ಬಿಲ್ವಪತ್ರೆಯಿಂದ ಆರೋಗ್ಯಕ್ಕಿದೆ ನೂರೆಂಟು ಲಾಭ : ಮಧುಮೇಹಕ್ಕೆ ರಾಮಬಾಣವಿದು
ಬಿಲ್ವ ಪತ್ರೆ ಅಥವಾ ಬೇಲ್ ಎಲೆಗಳನ್ನು ಶಿವನಿಗೆ ಅರ್ಪಿಸಲಾಗುತ್ತದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿದೆ. ಆದರೆ ಇದು ಕ್ಯಾಲ್ಸಿಯಂ ಮತ್ತು ಫೈಬರ್ ಜೊತೆಗೆ ವಿಟಮಿನ್ ಎ, ಸಿ, ಬಿ 1 ಮತ್ತು ಬಿ 6 ನಂತಹ ಪೋಷಕಾಂಶಗಳಿಂದ ತುಂಬಿದೆ ಎನ್ನುದು ತಿಳಿದಿರುವುದಿಲ್ಲ. ಈ ಎಲೆಗಳು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ ಮತ್ತು ಅದಕ್ಕಾಗಿಯೇ ನೀವು ಪ್ರತಿದಿನ ಬಿಲ್ವ ಪತ್ರೆಯನ್ನು ಸೇವಿಸಬೇಕು ಎನ್ನಲಾಗುತ್ತದೆ.
ಬಿಲ್ವಪತ್ರೆಯ ಔಷಧಿ ಗುಣಗಳು ಏನೇನು ಗೊತ್ತಾ?
• ಬಿಲ್ವಪತ್ರೆಯ ಎಲೆಗಳನ್ನ ನೀರು ಸೇರಿಸಿ, ಅರೆದು, ಆ ಮಿಶ್ರಣವನ್ನು ಕಣ್ಣುಗಳ ರೆಪ್ಪೆಯ ಮೇಲೆ ಹಚ್ಚುವುದರಿಂದ ದೃಷ್ಟಿ ವೃದ್ಧಿಯಾಗುತ್ತದೆ. ಅಲ್ಲದೆ ಬಿಲ್ವಪತ್ರೆಯನ್ನು ರಾತ್ರೆ ನೀರಿನಲ್ಲಿ ನಿನಸಿಟ್ಟು ಬೆಳಿಗ್ಗೆ ಅದರಿಂದ ಕಣ್ಣನ್ನು ತೊಳೆಯುವುದರಿಂದ ಕಣ್ಣಿನ ಉರಿ, ಕಣ್ಣಿನ ತುರಿಕೆಗಳಿಂದ ಕಣ್ಣಿನ ರಕ್ಷಣೆ ಮಾಡುತ್ತದೆ.
• ಬಿಲ್ವಪತ್ರೆಯು ಕಿವುಡುತನವನ್ನು ಹೋಗಲಾಡಿಸುತ್ತದೆ. ಬಿಲ್ವಪತ್ರೆ ಎಲೆಯ ಎಣ್ಣೆಯನ್ನು ತಯಾರಿಸಿ, 3 ರಿಂದ 4 ಡ್ರಾಪ್ ಎಣ್ಣೆಯನ್ನು ಕಿವಿಗೆ ಬಿಡುವುದರಿಂದ ಕಿವುಡುತನ ಕಡಿಮೆಯಾಗುತ್ತದೆ.
• ಬೇವಿನ ಮರದ ಚಕ್ಕೆ ಮತ್ತು ಬಿಲ್ವಪತ್ರೆಯ ಮರದ ಚಕ್ಕೆ ಎರಡನ್ನೂ ಸಮ ಪ್ರಮಾಣದಲ್ಲಿ ಜಜ್ಜಿ, ಕಷಾಯ ಮಾಡಿ, ಹಾಲಿನೊಂದಿಗೆ ಕುಡಿದರೆ, ಹುಳಿ ತೇಗು, ಪಿತ್ತ, ಹೊಟ್ಟೆ ನೋವು, ಹೊಟ್ಟೆ ಉಬ್ಬರ ಕಡಿಮೆಯಾಗುತ್ತವೆ.
• ದೇಹದ ದುರ್ಗಂಧವನ್ನು ನಿವಾರಿಸಲು, ಬಿಲ್ವಪತ್ರೆಯ ಎಲೆಯ ರಸವನ್ನು, ಪ್ರತಿ ದಿನ ಮೈ ಗೆ ಹಚ್ಚಿಕೊಂಡು, ಅರ್ಧ ಘಂಟೆಯ ನಂತರ ಬಿಟ್ಟು ಸ್ನಾನ ಮಾಡುವುದರಿಂದ, ದೇಹದ ದುರ್ಗಂಧವನ್ನು ತಡೆಗಟ್ಟಬಹುದು.
• ಬಿಲ್ವಪತ್ರೆಯ ಎಲೆಗಳನ್ನು ಬಿಸಿ ನೀರಿಗೆ ಹಾಕಿ, ಸ್ನಾನ ಮಾಡುವುದರಿಂದ ಚರ್ಮದ ಮೇಲಾಗುವಂತಹ ಕಜ್ಜಿ, ತುರಿಕೆಗಳನ್ನ ಕಡಿಮೆ ಮಾಡಬಹುದು.
• ದೇಹದ ಮೇಲೆ ಕುರುಗಳು ಎದ್ದಾಗ ಅತೀವ ನೋವುಂಟಾಗಿ, ತುಂಬಾ ಕಿರಿ ಕಿರಿ ಉಂಟಾಗುತ್ತದೆ. ಕೆಲವರಿಗೆ ಈ ಸಮಸ್ಯೆ ಪದೇ ಪದೇ ಎದುರಾಗುತ್ತದೆ. ಈ ತೊಂದರೆಯನ್ನು ಬಿಲ್ವಪತ್ರೆಯ ಉಪಯೋಗದಿಂದ ತಡೆಗಟ್ಟಬಹುದು. ಬಿಲ್ವಪತ್ರೆಯ ಮರದ ಬೇರನ್ನು, ನಿಂಬೆ ರಸದಲ್ಲಿ ತೇಯ್ದು, ಕುರುಗಳಿಗೆ ಹಚ್ಚುವುದರಿಂದ ಕ್ರಮೇಣವಾಗಿ ಕುರುಗಳು ಕಡಿಮೆಯಾಗುತ್ತದೆ. ತಲೆನೋವು ಸಮಸ್ಯೆ ಇದ್ದರೆ, ಬಿಲ್ವ ಪತ್ರೆಯ ಮರದ ಬೇರನ್ನು ಒಣಗಿಸಿ, ತೇಯ್ದು, ಹಣೆಗೆ ಹಚ್ಚುವುದರಿಂದ ತಲೆನೋವು ಕಡಿಮೆಯಾಗುತ್ತದೆ.
• ನಿದ್ರಾಹೀನತೆಯಿಂದ ಬಳಲುತ್ತಿದ್ದವರಿಗೆ ಹೀಗೆ ಮಾಡುವುದರಿಂದ, ನಿದ್ರೆ ಕೂಡ ಚೆನ್ನಾಗಿ ಬರುತ್ತದೆ. ಪ್ರತಿ ದಿನ ಬಿಲ್ವಪತ್ರೆಯ ರಸವನ್ನು 2 ರಿಂದ 3 ಚಮಚ ಸೇವಿಸುತ್ತಿದ್ದರೆ ನಿಶ್ಯಕ್ತಿ ದೂರವಾಗುತ್ತದೆ.
• ಪ್ರತಿದಿನ ಬಿಲ್ವಪತ್ರೆಯ ಕಷಾಯ ಮಾಡಿ, ಕುಡಿಯುವುದರಿಂದ ಮಾನಸಿಕ ಒತ್ತಡಗಳು, ಮಾನಸಿಕ ಉದ್ವೇಗ ನಿವಾರಣೆಯಾಗಿ ಮನಸ್ಸಿಗೆ ಶಾಂತಿ ಸಿಗುತ್ತದೆ. ಬಾಯಿಯಲ್ಲಿ ಹುಣ್ಣಾದಾಗ, ಬಿಲ್ವಪತ್ರೆಯ ಹಣ್ಣಿನ ತಿರುಳಿಗೆ ಸ್ವಲ್ಪ ಬೆಲ್ಲ ಸೇರಿಸಿ, ದಿನದಲ್ಲಿ 2 ಬಾರಿ ಸೇವಿಸುವುದರಿಂದ, ಬಾಯಿಯ ಹುಣ್ಣು ಕಡಿಮೆಯಾಗುತ್ತದೆ.