿಕಾರ ಯಾರಿಗೂ ಇಲ್ಲ. ಹೀಗಾಗಿ ಪೊಲೀಸರು ಎಲ್ಲಿ ತಡೆಯುತ್ತಾರೋ ಅಲ್ಲೇ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿ, ರಸ್ತೆ ಬಂದ್ ಮಾಡಿ’ ಎಂದು ಕರೆ ನೀಡಿದರು, ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಬಳಿ ಕೆಪಿಸಿಸಿ ಆಧ್ಯಕ್ಷ ಡಿಕೆ ಶಿವಕುಮಾರ್ ಅವರು ರೈತರನ್ನು ಭೇಟಿ ಮಾಡಿ, ಅವರ ಹೋರಾಟಕ್ಕೆ ಬೆಂಬಲ ನೀಡಿದರು. ಮಾಧ್ಯಮದವರೊಡನೆ ಮಾತನಾಡಿದ ರಾಮಲಿಂಗ ರೆಡ್ಡಿ ಅವರು ಫ್ರೀಡಂ ಪಾರ್ಕ್‌ಗೆ ತೆರಳಿ, ಎಲ್ಲಾ ಮುಖಂಡರು ಸಾಂಕೇತಿಕವಾಗಿ ಪ್ರತಿಭಟನೆ ಮಾಡ್ತೇವೆ
ರೈತರನ್ನ ಬಗ್ಗು ಬಡೆಯೋಕೆ ಕೇಂದ್ರ ಸರ್ಕಾರ ಏನ್ ಮಾಡ್ಬೇಕೋ ಅದೆಲ್ಲವೂ ಮಾಡ್ತೀದೆ ಸುಪ್ರೀಂಕೋರ್ಟ್ ಸ್ಟೇ ಕೊಟ್ಟಿದೆ.. ಆದ್ರೇ ದೇಶದಲ್ಲಿರೋ ಎಲ್ಲಾ ರೈತರ ಬೇಡಿಕೆ ಆ ಕಾಯ್ದೆಯನ್ನ ರದ್ದು ಮಾಡ್ಬೇಕು ಅನ್ನೋದು ದೇಶದಲ್ಲಿ ರೈತರ ಪರವಾಗಿ ಕಾಂಗ್ರೆಸ್ ಇದೆ.
ಆ ನಿಟ್ಟಿನಲ್ಲಿ ಇವತ್ತು ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ ರಾಜ್ಯದಿಂದ ಆರಿಸಿಹೋಗಿರುವ ೨೫ ಜನ ಸಂಸದರು ನಾಮಾಕವಸ್ಥೆ ಬಿಜೆಪಿ ಇರುವಷ್ಟು ದಿನ ಪ್ರಯೋಜನವಿಲ್ಲ ರೈತರ ಪರವಾಗಿ ಕೇಳುವ ಸೌಜನ್ಯನೂ ಇಲ್ಲ, ತಾಖತ್ ಅವರಿಗೆ ಇಲ್ಲ ಎಂದು ರಾಜ್ಯ ಬಿಜೆಪಿ ಸಂಸದರ ವಿರುದ್ದ ರಾಮಲಿಂಗ ರೆಡ್ಡಿ ಕಿಡಿಕಾರಿದ್ದಾರೆ.