ಬಿಡುಗಡೆಗೊಂಡ ಕೆಲವೇ ನಿಮಿಷಗಳಲ್ಲಿ ಧೂಳ್ ಎಬ್ಬಿಸಿದ ದರ್ಶನ್ ‘ಯಜಮಾನ’ ನ ಶಿವನಂದಿ ಸಾಂಗ್.. ವಿಡಿಯೋ ನೋಡಿ…
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಖತ್ ಗಿಫ್ಟ್ ನೀಡಿದ್ದಾರೆ.. ಅದು ಯಜಮಾನ ಸಿನಿಮಾದ ಶಿವನಂದಿ ಸಾಂಗ್.. ಹೌದು ಇಂದು 11 ಗಂಟೆ ಸುಮಾರಿಗೆ ಬಿಡುಗಡೆಗೊಂಡ ಶಿವನಂದಿ ಹಾಡು ಕೇವಲ 20 ನಿಮಿಷಗಳ ಅಂತರದಲ್ಲಿ 2,50,000 + ವೀಕ್ಷಣೆಗೆ ಒಳಪಟ್ಟಿದೆ..
ಚೇತನ್ ಕುಮಾರ್ ಲಿರಿಕ್ಸ್ ಬರೆದಿರುವ ಶಿವನಂದಿ ಹಾಡಿಗೆ ವಿ.ಹರಿಕೃಷ್ಣ ಮ್ಯೂಸಿಕ್ ಸಖತ್ತಾಗೆ ವರ್ಕ್ಔಟ್ ಆಗಿದೆ.. ಶೈಲಜಾ ನಾಗ್ ಹಾಗು ಬಿ.ಸುರೇಶ್ ನಿರ್ಮಾಣದ ಯಜಮಾನನ ಅಸಲಿ ಹವಾ ಈಗ ಶುರುವಾಗ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ರಂಗೇರಲಿದೆ.. ನಿನ್ನೆಯಷ್ಟೆ ಬಿಡುಗಡೆಗೊಂಡಿದ್ದೆ ಇದೇ ಹಾಡಿಗಾಗಿ ನಂದಿ ಕಾಯುವ ಟೀಸರ್ ಟ್ರೆಂಡಿಂಗೆ ಏರಿತ್ತು..
ಸದ್ಯ ಶಿವನಂದಿ ಸಾಂಗ್ನ ವೀಕ್ಷಣೆ ಇದೇ ವೇಗದಲ್ಲಿ ಮುಂದುವರೆಯಲ್ಲಿದ್ದು ಪಕ್ಕ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಈ ಹಾಡು ರಾರಾಜಿಸಲಿರೋದು ಸತ್ಯವಾಗಿದೆ.. ಈ ಹಾಡನ್ನ ನೀವು ಒಮ್ಮೆ ಕೇಳಿ..