ರಿಯಲ್ ಸ್ಟಾರ್ ಉಪೇಂದ್ರ.. ಸಿನಿಮಾಗಳಲ್ಲಿ ಮಾತ್ರವಲ್ಲ.. ರಿಯಲ್ ಲೈಫ್ನಲ್ಲೂ ಎಲ್ಲರಂತಲ್ಲ..! ಉಪ್ಪಿಯ ಆಲೋಚನೆ, ಯೋಚನೆ, ಸಿದ್ಧಾಂತಗಳೇ ಬೇರೆ..! ಎಲ್ಲರೂ ಒಂದು ರೀತಿಯಲ್ಲಿ ಯೋಚನೆ ಮಾಡಿದರೆ, ಉಪೇಂದ್ರ ಯೋಚನೆ ಮಾಡುವುದೇ ಬೇರೆ ರೀತಿ..! ಅದಕ್ಕೇ ಉಪೇಂದ್ರ ಎಲ್ಲರಿಗಿಂತಾ ಭಿನ್ನ.. ವಿಭಿನ್ನ, ತುಂಬಾ ಡಿಫ್ರೆಂಟ್..!
ಸದಾ ಸಮಾ, ಜನರ ಒಳಿತಿಗೆ ತುಡಿಯುವ ಮನಸ್ಸು ಉಪ್ಪಿಯದ್ದು. ಒಬ್ಬ ಸ್ಟಾರ್ ನಟರಾಗಿದ್ದರೂ ಅದ್ಯಾವುದರ ಅಹಂ. ಗತ್ತು ಇಲ್ಲದೆ ಉಪ್ಪಿ ಎಲ್ಲರ ಜೊತೆಗೆ ಸ್ನೇಹಮಯವಾಗಿ ಬೆರೆಯುತ್ತಾರೆ. ಉಪ್ಪಿ ಇದೇ ಗುಣದಿಂದ ಎಲ್ಲರಿಗೂ ಅಚ್ಚು ಮೆಚ್ಚು..!
ರಾಜಕೀಯ ಎನ್ನುವ ಕಾನ್ಸೆಪ್ಟೇ ಬೇಡ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳಾಗಬೇಕು ಎನ್ನುವ ಮಹಾತ್ವಾಕಾಂಕ್ಷೆಯೊಂದಿಗೆ ಉಪ್ಪಿ ಪ್ರಜಾಕೀಯ ಕಾನ್ಸೆಪ್ಟ್ ಜಾರಿಗೆ ತಂದಿದ್ದಾರೆ. ಉತ್ತಮ ಪ್ರಜಾಕೀಯ ಪಕ್ಷ ಎನ್ನುವ ಪಕ್ಷವನ್ನು ಕಟ್ಟಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ರಾಜ್ಯದಲ್ಲಿ ಸದ್ಯದಲ್ಲೇ ಶಿವಾಜಿ ನಗರ, ಕೆ.ಆರ್ ಪುರ, ಮಹಾಲಕ್ಷ್ಮಿ ಲೇಔಟ್,ಯಶವಂತಪುರ, ಕೆ.ಆರ್ ಪೇಟೆ, ಚಿಕ್ಕಾಬಳ್ಳಾಪುರ, ಹೊಸಕೋಟೆ, ಆರ್ ಆರ್ ನಗರ, ಗೋಕಾಕ್, ಕಾಗವಾಡ, ಅಥಣಿ, ಮಸ್ಕಿ, ವಿಜಯನಗರ, ಯಲ್ಲಾಪುರ, ರಾಣೆಬೆನ್ನೂರು, ಹಿರೆಕೇರೂರು, ಹುಣಸೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು. ಈ ಚುನಾವಣೆಗೆ ಉಪ್ಪಿಯ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಸ್ವತಃ ಉಪೇಂದ್ರರವರೇ ಈ ವಿಷಯವನ್ನು ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ನಮ್ಮ ಕರ್ನಾಟಕದಲ್ಲಿ ಸಂಪೂರ್ಣ ಪ್ರಜಾಪ್ರಭುತ್ವ ತರಲು ಈಗಿನ ಸ್ಥಿತಿಯಲ್ಲಿ ಇಷ್ಟು ಸ್ಥಾನ ಸಾಕು, ರಾಜಕೀಯ ಅಳಿಸಲು, ಅಧಿಕಾರ ನಿಮಗೆ ನೀಡಲು, ನೀವು ಹೇಳಿದಂತೆ ಕೇಳುವ 17 ಕಾರ್ಮಿಕರು ಸಿದ್ಧರಾಗುತ್ತೇವೆ, ಪ್ರಜಾಕೀಯ ಅರಳಿಸಲು ನೀವು ಸಿದ್ಧರಾಗುತ್ತೀರಾ? ಎಂದು ಉಪೇಂದ್ರ ಟ್ವೀಟ್ ಮಾಡುವ ಮೂಲಕ ಚುನಾವಣೆಗೆ ರೆಡಿಯಾಗಿರುವುದಾಗಿ ಘೋಷಿಸಿದ್ದಾರೆ.
#upp #prajaakeeya ನಮ್ಮ ಕರ್ನಾಟಕದಲ್ಲಿ ಸಂಪೂರ್ಣ ಪ್ರಜಾಪ್ರಭುತ್ವ ತರಲು ಈಗಿನ ಸ್ಥಿತಿಯಲ್ಲಿ ಇಷ್ಟು ಸ್ಥಾನ ಸಾಕು, ರಾಜಕೀಯ ಅಳಿಸಲು, ಅಧಿಕಾರ ನಿಮಗೆ ನೀಡಲು, ನೀವು ಹೇಳಿದಂತೆ ಕೇಳುವ 17 ಕಾರ್ಮಿಕರು ಸಿದ್ಧರಾಗುತ್ತೇವೆ, ಪ್ರಜಾಕೀಯ ಅರಳಿಸಲು ನೀವು ಸಿದ್ಧರಾಗುತ್ತೀರಾ ?? pic.twitter.com/CTHb10Ex0y
— Upendra (@nimmaupendra) August 1, 2019