ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಒಟ್ಟು 17 ಶಾಸಕರು ಅನರ್ಹಗೊಂಡ ಹಿನ್ನೆಲೆಯಲ್ಲಿ ಬಹುಮತ ಸಾಬೀತಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಹಾದಿ ಸುಗಮವಾಗಿದೆ.17 ಶಾಸಕರು ಅನರ್ಹಗೊಂಡ ಹಿನ್ನೆಲೆಯಲ್ಲಿ ವಿಧಾನಸಭೆ ಬಲಾಬಲ ಬದಲಾಗಿದೆ. 225 ಸಂಖ್ಯಾಬಲದ ವಿಧಾನಸಭೆಯಲ್ಲಿ 17 ಶಾಸಕರು ಅನರ್ಹಗೊಂಡಿದ್ದಾರೆ.
ಈಗ 208 ಸಂಖ್ಯಾಬಲವಿದ್ದು, ಬಹುಮತ ಸಾಬೀತಿಗೆ 105 ಶಾಸಕರ ಬೆಂಬಲ ಬೇಕಿದೆ. ಬಿಜೆಪಿ 105 ಶಾಸಕರಿದ್ದು, ಪಕ್ಷೇತರ ಶಾಸಕ ಬೆಂಬಲದಿಂದ ಬಿಜೆಪಿ ಬಲ 106 ಆಗಲಿದೆ. ತಟಸ್ಥರಾಗುಳಿದ ಬಿ.ಎಸ್.ಪಿ. ಶಾಸಕ ಬೆಂಬಲಿಸಿದಲ್ಲಿ 107 ಸಂಖ್ಯಾಬಲವನ್ನು ಬಿಜೆಪಿ ಹೊಂದಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ 99 ಸಂಖ್ಯಾಬಲ ಹೊಂದಿದ್ದು, ಹಾಗಾಗಿ ಯಡಿಯೂರಪ್ಪ ಹಾದಿ ಸುಗಮವಾಗಿದೆ ಎನ್ನಲಾಗಿದೆ.